Home namma chikmagalur chikamagalur ತಾಕತ್ತಿದ್ದರೆ ಸಿ.ಟಿ. ರವಿಯನ್ನು ತಡೆಯಿರಿ
chikamagalurHomeLatest Newsnamma chikmagalur

ತಾಕತ್ತಿದ್ದರೆ ಸಿ.ಟಿ. ರವಿಯನ್ನು ತಡೆಯಿರಿ

Share
oplus_161480704
Share

 

ಚಿಕ್ಕಮಗಳೂರು, ಜು.30: ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಸಿ.ಟಿ. ರವಿ ಅವರು ಯಾವುದೇ ಮುಸ್ಲಿಮರ ವಿರುದ್ಧ ಮಾತನಾಡಿಲ್ಲ. ದೇಶ ವಿರೋಧಿ ಹಾಗೂ ದುಷ್ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಮಾತ್ರ ಧ್ವನಿ ಎತ್ತಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ.ಎನ್. ವಿಜಯಕುಮಾರ್ ಗುಣಸಾಗರ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿ.ಟಿ. ರವಿ ಅವರು ಹುಟ್ಟಿ ಬೆಳೆದಿರುವುದು ಚಿಕ್ಕಮಗಳೂರು ನೆಲದಲ್ಲೇ ಹೊರತು ಪಾಕಿಸ್ತಾನದಲ್ಲಲ್ಲ. ಈ ವಿಚಾರವನ್ನು ಎಸ್‌ಡಿಪಿಐ ಕಾರ್ಯಕರ್ತರು ಮೊದಲು ಅರಿತುಕೊಳ್ಳಬೇಕು” ಎಂದು ಹೇಳಿದರು.

ಎಸ್‌ಡಿಪಿಐ ನಾಯಕರು ನಗರಕ್ಕೆ ಬರಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ ಬಳಿಕ, ರವಿ ಅವರು ಬುಧವಾರ ರಾಜಾರೋಷವಾಗಿ ಚಿಕ್ಕಮಗಳೂರಿಗೆ ಆಗಮಿಸಿ ನಗರದಲ್ಲೇ ಸಂಚರಿಸಿದ್ದಾರೆ. ಆ ವೇಳೆ ಅವರನ್ನು ತಡೆಯುವುದಾಗಿ ಹೇಳಿದವರು ಎಲ್ಲಿದ್ದರು? “ನಿಮಗೆ ತಾಕತ್ತಿದ್ದರೆ ನಮ್ಮ ನಾಯಕರನ್ನು ತಡೆಯಿರಿ” ಎಂದು ಸವಾಲು ಹಾಕಿದರು.

ಸಿ.ಟಿ. ರವಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಸಮುದಾಯದ ವಿರುದ್ಧ ಮಾತನಾಡಿಲ್ಲ. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ಮಾತ್ರ ಮಾತನಾಡಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡವರಂತೆ ಎಸ್‌ಡಿಪಿಐ ವರ್ತಿಸುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣ ಹಾಗೂ ಪಹಲ್ಗಾಮ್ ಘಟನೆಯಲ್ಲಿ ಹಿಂದೂಗಳ ಹತ್ಯೆ ಸೇರಿದಂತೆ ದೇಶ ವಿರೋಧಿ ಕೃತ್ಯಗಳನ್ನು ಎಸ್‌ಡಿಪಿಐ ಸಮರ್ಥಿಸುತ್ತದೆಯೇ? ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಡಾ. ಸಿ.ಟಿ. ರವಿ ಅವರು “ದೇಶದಲ್ಲಿ ಸಮ್ಮಿಶ್ರ ಸರ್ಕಾರಗಳು ಮತ್ತು ಸವಾಲುಗಳು” ಎಂಬ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದು, ಅಂತಹ ನಾಯಕರ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದು ಖಂಡನೀಯ ಎಂದು ಹೇಳಿದರು.

ಕಾಂಗ್ರೆಸ್‌ನ ಕೆಲ ಮುಖಂಡರು ಪಕ್ಷದಲ್ಲಿ ತಮ್ಮ ಅಸ್ತಿತ್ವ ತೋರಿಸಿಕೊಳ್ಳುವ ಉದ್ದೇಶದಿಂದ ಆಗಾಗ ಸಿ.ಟಿ. ರವಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸೀತಾರಾಮ ಭರಣ್ಯ, ಪ್ರಕಾಶ್, ಲೀಲಾ ಹಾಗೂ ರಾಜೀವ್ ಉಪಸ್ಥಿತರಿದ್ದರು.

Stop C.T. Ravi if you can.

Share

Leave a comment

Leave a Reply

Your email address will not be published. Required fields are marked *

Don't Miss

ಕೇಂದ್ರ ಶಿಕ್ಷಣ ಸಚಿವರ ವಜಾಕ್ಕೆ ಆಗ್ರಹಿಸಿ ಸಿಪಿಐ(ಎಂ.ಎಲ್)ರೆಡ್‌ಸ್ಟಾರ್ ಪ್ರತಿಭಟನೆ

ಚಿಕ್ಕಮಗಳೂರು: ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆದ ಪ್ರಹಾರವನ್ನು ಖಂಡಿಸಿರುವ ಸಿಪಿಐ(ಎಂ.ಎಲ್)ರೆಡ್‌ಸ್ಟಾರ್ ಪಕ್ಷವು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಕೇಂದ್ರದ ಶಿಕ್ಷಣ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ...

ಕಾಫಿ ತೋಟದ ಮಾಲೀಕ ಹಾರಿಸಿದ ಗುಂಡೇಟಿನಿಂದ ಬಾಲಕನಿಗೆ ಗಾಯ

ಮೂಡಿಗೆರೆ: ಕೂಲಿ ಹಣದ ವಿಚಾರವಾಗಿ ಕಾಫಿ ತೋಟದ ಮಾಲೀಕ ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದಾಗ, ತೋಟದ ಮಾಲೀಕ ಹಾರಿಸಿದ ಗುಂಡು 4 ವರ್ಷದ ಬಾಲಕನ ತಲೆಗೆ ತಾಗಿದ ಘಟನೆ...

Related Articles

ಜಲಯೋಗ ಸಾಧನೆಯಲ್ಲಿ ವಕೀಲ ವಿ.ಕೆ.ರಘು ವಿಶ್ವ ದಾಖಲೆ

ಚಿಕ್ಕಮಗಳೂರು: ನಗರದ ವಕೀಲ ವಿ.ಕೆ.ರಘು ಅವರು ಜಲಯೋಗ ಸಾಧನೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿಯ...

ಬ್ಯಾಂಕ್ ಸಾಲದಿಂದ ಮುಕ್ತಿ ಹೊಂದಲು ಕ್ಯಾನ್ ಅದಾಲತ್

ಚಿಕ್ಕಮಗಳೂರು: ಬ್ಯಾಂಕ್ ಸುಸ್ತಿದಾರ ಬೆಳೆಗಾರರ ಅನುಕೂಲಕ್ಕಾಗಿ ಕೆನರಾ ಬ್ಯಾಂಕ್ ಕಾಫಿ ಬೆಳೆಯುವ ಜಿಲ್ಲೆಗಳ ಆಯ್ದ ಕೆಲವು...

ರಾಜ್ಯ ಮಟ್ಟದ ಕಬಡ್ಡಿಯಲ್ಲಿ ಚಿಕ್ಕಮಗಳೂರು ಮಹಿಳಾ ತಂಡಕ್ಕೆ ಚಾಂಪಿಯನ್ ಪಟ್ಟ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ಜುಲೈ 27ರಿಂದ...

ಅಂಚೆ ಮತ ಮರು ಎಣಿಕೆ ಯಥಾಸ್ಥಿತಿ ಮುಂದುವರಿಸಲು ಸೂಚನೆ

ಶೃಂಗೇರಿ: ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಥಾಸ್ಥಿತಿ ಮುಂದುವರಿಸಲು ಸೂಚನೆ...