Home namma chikmagalur chikamagalur ಜಿಲ್ಲಾ ರೈತ ಸಂಘದಿಂದ ಪ್ರತಿಭಟನಾ ಜಿಲ್ಲಾ ಸಮಾವೇಶ
chikamagalurHomeLatest Newsnamma chikmagalur

ಜಿಲ್ಲಾ ರೈತ ಸಂಘದಿಂದ ಪ್ರತಿಭಟನಾ ಜಿಲ್ಲಾ ಸಮಾವೇಶ

Share
Share

ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ವಾಸಿಸುವ ರೈತರು ಎದುರಿಸುತ್ತಿರುವ ಕಾಡಾನೆ ದಾಳಿ ಮತ್ತು ಬಗರ್‌ಹುಕುಂ ಸಮಸ್ಯೆಗಳು ತೀವ್ರ ಕಳವಳ. ಈ ವನ್ಯಮೃಗಗಳಿಂದ ಮೃತಪಟ್ಟ ರೈತ ಕುಟುಂ ಬಕ್ಕೆ ಸರ್ಕಾರ ೫೦ ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಗುರುವಾರ ಜಿಲ್ಲಾ ರೈತ ಸಂಘದಿAದ ಏರ್ಪಡಿಸಿದ್ಧ ರೈತ ಪ್ರತಿ ಭಟನಾ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

೧೯೯೭ರಲ್ಲಿ ಪ್ರೊ.ನಂಜುAಡಸ್ವಾಮಿ ಅವರ ಹೋರಾಟದ ಫಲವಾಗಿ ಆರಂಭವಾದ ಪರಿಹಾರ ಧನ ಇಂ ದು ಹೆಚ್ಚಾಗಬೇಕಾದ ಅನಿವಾರ್ಯವಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ ಮತ್ತು ಸರ್ಕಾರಿ ಭೂಮಿಯ ಲ್ಲಿ ಜೀವನ ಸಾಗಿಸುತ್ತಿರುವ ಸಣ್ಣ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ಕುಂಟು ನೆಪಗಳನ್ನು ಹೇ ಳುತ್ತಿದೆ ಎಂದು ದೂರಿದರು.

ಈ ನಡುವೆ ಸರ್ಕಾರಗಳು ಬಲಾಡ್ಯ ಕಾರ್ಪೋರೇಟ್ ಕಂಪನಿಗಳಿಗೆ ಸಾವಿರಾರು ಎಕರೆ ಭೂಪ್ರದೇಶ ನೀಡಲು ಮುಂದಾಗುತ್ತಿರುವುದು ಖಂಡನೀಯ. ಇದು ಭವಿಷ್ಯದಲ್ಲಿ ದೇಶದ ಬೆನ್ನೆಲುಬು ರೈತರು ಬೀದಿಬೀ ಳುವಂತಾಗಲಿದೆ. ಅಲ್ಲದೇ ಭೂಮಿ ಕಳೆದುಕೊಂಡು ರೈತ ಕುಟುಂಬವು ಜೀವನವಿಲ್ಲದೇ ಬದುಕು ದುಸ್ತರವಾ ಗಲಿದೆ ಎಂದು ಎಚ್ಚರಿಸಿದರು.

ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ್‌ಕುಮಾರ್ ಮಾತನಾಡಿ ರೈತ ಸಮಾಜದ ಎಲ್ಲಾ ವರ್ಗಕ್ಕೂ ಸೀಮಿತವಾಗಿದೆ. ಕೆಲವರು ರಾಜಕಾರಣಿಗಳು ರೈತ ಚಳುವಳಿ ಹೊಡೆಯಲು ಬಹಳಷ್ಟ್ಟು ಪ್ರಯತ್ನಿ ಸುತ್ತಿದೆ. ಇದು ರಾಜಕಾರಣದ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳಲು ರಾಜಕಾರಣೀಗಳು ಷಡ್ಯಂತ್ರ ರಚಿಸು ತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸಂಘವು ನಾಡಿನಾದ್ಯಂತ ಸಂಚಾರ ನಡೆಸಿ ಅರಣ್ಯ ಹಕ್ಕು, ಸಣ್ಣಪುಟ್ಟ ರೈತ ಸಮಸ್ಯೆಗಳ ಮುಕ್ತಿ ಗಾಗಿ ಪಾದಯಾತ್ರೆ ನಡೆಸಿದೆ. ರೈತರಿಗೆ ಎದುರಾಗಿರುವ ಬಕರ್‌ಹುಕುಂ, ಅರಣ್ಯ ಹಕ್ಕು ಕಾಯ್ದೆ ಮುಕ್ತಿಗಾಗಿ ಹೋರಾಡುತ್ತಿದೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆ ತಂದು ಕೊನೆಗೆ ರೈತರ ಹೋರಾಟಕ್ಕೆ ಮಣಿದು ಕಾಯ್ದೆ ಹಿಂಪಡೆದಿದೆ ಎಂದರು.

ರೈತ ಸಂಘದ ಹಿರಿಯ ಮುಖಂಡ ಕೆ.ಕೆ.ಕೃಷ್ಣೇಗೌಡ ಮಾತನಾಡಿ ದೇಶ ಹಾಗೂ ನಾಡಿನ ರೈತರು ಮ ನಸ್ಸು ಮಾಡಿದರೆ ಸರ್ಕಾರವನ್ನು ಉರುಳಿಸುವ ಶಕ್ತಿಯಿದೆ. ರೈತ ಹಕ್ಕಿಗೆ ಚ್ಯುತಿ ಬಾರದಂತೆ ಆಯಾ ಸರ್ಕಾ ರಗಳು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಪ್ರತಿ ಭಾರಿ ರೈತರ ಬೆಳೆಗೆ ಬೆಲೆ ನಿಗಧಿಗೊಳಿಸದೇ ರೈತರ ಸಾವಿಗೆ ಸರ್ಕಾರಗಳು ಮೂಲ ಕಾರಣವಾಗುತ್ತಿವೆ ಎಂದು ಹೇಳಿದರು.

ರೈತ ಹೋರಾಟ, ಆಟದ ವಿಚಾರವಲ್ಲ. ಪ್ರತಿಭಟನೆ ಕುಳಿತ ಮೇಲೆ ನಿರ್ಣಯ ಮಾಡಿಕೊಳ್ಳಬೇಕು. ಈ ಸಂಘಟನೆಯು ಪ್ರತಿ ಹೋಬಳಿ, ಗ್ರಾಮಾಂತರ ಮಟ್ಟದಲ್ಲಿ ಜಾಗೃತಿ ಮೂಡಿಸಿ ದಿಕ್ಕು ತಪ್ಪುತ್ತಿರುವ ರೈತ ರಿಗೆ ಮನವರಿಕೆ ಮಾಡಬೇಕು. ರಾಜಕಾರಣಿಗಳ ಪೊಳ್ಳು ಮಾತಿಗೆ ಬೆರಗಾದರೆ ರೈತರು ಮುಂದೊAದು ದಿನ ದಿ ವಾಳಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಮಾಜಿ ಅಧ್ಯಕ್ಷ ಗುರುಶಾಂತಪ್ಪ, ಬಸವ ರಾಜ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಚAದ್ರಶೇಖರ್, ಮುಖಂಡರುಗಳಾದ ಕುಮಾರಸ್ವಾಮಿ, ದೇವರಾ ಜ್, ಬಸವಣ್ಣ, ರಾಜು ಎಕ್ಕಬೋರನಹಳ್ಳಿ, ಜಯರಾಮ್, ಇದ್ದರು.

Protest district convention by the District Farmers’ Association

Share

Leave a comment

Leave a Reply

Your email address will not be published. Required fields are marked *

Don't Miss

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ ಅಧಿಕಾರವಧಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿಗೆ ಒತ್ತುನೀಡಬೇಕು ಎಂದು ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ ಪುಷ್ಪಗಿರಿ ಪೇಪರ್ ಮಾರ್ಟ್ ಬಳಿ ನಗರ ಠಾಣೆಯ ಪಿಎಸ್‌ಐ ಶಂಭುಲಿಂಗನಗೌಡ ಹಾಗೂ ಸಿಬ್ಬಂದಿ ಗಸ್ತು...

Related Articles

ಉದ್ಯೋಗ ಭರವಸೆ: ೨ ಲಕ್ಷ ರೂ ವಂಚನೆ

ಚಿಕ್ಕಮಗಳೂರು : ಉನ್ನತ ವಿದ್ಯಾಭ್ಯಾಸ ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಯುವಕನ ಆಸೆಯನ್ನೇ ಬಂಡವಾಳ...

ಎನ್.ಆರ್.ಪುರದಲ್ಲಿ ಹಾಡಹಗಲೇ ೧೬.೩೫ ಲಕ್ಷ ಆಭರಣ ಕಳವು

ಎನ್.ಆರ್.ಪುರ: ತಾಲೂಕಿನ ಚಿಬ್ಬಳ್ಳಿ ಗ್ರಾಮದ ಕೆ. ಕಣಬೂರು ವ್ಯಾಪ್ತಿಯಲ್ಲಿ ಹಾಡಹಗಲೇ ಕಳ್ಳತನವೊಂದು ನಡೆದಿದ್ದು, ಸುಮಾರು ೧೬.೩೫...

ನಿಗಮದ ಸಾಲದ ಬಡ್ಡಿ ಮನ್ನಾಗೆ ಸಿ.ಟಿ.ರವಿ ಖಂಡನೆ

ಚಿಕ್ಕಮಗಳೂರು: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲದ ಬಡ್ಡಿ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ನೀತಿಯನ್ನ ತೀವ್ರವಾಗಿ...

ಜಿಲ್ಲಾಸ್ಪತ್ರೆಗೆ ಎಂಎಲ್ಸಿ ಸಿ.ಟಿ. ರವಿ ಭೇಟಿ

ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಔಷಧಿಗಳ ತೀವ್ರ ಕೊರತೆಯ ಕುರಿತು ಕೇಳಿಬಂದ...