Home namma chikmagalur ಭಾರತೀಯ ನೆಲದಲ್ಲಿ ಉರ್ದು ಭಾಷೆಗೆ ಪುರಾತನ ಇತಿಹಾಸ
namma chikmagalurchikamagalurHomeLatest News

ಭಾರತೀಯ ನೆಲದಲ್ಲಿ ಉರ್ದು ಭಾಷೆಗೆ ಪುರಾತನ ಇತಿಹಾಸ

Share
????????????????????????????????????
Share

ಚಿಕ್ಕಮಗಳೂರು: ಭಾರತೀಯ ನೆಲದಲ್ಲಿ ಉರ್ದು ಭಾಷೆಗೆ ಆರ್ನೂರು ವರ್ಷಗಳ ಇತಿಹಾಸವಿದೆ. ಮಾತೃಭಾಷೆ ಉರ್ದುವನ್ನು ಮುಸ್ಲೀಂ ಜನಾಂಗ ಪ್ರೀತಿಸಿದಂತೆ, ಕನ್ನಡ ಭಾಷೆಯನ್ನು ಅಪ್ಪಿ ಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಉರ್ದು ಅರಬ್ ಚಿಕ್ಕಮಗಳೂರು ಮತ್ತು ಕರ್ನಾ ಟಕ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಿದ್ಧ ಉರ್ದು ರ್‍ಯಾಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆ, ಸರ್ವ ಧರ್ಮದ ಕೂಡಿರುವ ಜಾತ್ಯಾತೀತ ದೇಶ ಭಾರತ. ಇಲ್ಲಿನ ಪ್ರಜೆಗಳು ಮೊದಲು ಭಾರತೀಯರಾಗಬೇಕು. ನಾಡು, ನುಡಿಯ ಬಗ್ಗೆ ಅಪಾರ ಅಭಿಮಾನವಿರುವ ಮೂಲಕ ಮಾತೃ ಭಾಷೆಗೆ ಪ್ರಾಮುಖ್ಯತೆ ನೀಡುವುದು ಕರ್ತವ್ಯ ಎಂದು ಹೇಳಿದರು.

ಮುಸ್ಲೀಂ ಬಾಂಧವರಿಗೆ ಮಾತೃಭಾಷೆ ಉರ್ದು, ನಾಡಿನಲ್ಲಿ ವ್ಯವಹರಿಸಲು ಕನ್ನಡ ಕಡ್ಡಾಯವಿರಬೇ ಕು. ಹೊರದೇಶ ಅಥವಾ ರಾಜ್ಯಗಳಲ್ಲಿ ಕೆಲಸಕ್ಕೆ ತೆರಳಲು ಆಂಗ್ಲಭಾಷೆಯು ಅವಶ್ಯಕ. ಹೀಗಾಗಿ ಎಲ್ಲಾ ಭಾಷೆ ಗಳನ್ನು ಕಲಿಯುವುದು ತಪ್ಪಲ್ಲ. ಆದರೆ ತಾಯಿ ಹಾಗೂ ಆಡುಭಾಷೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಜಿಲ್ಲೆಯಲ್ಲಿ ಉರ್ದು ಭಾಷೆ ಕಲಿಕಾಸ್ತರಿಗೆ ಹೆಚ್ಚಿನ ಮಹತ್ವ ನೀಡಲು ಸಮಾಜದ ಮನವಿ ಮೇರೆಗೆ ರಾ ಜ್ಯಸರ್ಕಾರ ಹಾಗೂ ಸಚಿವ ಜಮೀರ್ ಅಹ್ಮದ್‌ರೊಂದಿಗೆ ಚರ್ಚಿಸಿ ಉರ್ದು ಕಲಿಕೆಗಾಗಿ ಸಮುದಾಯ ಭವ ನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ನಾಡಿನ ಕಾಯಕ ಯೋಗಿ ಬಸವಣ್ಣ, ಮಹಮ್ಮದ್ ಪೈಗಂಬರ್ ತತ್ವಾದರ್ಶಗಳು ಎಲ್ಲವೂ ಒಂದೇ. ಹ ಸಿದವರಿಗೆ ಉಣಬಡಿಸುವುದು. ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡುವುದು. ಹಾಗಾಗಿ ಎಲ್ಲರೂ ಒಟ್ಟಾಗಿ ಮಹಾ ಪುರುಷರ ಆದರ್ಶಗಳನ್ನು ಮಾತಿಗೆ ಸೀಮಿತಗೊಳಿಸದೇ ಆಚರಣೆಗೆ ತರುವ ಕಾರ್ಯ ಮಾಡಬೇಕಿದೆ ಎಂ ದು ತಿಳಿಸಿದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್ ಮಾತನಾಡಿ ಇತ್ತೀಚಿನ ದಿನಮಾನದಲ್ಲಿ ಉರ್ದು ಕಲಿಕೆಗೆ ಯುವಸಮೂಹ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಅದಕ್ಕಾಗಿ ಭಾಷೆಯ ಬೆಳವಣಿಗೆಗಾಗಿ ಜಿಲ್ಲಾ ಹಾಗೂ ರಾಜ್ಯ ಕಮಿಟಿ ಕಾರ್ಯಕ್ರಮ ಹಮ್ಮಿಕೊಂಡು ಉರ್ದು ಭಾಷೆ ಉಳಿವಿಗಾಗಿ ಶ್ರಮಿಸುತ್ತಿದೆ ಎಂದರು.

ಸ್ಥಳೀಯವಾಗಿ ಉರ್ದು ಕಲಿಕಾಸ್ತರಿಗೆ ಅನುಕೂಲವಾಗಲು ಶಾಸಕರು ಕ್ಷೇತ್ರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಟ್ಟಲ್ಲಿ ಬಹಳಷ್ಟು ಉಪಯೋಗವಾಗಲಿದೆ. ಜೊತೆಗೆ ಜಾತಿ, ಧರ್ಮದ ಲೆಕ್ಕಚಾರ ಮಾಡದೇ, ಸರ್ವರನ್ನು ಸಮಾನವಾಗಿ ಕಾಣುವ ಶಾಸಕರ ಕಾರ್ಯಕ್ಕೆ ಕ್ಷೇತ್ರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮಹಮ್ಮದ್‌ಆಲಿ ಖಾಜಿ ಮಾತನಾಡಿ ನಾಡಿನಾದ್ಯಂತ ಉರ್ದು ಭಾಷೆ ಬೆಳವಣಿಗೆಗೆ ಪ್ರತಿವರ್ಷವು ಎಲ್ಲಾ ಜಿಲ್ಲೆಗಳಲ್ಲಿ ಒಂದು ದಿನ ಸಮಾಜದ ಜನಾಂಗವನ್ನು ಒಗ್ಗೂಡಿಸಿ ಕೊಂಡು ಉರ್ದು ರ್‍ಯಾಲಿ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಉರ್ದು ಭಾಷೆ ಉಳಿವಿಗಾಗಿ ಶ್ರಮಿ ಸುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಉರ್ದು ರ್‍ಯಾಲಿ ನಗರದ ಅಂಡೆಛತ್ರದಿಂದ ಕುವೆಂಪು ಕಲಾಮಂದಿರದವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು. ನಂತರ ಪ್ರತಿವರ್ಷದಂತೆ ಈ ವರ್ಷವು ಮೂವರಿಗೆ ಉರ್ದು ಅರಭ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಉರ್ದು ಅಕಾಡೆಮಿ ಸದಸ್ಯ ಮುನೀರ್ ಅಹ್ಮದ್ ಜಾಮಿ, ಉದ್ಯಮಿ ಅಪ್ಸರ್ ಅಹ್ಮದ್, ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಅನ್ಸರ್‌ಆಲಿ, ನಗರಸಭೆ ಸದಸ್ಯ ರಾದ ಶಾದಂ ಆಲಂಖಾನ್, ಜಾವೀದ್, ಜಿಲ್ಲಾ ಉರ್ದು ಅರಬ್ ಸದಸ್ಯರಾದ ಜಿಲ್ಲಾ ಕಮಿಟಿ ಜಂ ಶೀದ್ ಅಹ್ಮ ದ್, ನಜ್ಮಾ ನಿಕ್ಕತ್, ಸುಹಾನ್ ಸುಲ್ತಾನ, ನಜ್ಮಾಆಲಿ, ಅಕ್ಬರ್, ಖಾಲೀದ್‌ರೆಹಮಾನ್, ಶಬ್ಬೀರ್ ಇದ್ದರು.

Ancient history of Urdu language in Indian land

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...