ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಲಾಂಗು ಮತ್ತು ಮಚ್ಚುಗಳಂತಹ ಮಾರಕಾಸ್ತ್ರಗಳು ಬಳಕೆ ತೀರಾ ಸಾಮಾನ್ಯ ಎಂಬಂತಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕೇಕ್ ಕತ್ತರಿಸುವ ಸಂಭ್ರಮಾಚರಣೆ ಇರಲಿ ಅಥವಾ ರಾಜಕೀಯ ನಾಯಕರ ನಡುವಿನ ಜಗಳವೇ ಇರಲಿ, ಎಲ್ಲದಕ್ಕೂ ಮಾರಕಾಸ್ತ್ರಗಳನ್ನು ಬಳಸುವ ಕೆಟ್ಟ ಸಂಸ್ಕೃತಿ ಹೆಚ್ಚಾಗುತ್ತಿದೆ. ಸೌಹಾರ್ದತೆಯಿಂದ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವ ಬದಲು, ಸಣ್ಣಪುಟ್ಟ ವಿಷಯಗಳಿಗೂ ಕೈಗೆ ಲಾಂಗು-ಮಚ್ಚುಗಳನ್ನು ತೆಗೆದುಕೊಳ್ಳುವ ಪ್ರವೃತ್ತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.
ಇದಕ್ಕೆ ಮತ್ತೊಂದು ಆಘಾತಕಾರಿ ಸೇರ್ಪಡೆ ಎಂಬಂತೆ, ಮೂಡಿಗೆರೆ ತಾಲೂಕಿನ ಜೇನುಬೈಲು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಲಾಂಗ್ ಹಿಡಿದು ಜಗಳವಾಡಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ತಲೆ ಎತ್ತಿದ್ದ ಅಕ್ರಮ ಕಟ್ಟಡವೊಂದರ ಬಗ್ಗೆ ತಾರೇಶ್ ಎಂಬುವವರು ಪ್ರಶ್ನೆ ಮಾಡಿದ್ದೇ ಈ ಘಟನೆಗೆ ಮುಖ್ಯ ಕಾರಣವಾಗಿದೆ.
ಇದರಿಂದ ತೀವ್ರ ಕೋಪಗೊಂಡ ಉದಯ್ ತಾರೇಶ್ ಅವರ ಮೇಲೆ ನೇರವಾಗಿ ಮಚ್ಚು ಹಿಡಿದು ಹಲ್ಲೆ ನಡೆಸಲು ಮುಂದಾಗಿದ್ದಾನೆ. ಘಟನೆಯ ತೀವ್ರತೆಯನ್ನು ಅರಿತ ಸ್ಥಳೀಯರು ತಕ್ಷಣವೇ ಮಧ್ಯಪ್ರವೇಶಿಸಿ ಇಬ್ಬರ ನಡುವಿನ ಜಗಳವನ್ನು ಬಿಡಿಸಿ ಕಳುಹಿಸುವ ಮೂಲಕ ಗಲಾಟೆಯನ್ನು ತಪ್ಪಿಸಿದ್ದಾರೆ. ನಡು ರಸ್ತೆಯಲ್ಲಿ ಲಾಂಗ್ ಹಿಡಿದ ವಿಡಿಯೋ ವೈರಲ್ ಆಗಿದ್ದು ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
The news of the long-awaited arrival of the coffee tree in the country of coffee
Leave a comment