Home namma chikmagalur ಜೂನ್‌ 23ರಂದು ನಗರದಲ್ಲಿ ಸೌಹಾರ್ದ ನಡಿಗೆ
namma chikmagalurchikamagalurHomeLatest News

ಜೂನ್‌ 23ರಂದು ನಗರದಲ್ಲಿ ಸೌಹಾರ್ದ ನಡಿಗೆ

Share
Share

ಚಿಕ್ಕಮಗಳೂರು: ಎಲ್ಲಾ ಧರ್ಮಿಯರ ನಡುವೆ ಪ್ರೀತಿ ವಿಶ್ವಾಸ ಬೆಳೆಸಲು ಮನಸ್ಸುಗಳನ್ನು ಒಗ್ಗೂಡಿಸಲು ನಗರದಲ್ಲಿ ಜೂನ್‌ 23ರಂದು ಸೌಹಾರ್ದ ನಡಿಗೆ ಏರ್ಪಡಿಸಲಾಗಿದೆ ಎಂದು ಸುನ್ನಿ ಸ್ಟೂಡೆಂಟ್ ಫೆಡರೇಷನ್(ಎಸ್‌ಎಸ್‌ಎಫ್) ಅಧ್ಯಕ್ಷ ಎಚ್.ಐ. ಅಲ್ತಾಫ್ ಸಖಾಫಿ ಅಲ್ ಮುಈನಿ ಹಂಡುಗುಳಿ ತಿಳಿಸಿದರು.

ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಹನುಮಂತಪ್ಪ ವೃತ್ತದಿಂದ ಸೌಹಾರ್ದ ನಡಿಗೆ ಮೆರವಣಿಗೆ ಹೊರಟು ಎಂ.ಜಿ. ರಸ್ತೆ ಮೂಲಕ ಸಾಗಿ ಅಜಾದ್ ವೃತ್ತದಲ್ಲಿ ಸಮಾರೋಪ ನಡೆಯಲಿದೆ ಎಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೌಹಾರ್ದ ನಡಿಗೆ ಸಮಾರೋಪಕ್ಕೆ ಎಸ್‌ಎಸ್‌ಎಫ್ ರಾಜ್ಯ ಘಟಕದ ಅಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕೊಪ್ಪಳ, ಜಯಬಸವಾನಂದ ಸ್ವಾಮೀಜಿ, ಫಾದರ್ ಶಾಂತರಾಜು, ಶಾಸಕ ಎಚ್.ಡಿ. ತಮ್ಮಯ್ಯ ಪಾಲ್ಗೊಳ್ಳುವರು ಎಂದರು.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾದ ಭಾರತದ ಇಂದಿನ ಪರಿಸ್ಥಿತಿ ಶೋಚನೀಯವಾಗಿದೆ. ದೇಶದುದ್ದಕ್ಕೂ ದ್ವೇಷ ಭಾಷಣ ವ್ಯಾಪಕವಾಗಿದೆ. ಇತ್ತೀಚೆಗೆ ಕರಾವಳಿಯಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳು ದೇಶವನ್ನೇ ಬೆಚ್ಚಿ ಬೀಳಿಸಿವೆ. ಇಂತಹ ಪ್ರಕರಣಗಳು ಕೊನೆಗೊಂಡು ಸೌಹಾರ್ದ ಪರಂಪರೆ ಮರುಸ್ಥಾಪಿಸಬೇಕು.

ಈ ಆಶಯದೊಂದಿಗೆ ಕನ್ನಡ ನಾಡಿನ ಸೌಹಾರ್ದವನ್ನು ಇನ್ನಷ್ಟು ಗಟ್ಟಿಗೊಳಿಸಲು ಎಲ್ಲಾ ಧರ್ಮಿಯರ ನಡುವೆ ಪ್ರೀತಿ ವಿಶ್ವಾಸ ಬೆಳೆಸಲು ಉದ್ದೇಶಿಸಲಾಗಿದೆ. ಎಸ್‌ಎಸ್‌ಎಫ್ ರಾಜ್ಯದ 20 ಪಟ್ಟಣಗಳಲ್ಲಿ ಜೂ. 22ರಿಂದ ಜು. 4ರವರೆಗೆ ಸೌಹಾರ್ದ ನಡಿಗೆ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.

ಸೌಹಾರ್ದ ನಡಿಗೆಯ ಸ್ವಾಗತ ಸಮಿತಿ ಅಧ್ಯಕ್ಷ ಯೂಸೂಫ್ ಹಾಜಿ ಉಪ್ಪಳ್ಳಿ, ಪ್ರಧಾನ ಕಾರ್ಯದರ್ಶಿ ಜಾಸಿರ್ ಹಿಮಮಿ ಸಖಾಫಿ ಬಾಳೆಹೊನ್ನೂರು, ಕನ್ವೀನರ್ ನಾಸಿರ್ ಇಂಪಾಲ್, ಜಿಲ್ಲಾ ಖಜಾಂಚಿ ನೌಶಾದ್, ತಾಲ್ಲೂಕು ಖಜಾಂಚಿ ಉಸ್ಮಾನ್ ಇದ್ದರು.

Friendly walk in the city on June 23rd

Share

Leave a comment

Leave a Reply

Your email address will not be published. Required fields are marked *

Don't Miss

ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ಯವಕ ಸಾವು

ಚಿಕ್ಕಮಗಳೂರು: ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ತಲೆ ಬಂಡೆಗೆ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್.ಪುರ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದ...

ಮನ್ ಕಿ ಬಾತ್‌ನಲ್ಲಿ ಚಿಕ್ಕಮಗಳೂರು ರೈತರ ಕೃಷಿ ವೈವಿಧ್ಯತೆಗೆ ಪ್ರಧಾನಿ ಮೋದಿ ಮೆಚ್ಚುಗೆ

ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 137ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ರೈತರ ಕೃಷಿ ವೈವಿಧ್ಯತೆ ಹಾಗೂ ನಾವೀನ್ಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಸಾಂಪ್ರದಾಯಿಕ ಕಾಫಿ...

Related Articles

ನೂತನ ಪಶ್ಚಿಮ ವಲಯ ಡಿಐಜಿ ಆರ್. ಚೇತನ್ ಭೇಟಿ

ಚಿಕ್ಕಮಗಳೂರು: ನೂತನ ಪಶ್ಚಿಮ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕರಾಗಿ (ಡಿಐಜಿ) ಅಧಿಕಾರ ವಹಿಸಿಕೊಂಡಿರುವ ಆರ್....

ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತ

ಚಿಕ್ಕಮಗಳೂರು: ಹಾಫ್ ಹೆಲ್ಮೆಟ್ ಹಾಕುವವರೇ ಎಚ್ಚರ.. ಎಚ್ಚರ.. ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ...

ಕರ್ವಾಲೊ ಚಿತ್ರಕಲಾ ಸ್ಪರ್ಧೆಯಲ್ಲಿ ಹರ್ಷ ಕಾವೇರಿಪುರ ಪ್ರಥಮ

ಕೊಟ್ಟಿಗೆಹಾರ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಅವರ ೮೮ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕರ್ವಾಲೊ ಕೃತಿ...

₹1,281.80 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ

ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗದ ರೈತರ ಬಹುದಿನಗಳ ನಿರೀಕ್ಷೆಯಾಗಿರುವ ₹1,281.80 ಕೋಟಿ ಅಂದಾಜು ವೆಚ್ಚದ ಮಹತ್ವಾಕಾಂಕ್ಷಿ...