ಚಿಕ್ಕಮಗಳೂರು: ಮೂರು ದಿನಗಳ ಸತತ ರಜೆಯ ಹಿನ್ನೆಲೆಯಲ್ಲಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರು ಕಾಫಿನಾಡು ಚಿಕ್ಕಮಗಳೂರಿನತ್ತ ಸಾಗರೋಪಾದಿಯಲ್ಲಿ ಹರಿದುಬಂದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಗಾಳಿಕೆರೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಪರೀತ ಜನಜಾತ್ರೆ ಸೃಷ್ಟಿಯಾಗಿದೆ. ಆದರೆ, ವಿಕೇಂಡ್ ಮೂಡ್‌ನಲ್ಲಿ ಗಿರಿಭಾಗ ವೀಕ್ಷಿಸಲು ಬಂದ ಸಹಸ್ರಾರು ಜನರಿಗೆ ಭಾರಿ ಟ್ರಾಫಿಕ್ ಜಾಮ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಗಿರಿಭಾಗಕ್ಕೆ ಏಕಾಏಕಿ ಸಾವಿರಾರು ಪ್ರವಾಸಿ ಕಾರುಗಳು ನುಗ್ಗಿದ್ದರಿಂದ ಮುಳ್ಳಯ್ಯನಗಿರಿಯ ಅತ್ಯಂತ ಕಿರಿದಾದ ರಸ್ತೆಯಲ್ಲಿ ವಾಹನಗಳು ಚಲಿಸಲಾಗದೆ ಜಾಗದಲ್ಲೇ ನಿಲ್ಲುವಂತಾಗಿದೆ. ಪ್ರಮುಖವಾಗಿ ಪಂಡರವಳ್ಳಿ ಹಾಗೂ ಸೀತಾಳಯ್ಯನಗಿರಿ ಭಾಗದಲ್ಲಿ ಭೀಕರ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸುಮಾರು ಸಾವಿರಕ್ಕೂ ಹೆಚ್ಚು ಕಾರುಗಳು ಸಾಲಿನಲ್ಲಿ ಸಿಲುಕಿಕೊಂಡಿವೆ.
ಇದರಿಂದಾಗಿ ಬೆಳಗಿನಿಂದಲೇ ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯಬೇಕಾದ ಕಾರಣ ಮಕ್ಕಳು, ವೃದ್ಧರು ಸೇರಿದಂತೆ ಇಡೀ ಪ್ರವಾಸಿಗರು ತೀವ್ರ ಹೈರಾಣಾಗಿದ್ದಾರೆ.
Traffic jam near Mullaiyanagari
Leave a comment