ಚಿಕ್ಕಮಗಳೂರು: ಎಲ್ಲಾ ಧರ್ಮಿಯರ ನಡುವೆ ಪ್ರೀತಿ ವಿಶ್ವಾಸ ಬೆಳೆಸಲು ಮನಸ್ಸುಗಳನ್ನು ಒಗ್ಗೂಡಿಸಲು ನಗರದಲ್ಲಿ ಜೂನ್ 23ರಂದು ಸೌಹಾರ್ದ ನಡಿಗೆ ಏರ್ಪಡಿಸಲಾಗಿದೆ ಎಂದು ಸುನ್ನಿ ಸ್ಟೂಡೆಂಟ್ ಫೆಡರೇಷನ್(ಎಸ್‌ಎಸ್‌ಎಫ್) ಅಧ್ಯಕ್ಷ ಎಚ್.ಐ. ಅಲ್ತಾಫ್ ಸಖಾಫಿ ಅಲ್ ಮುಈನಿ ಹಂಡುಗುಳಿ ತಿಳಿಸಿದರು.
ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಹನುಮಂತಪ್ಪ ವೃತ್ತದಿಂದ ಸೌಹಾರ್ದ ನಡಿಗೆ ಮೆರವಣಿಗೆ ಹೊರಟು ಎಂ.ಜಿ. ರಸ್ತೆ ಮೂಲಕ ಸಾಗಿ ಅಜಾದ್ ವೃತ್ತದಲ್ಲಿ ಸಮಾರೋಪ ನಡೆಯಲಿದೆ ಎಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೌಹಾರ್ದ ನಡಿಗೆ ಸಮಾರೋಪಕ್ಕೆ ಎಸ್‌ಎಸ್‌ಎಫ್ ರಾಜ್ಯ ಘಟಕದ ಅಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕೊಪ್ಪಳ, ಜಯಬಸವಾನಂದ ಸ್ವಾಮೀಜಿ, ಫಾದರ್ ಶಾಂತರಾಜು, ಶಾಸಕ ಎಚ್.ಡಿ. ತಮ್ಮಯ್ಯ ಪಾಲ್ಗೊಳ್ಳುವರು ಎಂದರು.
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾದ ಭಾರತದ ಇಂದಿನ ಪರಿಸ್ಥಿತಿ ಶೋಚನೀಯವಾಗಿದೆ. ದೇಶದುದ್ದಕ್ಕೂ ದ್ವೇಷ ಭಾಷಣ ವ್ಯಾಪಕವಾಗಿದೆ. ಇತ್ತೀಚೆಗೆ ಕರಾವಳಿಯಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳು ದೇಶವನ್ನೇ ಬೆಚ್ಚಿ ಬೀಳಿಸಿವೆ. ಇಂತಹ ಪ್ರಕರಣಗಳು ಕೊನೆಗೊಂಡು ಸೌಹಾರ್ದ ಪರಂಪರೆ ಮರುಸ್ಥಾಪಿಸಬೇಕು.
ಈ ಆಶಯದೊಂದಿಗೆ ಕನ್ನಡ ನಾಡಿನ ಸೌಹಾರ್ದವನ್ನು ಇನ್ನಷ್ಟು ಗಟ್ಟಿಗೊಳಿಸಲು ಎಲ್ಲಾ ಧರ್ಮಿಯರ ನಡುವೆ ಪ್ರೀತಿ ವಿಶ್ವಾಸ ಬೆಳೆಸಲು ಉದ್ದೇಶಿಸಲಾಗಿದೆ. ಎಸ್‌ಎಸ್‌ಎಫ್ ರಾಜ್ಯದ 20 ಪಟ್ಟಣಗಳಲ್ಲಿ ಜೂ. 22ರಿಂದ ಜು. 4ರವರೆಗೆ ಸೌಹಾರ್ದ ನಡಿಗೆ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.
ಸೌಹಾರ್ದ ನಡಿಗೆಯ ಸ್ವಾಗತ ಸಮಿತಿ ಅಧ್ಯಕ್ಷ ಯೂಸೂಫ್ ಹಾಜಿ ಉಪ್ಪಳ್ಳಿ, ಪ್ರಧಾನ ಕಾರ್ಯದರ್ಶಿ ಜಾಸಿರ್ ಹಿಮಮಿ ಸಖಾಫಿ ಬಾಳೆಹೊನ್ನೂರು, ಕನ್ವೀನರ್ ನಾಸಿರ್ ಇಂಪಾಲ್, ಜಿಲ್ಲಾ ಖಜಾಂಚಿ ನೌಶಾದ್, ತಾಲ್ಲೂಕು ಖಜಾಂಚಿ ಉಸ್ಮಾನ್ ಇದ್ದರು.
Friendly walk in the city on June 23rd
Leave a comment