Home namma chikmagalur chikamagalur ರೈತರು-ಹೋರಿಗಳಿಗೂ ಅವಿನಾಭಾವ ಸಂಬಂಧ
chikamagalurHomeLatest Newsnamma chikmagalur

ರೈತರು-ಹೋರಿಗಳಿಗೂ ಅವಿನಾಭಾವ ಸಂಬಂಧ

Share
Share

ಚಿಕ್ಕಮಗಳೂರು:  ರೈತನಿಗೂ ಹಾಗೂ ಹೋರಿಗಳಿಗೂ ಅವಿನಾವಭಾವ ಸಂಬಂಧವಿದೆ. ಜೋಡೆತ್ತಿನ ಓಟದ ಸ್ಪರ್ಧೆ ರೈತರಿಗೆ ಮನರಂಜನೆ ಜೊತೆಗೆ ಕ್ರೀಡಾಸ್ಪೂರ್ತಿ ನೀಡುತ್ತಿದ್ದು ಯುವಜನತೆ ಹೆಚ್ಚು ಗ್ರಾಮೀಣ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್ ಹೇಳಿದರು.

ನಗರದ ಕೋಟೆ ಸಮೀಪ ಮಿನಿ ವಿಮಾನ ಮೈದಾನದಲ್ಲಿ ಶ್ರೀ ಕೊಲ್ಲಾಪುರದಮ್ಮನವರ ಜಾತ್ರಾ ಮ ಹೋತ್ಸವ ಪ್ರಯುಕ್ತ ಭಾನುವಾರ ಆಯೋಜಿಸಿದ್ಧ ಅಂತರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದೈನಂದಿನವು ಕೃಷಿ ಚಟುವಟಿಕೆ ಕೆಲಸಗಳಲ್ಲಿ ನಿರತರಾಗುವ ರೈತರಿಗೆ ಜೋಡೆತ್ತಿನ ಗಾಡಿ ಕ್ರೀಡಾಕೂಟ ಗಳು ಸಹಕಾರಿ. ಅಲ್ಲದೇ ರಾಸುಗಳು ಮತ್ತು ರೈತನ ನಡುವೆ ಬಾಂಧವ್ಯ ವೃದ್ದಿಸಲು ಈ ಕ್ರೀಡೆ ಸ್ಪೂರ್ತಿಯಾ ಗಿದ್ದು ಹೆಚ್ಚಿನ ಗ್ರಾಮೀಣ ಪ್ರದೇಶದ ಯುವಜನತೆ ಭಾಗಿಯಾಗುವುದು ಒಳ್ಳೆಯ ಬೆಳವಣಿಗೆ ಎಂದರು.

ಎತ್ತಿನಗಾಡಿ ಸ್ಪರ್ಧೆ ನಮ್ಮ ನೆಲದ ಗ್ರಾಮೀನ ಸೊಗಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಪೂರ್ವಿ ಕರ ಕಾಲದಿಂದಲೂ ಉತ್ತಮ ರಾಸುಗಳನ್ನು ರೈತರು ಪ್ರೀತಿಯಿಂದ ಸಾಕುತ್ತಿದ್ದಾರೆ. ಸ್ಪರ್ಧೆಗಳಲ್ಲಿ ಭಾಗಹಿಸು ವ ಸ್ಪರ್ಧಾಳುಗಳು ಸೋಲು-ಗೆಲುವು ಎರಡನ್ನೂ ಸಮನಾಗಿ ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇ ಕು ಎಂದರು.

ಜಯಕರ್ನಾಟಕ ವೇದಿಕೆ ಅಧ್ಯಕ್ಷ ಕೆ.ಆರ್.ಅನಿಲ್‌ಕುಮಾರ್ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಯುವ ಕರು ಮೊಬೈಲ್ ಹಾಗೂ ಟಿವಿಗಳಿಗೆ ಅಂಟಿಕೊಂಡಿದ್ದಾರೆ. ಹೀಗಾಗಿ ಹೊರಾಂಗಣ ಕ್ರೀಡೆಗೆ ಹೆಚ್ಚು ಮನ್ನಣೆ ನೀಡುತ್ತಿಲ್ಲ. ಆದ್ದರಿಂದ ಹೆಚ್ಚು ಗ್ರಾಮೀಣ ಕ್ರೀಡೆಗಳಾದ ಜೋಡೆ ಎತ್ತಿನ ಗಾಡಿ, ಕಬ್ಬಡಿದಂಥ ಕ್ರೀಡಾಕೂಟದ ಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಜೋಡೆತ್ತಿನ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ತೀರ್ಪುಗಾರರ ತೀರ್ಮಾನಕ್ಕೆ ಬದ್ಧರಾಗಬೇಕು. ಯಾವುದೇ ಅಡಚಣೆಯಾಗದಂತೆ ಸೂಕ್ತ ರೀತಿಯಲ್ಲಿ ಸ್ಪರ್ಧೆ ಯಶಸ್ವಿಗೊಳಿಸಿದರೆ, ಮುಂದೆಯೂ ಈ ರೀತಿಯ ಕಾ ರ್ಯಕ್ರಮ ನಡೆಸಲು ಆಯೋಜಕರಿಗೆ ಹೆಚ್ಚು ಮುಂದಾಗುತ್ತಾರೆ ಎಂದು ತಿಳಿಸಿದರು.

ಸ್ಪರ್ಧಾ ಆಯೋಜಕರು ಮಾತನಾಡಿ ಕರ್ನಾಟಕ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಿಂದ ಸುಮಾ ರು ೬೨ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದ ಮೊದ ಲ ನಾಲ್ಕು ತಂಡಗಳಿಗೂ ಟ್ರೊಫಿ ಮತ್ತು ನಗದು ಬಹುಮಾನ ನಿಗಧಿಪಡಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕುಮಾರ್, ಸ್ಥಳೀಯರಾದ ಗುಂಡಣ್ಣ, ಹರೀಶ್, ವಿಶ್ವನಾಥ್, ಮಧುಕುಮಾರ್ ಅರಸ್, ಜೀವನ್, ಆಯೋಜಕರು ಮತ್ತು ದೋಣಿಖಣ, ಕೋಟೆ, ಮೂರುಮನೆಹಳ್ಳಿ , ಹೊಸಮನೆ ಗ್ರಾಮಸ್ಥರು ಉಪಸ್ಥಿತರಿದ್ದರು.

Farmers and bulls have an inseparable relationship.

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...