ಚಿಕ್ಕಮಗಳೂರು: ಪ್ಯಾರಾ ಅಥ್ಲೀಟ್ಗಳು ಏನೇ ಸಾಧನೆ ಮಾಡಿದರೂ ಅದರ ಹಿಂದೆ ಕೋಚ್ ಹಾಗೂ ಗೈಡ್ ರನ್ನರ್ ಗಳ ಪಾತ್ರ ಪ್ರಮುಖವಾಗಿರುತ್ತದೆ. ಕ್ರೀಡಾಪಟುಗಳ ಜೊತೆಗೆ ಅವರಿಗೆ ಬೆನ್ನೆಲುಬಾಗಿ ನಿಂತವರನ್ನು ಗುರುತಿಸುವ ಕೆಲಸ ಮಾಡಬೇಕು. ಈ ಹಿನ್ನೆಲೆಯಲ್ಲಿ ೧೦ ಮಂದಿ ಪ್ಯಾರಾ ಅಥ್ಲೀಟ್ಗಳ ಜೊತೆಗೆ ಮೂವರು ಗೈಡ್ ರನ್ನರ್ಗಳನ್ನು ದತ್ತುಪಡೆದು ಅವರಿಗೆ ನಮ್ಮ ಸಂಸ್ಥೆ ವತಿಯಿಂದಲೇ ಆರ್ಥಿಕ ಸಹಕಾರ ನೀಡುವುದಾಗಿ ಲೈಫ್ ಲೈನ್ ಫೀಡ್ಸ್ ಸಂಸ್ಥೆ ಸಂಸ್ಥಾಪಕ ಕಿಶೋರ್ ಕುಮಾರ್ ಹೆಗ್ಡೆ ಘೋಷಿಸಿದರು.
ನಗರದ ರತ್ನಗಿರಿ ರಸ್ತೆಯಲ್ಲಿರುವ ಲೈಫ್ ಲೈನ್ ಫೀಡ್ಸ್ ಕಚೇರಿಯಲ್ಲಿ ಪ್ಯಾರಾ ಒಲಂಪಿಕ್ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಪ್ಯಾರಾ ಅಥ್ಲೀಟ್ ಗಳನ್ನ ಸನ್ಮಾನಿಸಿ ಮಾತನಾಡಿದ ಅವರು, ವಿಶೇ? ಚೇತನ ಕ್ರೀಡಾಪಟುಗಳ ಸಾಧನೆಗೆ ಶ್ರಮ ವಹಿಸುವ ಕೋಚ್ ಹಾಗೂ ಗೈಡ್ ರನ್ನರ್ಗಳನ್ನು ಸರ್ಕಾರ ಮರೆಯಬಾರದು ಎಂದು ಹೇಳಿದರು.
ಕ್ರೀಡಾ ಕ್ಷೇತ್ರದಲ್ಲಿ ನನಗೆ ಯಾವುದೇ ಸಾಧನೆ ಮಾಡಲು ಸಾಧ್ಯವಾಗಿಲ್ಲ. ವಿಶೇ? ಚೇತನ ಕ್ರೀಡಾಪಟುಗಳ ಮೂಲಕ ಸಾಧನೆ ಮಾಡಿಸುವ ಕೆಲಸ ಮಾಡುತ್ತಿದ್ದೇನೆ. ಎಲ್ಲವನ್ನು ಸರ್ಕಾರವೇ ಮಾಡಬೇಕು ಎಂದರೆ ಅದು ಆಗುವುದಿಲ್ಲ. ಇರುವವರು ಅಗತ್ಯವಿರುವ ಕ್ರೀಡಾಪಟುಗಳಿಗೆ ಸಹಾಯ ಮಾಡಿದಾಗ ಅವರು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇದೇ ನಿಟ್ಟಿನಲ್ಲಿಯೇ ನಮ್ಮ ಸಂಸ್ಥೆಯಿಂದಲೂ ಪ್ಯಾರಾ ಅಥ್ಲೀಟ್ಗಳಿಗೆ ಆರ್ಥಿಕ ಸಹಕಾರ ನೀಡುತ್ತಿದ್ದೇವೆ ಎಂದರು.
ವಿಶೇ? ಚೇತನ ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಹೆಚ್ಚು. ಇಂಥ ಪರಿಸ್ಥಿತಿಯಲ್ಲಿ ಅವರಿಗೆ ಆರ್ಥಿಕ ತೊಂದರೆ ಬಂದಲ್ಲಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಹೀಗಾದಾಗ ಅವರಿಗೆ ಎಲ್ಲಾ ಅರ್ಹತೆ ಇದ್ದರೂ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕ್ರೀಡಾಪಟುಗಳಿಗೆ ಆರ್ಥಿಕ ಮುಗ್ಗಟ್ಟು ಉಂಟಾಗದಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ತರಬೇತುದಾರ ರಾಹುಲ್ ಮಾತನಾಡಿ, ೨೦೨೮ ರಲ್ಲಿ ಪ್ಯಾರಾ ಒಲಂಪಿಕ್ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು ಪದಕ ಪಡೆಯುವ ವಿಶ್ವಾಸವಿದೆ. ಇದಕ್ಕೂ ಮೊದಲು ನಡೆಯಲಿರುವ ಪ್ಯಾರಾ ಏಷಿಯನ್ ಗೇಮ್ಸ್ ನಲ್ಲಿಯೂ ನಮ್ಮ ಮಕ್ಕಳು ಗೆಲುವು ಸಾಧಿಸಲಿದ್ದಾರೆ. ಹೀಗಾಗಿಯೇ ಕ್ರೀಡಾಪಟುಗಳಿಗೆ ಅಗತ್ಯ ತರಬೇತಿ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ನಮ್ಮ ಕ್ರೀಡಾಪಟುಗಳಿಗೆ ಅತ್ಯತ್ತಮ ದರ್ಜೆಯ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಹೀಗಾಗಿಯೇ ದಕ್ಷಿಣ ಆಫ್ರಿಕಾ ಬಳಿಕ ಯುಎಸ್ಎ ಸೂಕ್ತ ತರಬೇತಿ ನೀಡಲಿದ್ದೇವೆ. ನಮ್ಮ ಗುರಿ ಇರುವುದು ಪ್ಯಾರಾ ಏ?ನ್ ಗೇಮ್ಸ್ ಹಾಗೂ ಪ್ಯಾರಾ ಒಲಂಪಿಕ್ ನಲ್ಲಿ ಪದಕ ಪಡೆಯುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ಪ್ಯಾರಾ ಅಥ್ಲೀಟ್ಗಳಾದ ರಕ್ಷಿತಾ ರಾಜು, ರಾಧ, ರವಿ ರಂಗೋಲಿ, ಉಲ್ಲಾಸ್ ಗೌಡ, ಲಲಿತಾ, ರವನಿ, ಅಜ್ಮಾನ್, ಸುಖದೇವ್, ನಿಖಿಲ್, ಗೈಡ್ ರನ್ನರ್ ತಬ್ರೇಜ್ ಖಾನ್, ಸೌಮ್ಯ ಮತ್ತಿತರರಿದ್ದರು.
The role of coach-guide runners is important.
Leave a comment