Home Latest News ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಿಗೆ ಬಂಪರ್ ಫಾರಿನ್ ಟೂರ್ ಭಾಗ್ಯ
Latest News

ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಿಗೆ ಬಂಪರ್ ಫಾರಿನ್ ಟೂರ್ ಭಾಗ್ಯ

Share
Share

ಚಿಕ್ಕಮಗಳೂರು :

ಡಿ,ಸಿ,ಸಿ ಬ್ಯಾಂಕ್ ನ”ಭಾಗ್ಯವಂತ”ಪ್ರವಾಸಿಗರು.
ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕರು ಮತ್ತು ಬಿಜೆಪಿ ಕೆಲ ಮುಖಂಡರು ನಿಜಕ್ಕೂ ಅದೃಷ್ಟ ಮಾಡಿದ್ದಾರೆ.
ಡಿ,ಸಿ,ಸಿ ಬ್ಯಾಂಕ್ ಅಸ್ತಿತ್ವಕ್ಕೆ ಬಂದಾಗಿನಿಂದ ಇಷ್ಟು ಪ್ರವಾಸ ಮಾಡುವುದಿರಲಿ ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ಮೆಟ್ಟಿಲು ಕೂಡ ನೋಡಲು ಸಾಧ್ಯವಾಗಿರಲಿಲ್ಲ.ಆದರೆ ಕಡೂರಿನ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದರು ನೋಡಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ನ ನಿರ್ದೇಶಕರು ಸೇರಿದಂತೆ ಬಿಜೆಪಿಯ ಪ್ರಮುಖರಿಗೆ ಪ್ರವಾಸ ಭಾಗ್ಯದ ಬಾಗಿಲು ತೆರೆದಿದೆ.
ಕಳೆದ ಮೂರ ವರ್ಷಗಳಲ್ಲಿ ಐದಕ್ಕೂ ಹೆಚ್ಚು ದೇಶದ ಪ್ರವಾಸ ಮಾಡಿ ಅಲ್ಲಿನ ಸಹಕಾರ ತತ್ವ ಮತ್ತು ಬೇಸಾಯ ಪದ್ದತಿ ತಿಳಿದುಕೊಂಡು ಬಂದು ಜಾಗೃತಿ ಮೂಡಿಸುತ್ತಿದ್ದಾರೆ.
ದುಬೈ,ಅಜರ್ ಬೈಜಾನ್ ನ ಬಾಕ, ಮತ್ತೊಂದು ದೇಶ ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿ ತಲೀನರಾಗಿದ್ದಾರೆ.
ಬೆಳ್ಳಿ ಪ್ರಕಾಶ್ ಎಂಬ ಗಟ್ಟಿಗ ದೊರೆಯ ದಿಲ್ ನಿಂದ ಹಲವು ದೇಶಗಳ ನೋಡುವ ಭಾಗ್ಯ ಪಡೆದಿದ್ದಾರೆ.
ಮಾಜಿ ಶಾಸಕ ಸರೇಶ್ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರ ಜೊತೆಗೆ ನಿರ್ದೇಶಕರುಗಳಾದ ಆನಂದಪ್ಪ,ಗಿರೀಶ್ ಚಾವಾಣ್,ಟಿ,ಎಲ್.ರಮೇಶ್, ನಿರಂಜನ,ಪರಮೇಶ್ವರಪ್ಪ,ರಾಮಸ್ವಾಮಿ,ಬಸವರಾಜಪ್ಪ,ಸತೀಸ್ ಇನ್ನೂ ಮುಂತಾದವರ ಜೊತೆಗೆ ಬಿಜೆಪಿ ಅಧ್ಯಕ್ಷ ದೇವರಾಜಶೆಟ್ಟಿ,ಮಾಜಿ ಅಧ್ಯಕ್ಷ ರಾದ ಕಲ್ಮರಡಪ್ಪ ಕೆಲವು ಬಿಜೆಪಿ ಮುಖಂಡರು ಪ್ರವಾಸದ ಜಾಲಿ ಮುಡ್ ನಲ್ಲಿದ್ದಾರೆ.ಆದರೆ ಚಿಕ್ಕಮಗಳೂರು ಶಾಸಕರು ಕಾಂಗ್ರೆಸ್ ನಲ್ಲಿ ಇರುವುದರಿಂದ ಪ್ರವಾಸ ಭಾಗ್ಯ ವಂಚಿತರಾಗಿದ್ದಾರೆ.ಬಿಜೆಪಿಯಲ್ಲಿದ್ದಾಗ ಇವರು ಪ್ರವಾಸದ ಭಾಗ್ಯದರರಾಗಿದ್ದರು. ಜೈ ಪ್ರಕಾಶ್,ಜೈ ಸಹಕಾರ ಮತ್ತೆ,ಮತ್ತೆ ಪ್ರವಾಸ ಭಾಗ್ಯ ಕೂಡಿಬರಲಿ ಸಹಕಾರ ಕ್ಷೇತ್ರ ಬೆಳೆಯಲಿ.

Share

Leave a comment

Leave a Reply

Your email address will not be published. Required fields are marked *

Don't Miss

ಮಂಜೆಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಬಲಪಡಿಸಲು ಸಂಕಲ್ಪ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೂತ್‌ಮಟ್ಟದಿಂದ ಮತ್ತಷ್ಟು ಬಲಪಡಿಸುವ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ಕಾಂಗ್ರೆಸ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್...

ರಾಷ್ಟ್ರೀಯ ಹೆದ್ದಾರಿ 173ರ ರಸ್ತೆ ಅಗಲೀಕರಣಕ್ಕೆ ಬೃಹತ್ ಮರಗಳಿಗೆ ಕೊಡಲಿ ಪೆಟ್ಟು

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 173ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಶತಮಾನದ ಇತಿಹಾಸವಿರುವ ಬೃಹತ್ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತಿರುವುದಕ್ಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೂಡಿಗೆರೆಯಿಂದ ಮೂಗ್ತಿಹಳ್ಳಿವರೆಗಿನ...

Related Articles

ನಕಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಹೆಸರಿನಲ್ಲಿ ಚಿನ್ನದ ಸರ ಪಡೆದು ವಂಚನೆ

ಚಿಕ್ಕಮಗಳೂರು: ತಾನು ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡು ಆಭರಣ ಮಳಿಗೆಯಿಂದ ₹1.82 ಲಕ್ಷ ಮೌಲ್ಯದ ಚಿನ್ನದ...

ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿಯಲ್ಲಿ ಚಿಕ್ಕಮಗಳೂರು-ಕಳಸ ಸೇರ್ಪಡೆ

ಚಿಕ್ಕಮಗಳೂರು: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಎರಡು ತಾಲ್ಲೂಕುಗಳು...

ಮನೆ ಬೀಗ ಮುರಿದು ₹7.06 ಲಕ್ಷ ಮೌಲ್ಯದ ನಗ-ನಗದು ಕಳವು

ಕಡೂರು: ಮನೆಯವರು ಕಣ್ಣಿನ ಚಿಕಿತ್ಸೆಗಾಗಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು...

ಮೆಸ್ಕಾಂ ಸಬ್‌ಸ್ಟೇಷನ್‌ನಿಂದ ₹31 ಲಕ್ಷ ಮೌಲ್ಯದ ಟ್ರಾನ್ಸ್‌ಫಾರ್ಮರ್ ಆಯಿಲ್ ಕಳವು

ಚಿಕ್ಕಮಗಳೂರು: ಹೊಸದಾಗಿ ನಿರ್ಮಿಸಲಾಗಿದ್ದ 66/11 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿನ ಟ್ರಾನ್ಸ್‌ಫಾರ್ಮರ್‌ಗೆ ತುಂಬಿಸಲಾಗಿದ್ದ ಸುಮಾರು 12,400 ಲೀಟರ್,...