Home namma chikmagalur ajjampura ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ ರೈತರೊಬ್ಬರ ಎತ್ತಿನ ಗಾಡಿ ಕಳ್ಳತನ
ajjampuraCrime NewsHomeLatest Newsnamma chikmagalur

ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ ರೈತರೊಬ್ಬರ ಎತ್ತಿನ ಗಾಡಿ ಕಳ್ಳತನ

Share
Share

ಅಜ್ಜಂಪುರ: ರೈತರೊಬ್ಬರ ಎತ್ತಿನ ಗಾಡಿ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಎಂಬುವವರು ಕಳೆದುಹೋದ ತಮ್ಮ ಕಬ್ಬಿಣದ ಎತ್ತಿನ ಗಾಡಿಗಾಗಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಲ್ಲಪ್ಪ ಅವರು ಸುಮಾರು 15 ವರ್ಷಗಳ ಹಿಂದೆ ಹೊಸದುರ್ಗದ ಟಿಬಿ ಸರ್ಕಲ್‌ನಲ್ಲಿರುವ ಗೌಸಿಯಾ ವೆಲ್ಡಿಂಗ್ ಶಾಪ್‌ನಲ್ಲಿ ಈ ಕಬ್ಬಿಣದ ಟೈರ್ ಗಾಡಿಯನ್ನು ಮಾಡಿಸಿದ್ದರು. ಇದನ್ನು ಅವರು ತಮ್ಮ ಅಸಂಧಿ-ಮುದಿಗೆರೆ ರಸ್ತೆಯ ಪಕ್ಕದಲ್ಲಿರುವ ಸ್ವಂತ ಶೆಡ್ ಮುಂಭಾಗದಲ್ಲಿ ಪ್ರತಿದಿನ ನಿಲ್ಲಿಸುತ್ತಿದ್ದರು.

ಮಾರ್ಚ್ 23ರ ರಾತ್ರಿ 10 ಗಂಟೆ ಸುಮಾರಿಗೆ ದನಗಳಿಗೆ ಮೇವು ಹಾಕಿ ಎತ್ತಿನ ಗಾಡಿಯನ್ನು ಗಮನಿಸಿ ಮನೆಗೆ ತೆರಳಿದ್ದ ಇವರು, ಮರುದಿನ ಬೆಳಿಗ್ಗೆ 7 ಗಂಟೆಗೆ ಹಾಲು ಕರೆಯಲು ಬಂದಾಗ ಗಾಡಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಈ ಎತ್ತಿನ ಗಾಡಿಯನ್ನು ಮಾರ್ಚ್ 23ರ ರಾತ್ರಿ 10 ರಿಂದ ಮಾರ್ಚ್ 24ರ ಬೆಳಿಗ್ಗೆ 7 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳರು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಮಲ್ಲಪ್ಪ ಅವರು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

Bullock cart theft of a farmer in Asandhi village of Ajjampur taluk

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...