Home namma chikmagalur chikamagalur ಅನಂತ್‌ಸುಬ್ಬರಾವ್ ಕಾರ್ಮಿಕರ ವರ್ಗದ ನಂದಾದೀಪ
chikamagalurHomeLatest Newsnamma chikmagalur

ಅನಂತ್‌ಸುಬ್ಬರಾವ್ ಕಾರ್ಮಿಕರ ವರ್ಗದ ನಂದಾದೀಪ

Share
Share

ಚಿಕ್ಕಮಗಳೂರು: – ಶೋಷಿತರು ಮತ್ತು ಕಾರ್ಮಿಕರ ಪರವಾಗಿ ಬೃಹತ್ ಚಳುವಳಿ ಹಮ್ಮಿ ಕೊಂಡು ನ್ಯಾಯಯುತ ಬೇಡಿಕೆ ಈಡೇರಿಸಲು ಹೋರಾಡಿದ ದಿ|| ಹೆಚ್.ವಿ.ಅನಂತ್ ಸುಬ್ಬರಾವ್ ಅವರು ಕಾರ್ಮಿಕರ ವರ್ಗದ ನಂದಾದೀಪ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಹೇಳಿದರು.

ನಗರದ ಜಿಲ್ಲಾ ಸಿಪಿಐ ಕಚೇರಿಯಲ್ಲಿ ಗುರುವಾರ ಎಐಟಿಯುಸಿ ರಾಜ್ಯಾಧ್ಯಕ್ಷ ಹಾಗೂ ಸಿಪಿಐ ಹಿರಿಯ ಮುಖಂಡ ದಿ|| ಹೆಚ್.ವಿ.ಅನಂತ್‌ಸುಬ್ಬರಾವ್ ಅಕಾಲಿನ ನಿಧನದ ಹಿನ್ನೆಲೆ ಜಿಲ್ಲಾ ಘಟಕದ ಮುಖಂಡರು ಗಳು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಿದರು.

ವಿಶೇಷವಾಗಿ ಸರ್ಕಾರಿ ಬಸ್ ನೌಕರರರಿಗೆ ಸಂಘದ ಕೊರತೆ ಎದುರಿಸಿದ್ಧ ಕಾಲಘಟ್ಟದಲ್ಲಿ ತಾವು ಸಂಘ ಟನೆ ನೇತೃತ್ವ ವಹಿಸಿಕೊಂಡು ಬಸ್ ನೌಕರರಿಗೆ ಸಮೃದ್ಧಿ ಜೀವನಕ್ಕೆ ದಾರಿಮಾಡಿಕೊಟ್ಟ ಮಹಾಚೇತನ. ಅವ ರ ಹೋರಾಟ, ಚಿಂತನೆಗಳು ದುಡಿಯುವ ಕೈಗಳಿಗೆ ಇನ್ನಷ್ಟು ಬಲತುಂಬಿಸುತ್ತಿತ್ತು ಎಂದು ಹೇಳಿದರು.

ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ ಸಮಾಜದ ವಿವಿಧ ಸ್ಥರಗಳಲ್ಲಿ ದುಡಿಯುವ ಪ್ಲಾಂಟೇಷನ್, ಕಾ ರ್ಖಾನೆ ಕಾರ್ಮಿಕ ವರ್ಗದವರಿಗೆ ಹೋರಾಟದ ಮುಖೇನಾ ಆಸರೆಯಾಗಿದ್ದರು. ಅವರ ಅಧ್ಯಯನಶೀಲ, ನಾಯಕತ್ವ ಗುಣವು ಮುಂದಿನ ಹೋರಾಟ ಹಾದಿಯಲ್ಲಿರುವ ಯುವಹೋರಾಟಗಾರರಿಗೆ ಆದರ್ಶಪ್ರಾಯ ಎಂದು ತಿಳಿಸಿದರು.

ಸಿಪಿಐ ರಾಜ್ಯ ಸಮಿತಿ ಸದಸ್ಯ ಡೊಂಗ್ರೆ ಮಾತನಾಡಿ ಕಮ್ಯೂನಿಸ್ಟ್ ಪಕ್ಷವು ಸೇರುವ ಮುನ್ನ ಎಲ್‌ಐಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ಧ ಸುಬ್ಬರಾವ್ ಅವರು ಬಡವರು, ಶೋಷಿತರ ಪರವಾಗಿ ಅಪಾರವಾ ದ ಕಾಳಜಿ ಹೊಂದಿದ್ದರು. ಹಣಕಾಸಿನ ಲೆಕ್ಕಚಾರದಲ್ಲೂ ಕಟ್ಟುನಿಟ್ಟು, ಪ್ರಾಮಾಣಿಕತೆ ಕಾಪಾಡುತ್ತಿದ್ದರು ಎಂ ದು ಹೇಳಿದರು.

ಅಂದಿನ ಕಾಲದಲ್ಲಿ ಸರ್ಕಾರಿ ಬಸ್ ನೌಕರರ ಸಮಸ್ಯೆ ಸ್ಪಂದಿಸದಿರುವಾಗ ತಮ್ಮ ಎಲ್‌ಐಸಿ ಹುದ್ದೆಗೆ ರಾ ಜೀನಾಮೆ ಸಲ್ಲಿಸಿ ಪೂರ್ಣಪ್ರಮಾಣ ನೌಕರರ ಬೇಡಿಕೆಗೆ ಸಂಘಟನಾತ್ಮಕವಾಗಿ ಹೋರಾಟ ರೂಪಿಸುವ ಮೂಲಕ ನ್ಯಾಯ ಒದಗಿಸಿದ್ದರು. ಪಕ್ಷಕ್ಕೆ ೧೦ ರೂ. ಹಣ ದೇಣಿಗೆ ನೀಡಿದರೂ, ಅದನ್ನು ರಶೀದಿ ನೀಡುವ ಪ್ರಾಮಾಣಿಕ ಗುಣವಿತ್ತು ಎಂದರು.

ಸಿಪಿಐ ಮುಖಂಡ ವಿಜಯ್‌ಕುಮಾರ್ ಮಾತನಾಡಿ ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಅನಂ ತ್ ಅವರ ಮಾತಿಗೆ ಕಿವಿಕೊಟ್ಟು ಕೇಳುವ ವಾತಾವರಣವಿತ್ತು. ಕೇವಲ ಒಂದು ಕರೆಯಲ್ಲೇ ಇಡೀ ರಾಜ್ಯಾದ್ಯಂ ತ ಸರ್ಕಾರಿ ಬಸ್ ಸಂಚಾರ ಬಂದ್‌ಗೊಳಿಸುವ ಸಾಮರ್ಥ್ಯ ಅವರ ಮಾತಿನಲ್ಲಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ರಾಧಾಸುಂದ್ರೇಶ್, ಜಿಲ್ಲಾ ಸಹ ಕಾರ್ಯದರ್ಶಿ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ನಗರ ಕಾರ್ಯದರ್ಶಿ ಜಿ.ರಮೇಶ್, ಮುಖಂಡ ಸಿ.ವಸಂತ್ ಕುಮಾರ್, ಜಿ.ಕೆ.ಕಾರ್ತೀಕ್, ಕಾಂಗ್ರೆಸ್ ಮುಖಂಡ ಭರತ್‌ಜೆಟ್ಟಿಯಾರ್ ಉಪಸ್ಥಿತರಿದ್ದರು.

Ananth Subbarao is the Nandadeepa of the working class.

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...