ಕೊಟ್ಟಿಗೆಹಾರ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಅವರ ೮೮ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕರ್ವಾಲೊ ಕೃತಿ ಆಧಾರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಮೈಸೂರಿನ ಹರ್ಷ ಕಾವೇರಿಪುರ ಪ್ರಥಮ ಸ್ಥಾನ ಪಡೆದಿದ್ದಾರೆ.
ನರಸಿಂಹರಾಜಪುರದ ನಿತೇಶ್ ವಿ ದ್ವಿತೀಯ, ಚಿತ್ರದುರ್ಗದ ಮನೋಹರ ಟಿ.ಎನ್ ತೃತೀಯ ಸ್ಥಾನ ಪಡೆದಿದ್ದು ಬೆಂಗಳೂರಿನ ನಾಗನಾಥ್ ಜಿ.ಎಸ್, ರಘುಪತಿ ಶೃಂಗೇರಿ, ಚಿಕ್ಕಮಗಳೂರಿನ ಪೆಟ್ರೇಷಿಯಾ, ಮೂಡಿಗೆರೆಯ ಪರಥ್ವಿಕ್ ಹುಲ್ಲೆಮನೆ, ತೀರ್ಥಹಳ್ಳಿಯ ಭರತ್ ಶೇಡ್ಗಾರ್, ದಕ್ಷಿಣ ಕನ್ನಡದ ಪ್ರಶಾಂತ್ ಕೆ, ಬೆಂಗಳೂರಿನ ಅನುಷಾ ಹೆಗಡೆ ಪೋತ್ಸಾಹಕ ಬಹುಮಾನ ಪಡೆದಿದ್ದಾರೆ.
ಸ್ಪರ್ಧೆಯ ತೀರ್ಪುಗಾರರಾದ ಕಲಾವಿದ, ವಿಶ್ವಕರ್ಮ ಆಚಾರ್ಯ ಮಾತನಾಡಿ, ನವಮಾಧ್ಯಮ ಮತ್ತು ಹಾಗೂ ಸಾಂಪ್ರದಾಯಿಕ ಕಲೆ ಎರಡಕ್ಕೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಗೆ ಒಟ್ಟು ೧೯೮ ಕಲಾಕೃತಿಗಳು ಸ್ಪರ್ಧೆಗೆ ಬಂದಿದ್ದವು ಎಂದರು.
ಸ್ಪರ್ಧೆಯ ತೀರ್ಪುಗಾರರಾದ ಕಲಾವಿದ, ಸುರೇಶ್ ಚಂದ್ರ ದತ್ತ ಮಾತನಾಡಿ, ತೇಜಸ್ವಿ ಅವರ ಜನಪ್ರಿಯ ಕಾದಂಬರಿ ಕರ್ವಾಲೊ ಕೃತಿಯನ್ನು ಓದಿ ಕೃತಿಯಲ್ಲಿನ ದೃಶ್ಯ, ಪಾತ್ರ, ಸನ್ನಿವೇಶವನ್ನು ಚಿತ್ರವಾಗಿಸಿ ಸ್ಪರ್ಧೆಗೆ ಕಳಿಸಿದ್ದರು. ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಸ್ಪರ್ಧೆಯ ತೀರ್ಪುಗಾರರಾದ ಕಲಾವಿದ, ಬಾಪುದಿನೇಶ್ ಮಾತನಾಡಿ, ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರು ಈ ಸ್ಪರ್ಧೆಯ ಭಾಗವಾಗಿರುವುದು ವಿಶೇಷ. ಸ್ಪರ್ಧೆಗೆ ಚಿತ್ರ ರಚಿಸುವ ಕಾರಣಕ್ಕಾಗಿ ಕರ್ವಾಲೊ ಕಾದಂಬರಿಯನ್ನು ಓದಿ ಹಲವರು ಚಿತ್ರವನ್ನು ಕಳಿಸಿದ್ದಾರೆ. ಕಲೆ ಮತ್ತು ಸಾಹಿತ್ಯದ ಅನುಸಂಧಾನ ಈ ಚಿತ್ರಕಲಾ ಸ್ಪರ್ಧೆಯಿಂದ ಸಾಧ್ಯವಾಗಿದೆ ಎಂದರು.
Harsha Kaveripur wins first place in Carvalho painting competition
Leave a comment