Home namma chikmagalur chikamagalur ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಪ್ರಾಧ್ಯಾಪಕರ ಹಾಜರಾತಿ ತಿದ್ದುಪಡಿ ಆರೋಪ
chikamagalurHomeLatest Newsnamma chikmagalur

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಪ್ರಾಧ್ಯಾಪಕರ ಹಾಜರಾತಿ ತಿದ್ದುಪಡಿ ಆರೋಪ

Share
Oplus_16908288
Share

ಚಿಕ್ಕಮಗಳೂರು: ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (CIMS)ಯಲ್ಲಿ ಸಹಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಗಣೇಶ್ ಪಿ. ಸುಬ್ರಹ್ಮಣ್ಯ ಅವರ ವಿರುದ್ಧ ಸರ್ಕಾರಿ ಸೇವಾ ನಿಯಮ ಉಲ್ಲಂಘನೆ, ಕರ್ತವ್ಯ ಲೋಪ, ಹಾಜರಾತಿ ದಾಖಲೆ ತಿದ್ದುಪಡಿ ಹಾಗೂ ಪ್ರಭಾವ ಬಳಸಿ ಪದೋನ್ನತಿ ಪಡೆದಿರುವ ಆರೋಪಗಳು ಕೇಳಿಬಂದಿದ್ದು, ಪ್ರಕರಣದ ಕುರಿತು ಲೋಕಾಯುಕ್ತ ಅಥವಾ ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕೆಂದು ಸಾಮಾಜಿಕ ಕಾರ್ಯಕರ್ತ ಸುಪ್ರೀತ್ ಅರೈನೂರ್ ಆಗ್ರಹಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಗಣೇಶ್ ಅವರು ಸರ್ಕಾರಿ ಸೇವೆಯಲ್ಲಿದ್ದರೂ ಯಾವುದೇ ಪೂರ್ವಾನುಮತಿ ಪಡೆಯದೆ ಕೇರಳದ ವಯನಾಡಿನಲ್ಲಿರುವ ಲಿಯೋ ಆಸ್ಪತ್ರೆಯಲ್ಲಿ ಖಾಸಗಿಯಾಗಿ ಹೊರರೋಗಿ ಹಾಗೂ ಒಳರೋಗಿಗಳ ತಪಾಸಣೆ, ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಬಿಲ್ ಮತ್ತು ರಸೀದಿಗಳು ಸೇರಿದಂತೆ ದಾಖಲೆಗಳು ತಮ್ಮ ಬಳಿ ಇರುವುದಾಗಿ ತಿಳಿಸಿದರು.

ಸರ್ಕಾರಿ ಕರ್ತವ್ಯದ ಸಮಯದಲ್ಲಿ ಹೊರರಾಜ್ಯದ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿರುವುದನ್ನು ಮುಚ್ಚಿಹಾಕುವ ಉದ್ದೇಶದಿಂದ CIMSನ ಹಾಜರಾತಿ ರಿಜಿಸ್ಟರ್‌ನಲ್ಲಿ ವೈಟ್‌ನರ್ ಬಳಸಿ ತಿದ್ದುಪಡಿ ಮಾಡಲಾಗಿದೆ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು.

ಡಾ. ಗಣೇಶ್ ಹಾಗೂ ಸಂಸ್ಥೆಯ ಡೀನ್ ನಡುವೆ ನಿಕಟ ಸ್ನೇಹವಿದ್ದು, ಈ ಆಪ್ತತೆಯ ಲಾಭ ಪಡೆದು ಸ್ಥಳೀಯ ಮಟ್ಟದ ತನಿಖೆಯನ್ನು ಅವರ ಪರವಾಗಿ ಮುಕ್ತಾಯಗೊಳಿಸಲು ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳಿಂದ ನಡೆಯುವ ತನಿಖೆಯ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದರು.

ಇದಲ್ಲದೆ, ಡಾ. ಗಣೇಶ್ ಅವರ ವಿರುದ್ಧ ಕರ್ತವ್ಯ ಲೋಪದ ಕುರಿತು ತನಿಖೆ ಅಥವಾ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಪ್ರಭಾವ ಬಳಸಿ ನಿಯಮಬಾಹಿರವಾಗಿ ಪದೋನ್ನತಿ ನೀಡಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು.

ಆರೋಪಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವ ಅಗತ್ಯವಿದ್ದು, ಸ್ಥಳೀಯ ಮಟ್ಟದ ಅಧಿಕಾರಿಗಳ ಬದಲಿಗೆ ಲೋಕಾಯುಕ್ತ ಅಥವಾ ಉನ್ನತ ಮಟ್ಟದ ಸ್ವತಂತ್ರ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸಬೇಕು. ತನಿಖೆಯಲ್ಲಿ ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸುಪ್ರೀತ್ ಅರೈನೂರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವರೂಪ್ ಕಬ್ಬಿಣ ಸೇತುವೆ, ಶರಣ್ ಚಿತ್ಮಳ್ಳಿ, ಮಾಗೋಡ್ ಮೋಹನ್ ಗೌಡ, ಸಂಗೀತ ಪ್ರಸಾದ್ ಹಾಗೂ ಪ್ರೀತಮ್ ಹಲಸುಮನೆ ಉಪಸ್ಥಿತರಿದ್ದರು.

Attendance correction allegations against associate professor of Institute of Medical Sciences

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ವೈದ್ಯನ ಡಬಲ್ ಡ್ಯೂಟಿ.!

ಚಿಕ್ಕಮಗಳೂರು : ಸರ್ಕಾರದ ಬೊಕ್ಕಸದಿಂದ ಕೈತುಂಬಾ ಸಂಬಳ ಪಡೆಯುತ್ತಾ, ಕರ್ತವ್ಯದ ಸ್ಥಳದಲ್ಲಿ ರೋಗಿಗಳನ್ನು ಸತಾಯಿಸಿ ನೆರೆಯ ಕೇರಳದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಗಂಭೀರ ಆರೋಪ...

ಶಾಸಕರುಗಳಿಗೆ ಅಧಿಕಾರದ ಹಠ-ರೈತರಿಗೆ ಬರಗಾಲದ ಭಯ

ಕಡೂರು ಬರಪೀಡಿತ ತಾಲೂಕು ಪಟ್ಟಿಯಿಂದ ಹೊರಕ್ಕೆ: ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಕಡೂರು: ಕಡೂರು ತಾಲ್ಲೂಕು ಪ್ರತಿ ವರ್ಷವೂ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, ಪ್ರಸಕ್ತ ಸಾಲಿನ ಬರಪೀಡಿತ ತಾಲೂಕುಗಳ ಪಟ್ಟಿಯಿಂದ...

Related Articles

ಕಾಡಾನೆ-ಕಾಡುಕೋಣ ದಾಳಿಯಿಂದ ಭೀತಿಯಲ್ಲಿ ಕಾರ್ಮಿಕರು

ಮೂಡಿಗೆರೆ: ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಒಂದೆಡೆ...

ನೂತನ ಜಿಲ್ಲಾಡಳಿತ ಸಂಕೀರ್ಣ ಮಾರ್ಚ್-ಏಪ್ರಿಲ್ ವೇಳೆಗೆ ಲೋಕಾರ್ಪಣೆ

ಚಿಕ್ಕಮಗಳೂರು: ಕಾಫಿನಾಡಿನ ಸಮಗ್ರ ಅಭಿವೃದ್ಧಿ ನೀಲನಕ್ಷೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ನೂತನ ಜಿಲ್ಲಾಡಳಿತ ಸಂಕೀರ್ಣದ (ಡಿಸಿ...

ತರೀಕೆರೆಯಲ್ಲಿ ಖಾಸಗಿ ಬಸ್ ಏಜೆಂಟ್‌ರ ನಡುರಸ್ತೆಯಲ್ಲೇ ಪುಂಡಾಟ

ತರೀಕೆರೆ: ಸರ್ಕಾರಿ ಬಸ್ ಚಾಲಕನ ಮೇಲೆ ಖಾಸಗಿ ಬಸ್ ಏಜೆಂಟ್‌ಗಳು ನಡುರಸ್ತೆಯಲ್ಲೇ ಪುಂಡಾಟ ನಡೆಸಿ, ರಕ್ತ...

ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಗೆ ಸೆ.6ಕ್ಕೆ ಲಿಖಿತ ಪರೀಕ್ಷೆ

ಚಿಕ್ಕಮಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿಎಆರ್ ಹಾಗೂ ಡಿಎಆರ್ ವೃಂದದ...