Home Political News ಉಸ್ತುವಾರಿ ಸಚಿವ ಜಾರ್ಜ್ ಕಾಣೆ : ಬಿಜೆಪಿಗರು ಹೊಡೆದಿದ್ದಾರೆ ಗೋತ
Political News

ಉಸ್ತುವಾರಿ ಸಚಿವ ಜಾರ್ಜ್ ಕಾಣೆ : ಬಿಜೆಪಿಗರು ಹೊಡೆದಿದ್ದಾರೆ ಗೋತ

Share
Share

ಚಿಕ್ಕಮಗಳೂರು : 2004 ರಿಂದ 2024 ರವರೆಗೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬೇರೆ ಜಿಲ್ಲೆಯವರು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಬಂದು ಹೋಗುತ್ತಿದ್ದಾರೆ.
1998 ರಿಂದ2004 ರವರೆಗೆ ಡಿ.ಬಿ.ಚಂದ್ರೇಗೌಡರು ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯ ಜೀವರಾಜ್ ಮತ್ತು ಸಿ.ಟಿ.ರವಿ ತಿಂಗಳುಗಳ ಲೆಕ್ಕದಲ್ಲಿ ಉಸ್ತುವಾರಿಯಾಗಿದ್ದರು.

2004ರಲ್ಲಿ ಹಾಸನ ಜಿಲ್ಲೆಯ ಗಂಡಸಿ ಶಿವರಾಂ ಜಿಲ್ಲಾಉಸ್ತುವಾರಿ ಸಚಿವರದಾಗಿನಿಂದ ಇಲ್ಲಿಯವರೆಗೆ ಬೇರೆ ಜಿಲ್ಲೆಯವರು ಸಚಿವರಾಗಿ ನೆಂಟರು ಹಬ್ಬಕ್ಕೆ ಬಂದು ಹೋದಂತೆ ಬರುತ್ತಾರೆ ಹೋಗುತ್ತಾರೆ.

ಕಳೆದ ಒಂದುವರೆ ವರ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ.ಜಾರ್ಜ್ ಬಂದು ಹೋಗುತ್ತಿದ್ದಾರೆ.ಕಳೆದ ಸ್ವಾತಂತ್ರ್ಯ ದಿನಾಚರಣೆ ಬಾವುಟ ಹಾರಿಸಿ ಹೋದವರು ಕನ್ನಡ ರಾಜ್ಯೋತ್ಸವದ ಬಾವುಟ ಹಾರಿಸಲು ಬರುತ್ತಿದ್ದಾರೆ ಎಂಬ ಮಾಹಿತಿ ಇದೆ.

ಕಾಟಚಾರಕ್ಕೆನಡೆಯುವ ಕೆಡಿಪಿ ಸಭೆ ಬಿಟ್ಟರೆ ಬೇರೇನೂ ಕೆಳ ಬೇಡಿ ಜಿಲ್ಲೆಯಲ್ಲಿ ಸಮಸ್ಯೆ ಗಳ ಸರಮಾಲೆಗಳಿದ್ದು ಭೂಕುಸಿತ, ಒತ್ತುವರಿ ಸಮಸ್ಯೆ, ಕಸ್ತೂರಿ ರಂಗನ್ ವರದಿ ಎಂಬ ಭೂತ ಕಾಡುತ್ತಿದೆ,ಕಾಫಿ ಬೆಳೆಗಾರರ ಸಂಕಷ್ಟ, ಅಡಿಕೆ,ತೆಂಗಿಗೆ ಇರುವ ರೋಗಬಾದೆ,ನಿವೇಶನ ರಹಿತರ ಅಳಲು ನಿನ್ನೆ ಮೊನ್ನೆಯದಲ್ಲ ಈ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.

ಶ್ರೀಮಂತ ರಾಜಕಾರಣಿ ಯಾಗಿರುವ ಜಾರ್ಜ್ ಜಿಲ್ಲೆಯಲ್ಲಿ ಐದಾರು ಸಾವಿರ ಕಾಫಿ ತೋಟ ಹೊಂದಿದ್ದವು ಜಿಲ್ಲೆಗೆ ಬರಬೇಕಾದರೆ ಹೆಲಿಕ್ಯಾಪ್ಟರ್ ನಲ್ಲಿ ಬಂದು ಒಂದೆರಡು ಗಂಟೆಗಳ ಕಾಲ ಸಭೆಯಲ್ಲಿ ಇದ್ದರೆ ಹೆಚ್ಚು.

ಜನರ ಸಮಸ್ಯೆಗಳನ್ನು ಕೇಳಲು ಸಮಯದ ಅಭಾವ ವಯಸ್ಸಿನ ಕಾರಣವು ಇರಬಹುದು. ಇಲ್ಲಿನ ಶಾಸಕರು ಜೈ,ಜೈ ಎನ್ನುವುದು ನೋಡಿ ಕಾಂಗ್ರೆಸ್ ಮುಖಂಡರು ಕೈ,ಕೈ ಹಿಚುಕಿಕೊಂಡು ನಿಲ್ಲುತ್ತಾರೆ.ಹೀಗಾಗಿ ಜಾರ್ಜ್ ರಿಂದ ಜಿಲ್ಲೆಗೆ ರೌಂಡಪ್ (ಕಳೆನಾಶಕ) ಅಗಿ ಹೋಗುತ್ತಿದ್ದಾರೆ.ಇನ್ನಾದರೂ ಶಾಸಕರುಗಳು ಮತ್ತು ಮುಖಂಡರು ಗಟ್ಟಿ ಮನಸ್ಸು ಮಾಡಿ ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಲು ಒತ್ತಡ ತರುವ ಜವಾಬ್ದಾರಿ ಇದೆ.ಇಲ್ಲದಿದ್ದರೆ ಬಂದ ಪುಟ್ಟ ,ಹೋದ ಪುಟ್ಟ ಆಟ ಮುಂದುವರೆಯುತ್ತದೆ.

ವಿರೋಧ ಪಕ್ಷದವರು ಮೌನ ಕೂಡ ಕಾರಣವಾಗಿದೆ.ಸಿ.ಟಿ.ರವಿ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬರಿಸುತ್ತಾರೆ ಜಿಲ್ಲೆಗೆ ಬಂದ ತಕ್ಷಣವೇ ಧ್ವನಿ ಮೆತ್ತಗಾಗುವ ಮರ್ಮ ಗೊತ್ತಾಗುತ್ತಿಲ್ಲ ಇದು ಆಡಳಿತ ಪಕ್ಷದವರಿಗೆ ವರದಾನವಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಮಂಜೆಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಬಲಪಡಿಸಲು ಸಂಕಲ್ಪ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೂತ್‌ಮಟ್ಟದಿಂದ ಮತ್ತಷ್ಟು ಬಲಪಡಿಸುವ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ಕಾಂಗ್ರೆಸ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್...

ರಾಷ್ಟ್ರೀಯ ಹೆದ್ದಾರಿ 173ರ ರಸ್ತೆ ಅಗಲೀಕರಣಕ್ಕೆ ಬೃಹತ್ ಮರಗಳಿಗೆ ಕೊಡಲಿ ಪೆಟ್ಟು

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 173ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಶತಮಾನದ ಇತಿಹಾಸವಿರುವ ಬೃಹತ್ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತಿರುವುದಕ್ಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೂಡಿಗೆರೆಯಿಂದ ಮೂಗ್ತಿಹಳ್ಳಿವರೆಗಿನ...

Related Articles

ನಿಗಮ ಮಂಡಳಿ ಸ್ಥಾನ ನೀಡಲು ಪರದಾಡುತ್ತಿರುವ ಕಾಂಗ್ರೆಸ್

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಪತ್ತರಗುಟ್ಟುತ್ತಿದೆ.ಶಾಸಕರು ಮತ್ತು ಕಾಂಗ್ರೆಸ್ ದುಡಿದ ಮುಖಂಡರು ಕಣ್ಣ್...

ಜಿಲ್ಲೆಯ ಐದು ಜನ ಶಾಸಕರಿಗೆ ಬೊಗಣಿ ಗೂಟ ಖಚಿತ !?

ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವ ಜೊತೆಗೆ ಕಾಂಗ್ರೆಸ್ ಮುಖಂಡರು ಮತ್ತು...

“ತಮ್ಮಯ್ಯಾ… ಯಾರಯ್ಯಾ ನಿನ್ನ ಮೇಲೆ ಸೋತದ್ದು ಸಿ.ಟಿ.ರವಿ

ಬೀರೂರು (ಚಿಕ್ಕಮಗಳೂರು): “ತಮ್ಮಯ್ಯಾ… ಯಾರಯ್ಯಾ ನಿನ್ನ ಮೇಲೆ ಸೋತದ್ದು ಸಿ.ಟಿ.ರವಿ…”  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ...

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...