Home Latest News ಮನೆಯ ಮುಂದೆ ಭಯಂಕರ ಮಾಟ : ವಾಮಾಚಾರಕ್ಕೆ ಬೆಚ್ಚಿಬಿದ್ದ ಜನ
Latest News

ಮನೆಯ ಮುಂದೆ ಭಯಂಕರ ಮಾಟ : ವಾಮಾಚಾರಕ್ಕೆ ಬೆಚ್ಚಿಬಿದ್ದ ಜನ

Share
Share

ಚಿಕ್ಕಮಗಳೂರು :  ಬೆಳ್ಳಂಬೆಳಗ್ಗೆ ವಾಮಾಚಾರಕ್ಕೆ ಮೂಡಿಗೆರೆಯ ಹೆಡದಾಳು ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಮೂರು ದಾರಿ ಕೂಡಿರುವ ಸ್ಥಳದಲ್ಲಿ ಕಿಡಿಗೇಡಿಗಳ ಇಂದು ಬೆಳಗಿನ ಜಾವ ವಾಮಾಚಾರ ನಡೆಸಿದ್ದಾರೆ. ಹಸಿರು ಬಳೆಗಳ ಮೇಲೆ ಮಣ್ಣಿನ ಬೊಂಬೆ ಇಟ್ಟು ವಾಮಾಚಾರ ಮಾಡಲಾಗಿದೆ.

ಮಡಿಕೆಗೆ ಮನುಷ್ಯನ ರೂಪ ನೀಡಿ ಭಯಂಕರ ವಾಮಾಚಾರ ಮಾಡಿ ಹೋಗಿದ್ದಾರೆ ಸಾಮಾನ್ಯವಾಗಿ
ವಾಮಾಚಾರ ಮಾಡೋರು ಪ್ರಾಣಿ ಬಲಿ ಕೊಟ್ಟು ವಾಮಾಚಾರ ಮಾಡೋದು ಹೆಚ್ಚು ಆದರೆ ಬಾಳೆ ಎಲೆ, ಹಸಿರು ಬಳೆ, ಮಡಿಕೆಗೆ ಕಾಳಿಯ ರೂಪ ನೀಡಿ ಮಾಟ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಡದಾಳು ಗ್ರಾಮದ ಚೇತನ್ ಎಂಬುವವರ ಮನೆಯ ಮುಂದೆಯೇ ಈ ವಾಮಾಚಾರ ಮಾಡಲಾಗಿದೆ. ಬೆಳಗಿನ ಜಾವ 4-5 ಗಂಟೆಗೆ ಐವರು ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ವಾಮಾಚಾರ ಮಾಡುವುದನ್ನ ಮನೆಯೊಳಗಿಂದ ಹಳ್ಳಿಗರು ಕಣ್ಣಾರೆ ನೋಡಿದ್ದಾರೆ.
ಆದರೆ ಮನೆಯಿಂದ ಹೊರಬರಲು ಭಯಗೊಂಡು ಯಾರೂ ಕೂಡಾ ಹೊರಬಂದಿಲ್ಲ, ಮಾಟ ಮಾಡಿದ ಸ್ಥಳದಲ್ಲಿ ಅರಿಶಿನ-ಕುಂಕುಮ, ಕಾಯಿ, ಹಣ್ಣು ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ. ಸದ್ಯ ಗ್ರಾಮದ ತುಂಬೆಲ್ಲ ಇದೇ ಚರ್ಚೆ ನಡೆಯುತ್ತಿದ್ದ ಏಕೆ ಈ ವಾಮಾಚಾರ ಮಾಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

ಪ್ರಾಣೇಶ್ ರಾಜಕೀಯ ಪೌರಷ ಕಟ್-ಉಪ ಸಭಾಪತಿ ಸ್ಥಾನ ಔಟ್?

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನದಿಂದ ಪ್ರಾಣೇಶ್ ಅನಿವಾರ್ಯವಾಗಿ ಇಳಿಯಬೇಕಾಗಿದೆ. ಪ್ರಾಣೇಶ್ ಗೆ ಉಪ ಸಭಾಪತಿ ಸ್ಥಾನ ಬಯಸದೇ ಬಂದ ಭಾಗ್ಯ. ಧರ್ಮೇಗೌಡರ ಆಕಸ್ಮಿಕ ಸಾವಿನಿಂದಾಗಿ ಪ್ರಾಣೇಶ್ ಗೆ ಅವಕಾಶ ದೊರೆಯಿತು. ಈಗ...

Related Articles

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...

ಪ್ರೀತಿ ನಿರಾಕರಣೆ : ಬಾಲಕಿ ಮೇಲೆ ಹಲ್ಲೆ

ಚಿಕ್ಕಮಗಳೂರು: ಕಾಫಿನಾಡಿನ ಹೃದಯ ಭಾಗದಲ್ಲಿರುವ ಎಸ್ಪಿ ಮತ್ತು ಡಿಸಿ ಕಚೇರಿ ಪಕ್ಕದಲ್ಲೇ ಇರುವ ಜಿಲ್ಲಾ ಕ್ರೀಡಾಂಗಣದಲ್ಲಿ...