Home ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ
HomeLatest NewsNational NewsPolitical News

ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ

Share
Share

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾರನ್ನು ನಂಬಿದ್ದರು ಅವರೇ ಕೈ ಕೊಡುವ ಸೂಚನೆ ಅರಿತು ರಾಹುಲ್ ಮಾತು ಕೇಳಿದ ಮೇಲೆ ರಾಜೀನಾಮೆ ಕೊಟ್ಟಿದ್ದು ,ಯಾವ ಕಿತ್ತಾಟವೂ ನಡೆಯಲಿಲ್ಲಾ ಅಷ್ಟೊಂದು ತಣ್ಣಗೆ ಪ್ರತಿಕ್ರಿಯೆ ಮುಗಿಯಿತು ಎಂದು ಶಭಾಷ್ ಎನ್ನುತ್ತಿರುವಾಗ ನಡೆಯುತ್ತಿರುವ ಮೇಲಾಟಗಳನ್ನು ನೋಡಿದರೆ ಕಾಂಗ್ರೆಸ್ ನಲ್ಲಿ ಏನೋ ನಡೆಯುತ್ತಿದೆ ಎನ್ನಿಸುತ್ತದೆ.

ವಿಶೇಷವಾಗಿ ಕಣ್ಣು ಇಟ್ಟಿದ್ದ ಸತೀಶ್ ಜಾರಕಿಹೊಳೆಗೆ ಕಾಲೇಳೆಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.ಇದರ ಭಾಗವಾಗಿ ಡಿ.ಕೆ.ವಿರೋಧಿಸುತ್ತಿರುವ ಬಿ.ಕೆ.ಹರಿಪ್ರಸಾದ್ ಕೆ.ಪಿ.ಸಿ.ಸಿ ಅಧ್ಯಕ್ಷರಾಗುತ್ತಾರೆ ಎನ್ನಲಾಗುತ್ತಿದೆ.ಡಿ.ಕೆ.ಬಾಲ ಬಿಚ್ಚದಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ತಯಾರಿ ನಡೆದಿದೆ ಎಂದು ರಾಜಕೀಯ ವಿಶ್ಲೇಷಣೆ ಮಾಡಲಾಗುತ್ತಿದೆ.

ಮೂರು ಜನ ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ಬಿ ಪ್ಲಾನ್ ಇತ್ತು ಈಗ ಪರಮೇಶ್ವರ್ ಡಿ.ಸಿ.ಎಂ.ಆಗುತ್ತಿರುವುದು ಡಿ.ಕೆ.ಗೆ ಕೊಕ್ಕೆ ಹಾಕಲು ಎಂಬ ವಿಶ್ಲೇಷಣೆ ಮಾಡುವುದರ ಜೊತೆಗೆ ಸಿದ್ದರಾಮಯ್ಯ ಬೆಂಬಲದವರು ಸಂಪುಟಕ್ಕೆ ಹೆಚ್ಚು ಜನ ಸೇರಿದ ರೀತಿ ಮತ್ತು ಸ್ವತಃ ಸಿದ್ದರಾಮಯ್ಯ ಕಾಂಗ್ರೆಸ್ ನ ಉನ್ನತ ಸಮಿತಿ ಸಿ,ಡ,ಬ್ಲೂ ಸಿ,ಸಿ ಕಮಿಟಿಗೆ ನೇಮಕವಾಗಿರುವುದು ಡಿ.ಕೆ.ನಿದ್ದೆ ಕೆಡಿಸಿರಬಹುದು ಎಂದು ಅಂದಾಜಿಸಲಾಗಿದೆ.

ಸಿದ್ದರಾಮಯ್ಯ ಸುಮ್ಮನಿರಲು ಸಾಧ್ಯವಿಲ್ಲ ಏಕೆಂದರೆ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ ನನ್ನ ಎರಡು ಕಣ್ಣು ಹೋದರೂ ಪರವಾಗಿಲ್ಲ ಅವರ ವಿರೋಧಿಗಳ ಒಂದು ಕಣ್ಣದರೂ ಸರಿ ತೆಗೆಯ ಬೇಕು ಎಂದು ಪಣ ತೊಡುವುದರಲ್ಲಿ ನಿಪುಣರು ಎನ್ನಲಾಗುತ್ತಿದೆ. ಡಿ.ಕೆ.ಕೂಡ ಉನ್ನತ ಸ್ಥಾನ ಬಯಸಿ ಕೊನೆಯ ಹಂತ ತಲುಪಿದ್ದಾರೆ.ಇತ್ತೀಚೆಗಿನ ಧ್ವನಿ ಕೂಡ ತಗ್ಗಿದೆ.ಆದರೆ ದಿನಕ್ಕೊಂದು ಸವಾಲ್ ಎದುರಿಸಿ ಆಡಳಿತ ಮಾಡಬೇಕಾದ ಅಡಕತ್ತರಿಯಲ್ಲಿ ಇರುವುದು ಮಾತ್ರ ನಿಜ.ಇನ್ನೊಂದು ವರ್ಷ ಮಾತ್ರ ಅಧಿಕಾರ ನಂತರ ಚುನಾವಣೆಗೆ ತಯಾರಿ ನಡೆಸ ಬೇಕಾಗುತ್ತದೆ.

ಹರಿ, ಡಿ.ಕೆ.ಗಳಸ್ಯ ಕಂಠಸ್ಯದಂತಿದ್ದರು ಸಿದ್ದು -ಹರಿ ಹಾವು,ಮುಂಗುಸಿಯಂತಿದ್ದರು ಆದರೆ ಈಗ ಅದಲು ಬದಲುಗಿದ್ದಾರೆ.ಡಿ.ಕೆ.ಸ್ಥಾನ ಪಡೆದಿರುವ ಹರಿಪ್ರಸಾದ್ ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷರಾಗಿರುವುದು ಡಿ.ಕೆ.ಗೆ ಬಿಸಿತುಪ್ಪವಾಗಿದೆ.

ಇದರಲ್ಲಿ ಸಿದ್ದರಾಮಯ್ಯ ಕೈ ಮೇಲಾಗಿದೆ.ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ನವರ ನಂಬಿಕಸ್ಥರು ಏಳೆಂಟು ಜನರಿದ್ದಾರೆ ಇನ್ನುಳಿದ ಮೂರ್ ನಾಲ್ಕು ಜನ ಹೈಕಮಾಂಡ್ ನವರ ನಂಬಿಕ್ಥರು ಡಿ.ಕೆ.ತಾನು ಮುಖ್ಯಮಂತ್ರಿ ಎನ್ನಿಸಿಕೊಳ್ಳುವುದು ಬಿಟ್ಟರೆ ಮುಂದಿನ ಹೆಜ್ಜೆಗಳನ್ನು ಸುಲಭವಾಗಿ ಇಡಲು ಕಷ್ಟ,ಕಷ್ಟ.ಎಲ್ಲದಕ್ಕೂ ಕೊಕ್ಕೆ ಗ್ಯಾರಂಟಿ. ಓಡುವ ಬದಲು ತೆವಳಿ ದಡ ಮುಟ್ಟಬಹುದು ಇಲ್ಲ ಕಾಂಗ್ರೆಸ್ ನ ಕಿತ್ತಾಟ ಬಹುತೇಕ ಮುಂದುವರೆಯಲಿದೆ.ಹರಿಪ್ರಸಾದ್,ಬ್ರೇಕ್, ಸಿದ್ದರಾಮಯ್ಯ ರ ಸ್ಟೀರಿಂಗ್ ಗಾಡಿ ಯಾವಕಡೆ ಹೋಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಈಗಾಗಲೇ ಕೋಲ್ಡ್ ವಾರ್ ಪ್ರಾರಂಭವಾಗಿದೆ ಎನ್ನುವುದಕ್ಕೆ ಬಿ.ಕೆ.ಹರಿಪ್ರಸಾದ್ ಅಧ್ಯಕ್ಷರಾದ ದಿನವೇ ಅಧಿಕಾರ ಬೇಕಾದವರು ಡಿ.ಕೆ.ಶಿವಕುಮಾರ್ ಜೊತೆಗೆ ಹೋಗಿ ಪಕ್ಷ ಬೇಕಾದವರು ನಮ್ಮ ಜೊತೆಗೆ ಬನ್ನಿ ಎಂಬ ವಿವಾದಾತ್ಮಕ ಹೇಳಿಕೆ ಬೆಂಕಿಗೆ ಪೆಟ್ರೋಲ್ ಸೇರಿದಂತೆ ಆಗಿದೆ ಬೆಂಕಿ ಜ್ವಾಲೆ ಎಲ್ಲಾ ಕಡೆ ವ್ಯಾಪಿಸಲು ಹೆಚ್ಚು ದಿನ ಬೇಕಾಗಿಲ್ಲ.

Hari brakes Sidhu which way does the steering turn?

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ವೈದ್ಯನ ಡಬಲ್ ಡ್ಯೂಟಿ.!

ಚಿಕ್ಕಮಗಳೂರು : ಸರ್ಕಾರದ ಬೊಕ್ಕಸದಿಂದ ಕೈತುಂಬಾ ಸಂಬಳ ಪಡೆಯುತ್ತಾ, ಕರ್ತವ್ಯದ ಸ್ಥಳದಲ್ಲಿ ರೋಗಿಗಳನ್ನು ಸತಾಯಿಸಿ ನೆರೆಯ ಕೇರಳದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಗಂಭೀರ ಆರೋಪ...

ಶಾಸಕರುಗಳಿಗೆ ಅಧಿಕಾರದ ಹಠ-ರೈತರಿಗೆ ಬರಗಾಲದ ಭಯ

ಕಡೂರು ಬರಪೀಡಿತ ತಾಲೂಕು ಪಟ್ಟಿಯಿಂದ ಹೊರಕ್ಕೆ: ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಕಡೂರು: ಕಡೂರು ತಾಲ್ಲೂಕು ಪ್ರತಿ ವರ್ಷವೂ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, ಪ್ರಸಕ್ತ ಸಾಲಿನ ಬರಪೀಡಿತ ತಾಲೂಕುಗಳ ಪಟ್ಟಿಯಿಂದ...

Related Articles

ಕಾಡಾನೆ-ಕಾಡುಕೋಣ ದಾಳಿಯಿಂದ ಭೀತಿಯಲ್ಲಿ ಕಾರ್ಮಿಕರು

ಮೂಡಿಗೆರೆ: ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಒಂದೆಡೆ...

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಪ್ರಾಧ್ಯಾಪಕರ ಹಾಜರಾತಿ ತಿದ್ದುಪಡಿ ಆರೋಪ

ಚಿಕ್ಕಮಗಳೂರು: ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (CIMS)ಯಲ್ಲಿ ಸಹಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಗಣೇಶ್ ಪಿ....

ನೂತನ ಜಿಲ್ಲಾಡಳಿತ ಸಂಕೀರ್ಣ ಮಾರ್ಚ್-ಏಪ್ರಿಲ್ ವೇಳೆಗೆ ಲೋಕಾರ್ಪಣೆ

ಚಿಕ್ಕಮಗಳೂರು: ಕಾಫಿನಾಡಿನ ಸಮಗ್ರ ಅಭಿವೃದ್ಧಿ ನೀಲನಕ್ಷೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ನೂತನ ಜಿಲ್ಲಾಡಳಿತ ಸಂಕೀರ್ಣದ (ಡಿಸಿ...

ತರೀಕೆರೆಯಲ್ಲಿ ಖಾಸಗಿ ಬಸ್ ಏಜೆಂಟ್‌ರ ನಡುರಸ್ತೆಯಲ್ಲೇ ಪುಂಡಾಟ

ತರೀಕೆರೆ: ಸರ್ಕಾರಿ ಬಸ್ ಚಾಲಕನ ಮೇಲೆ ಖಾಸಗಿ ಬಸ್ ಏಜೆಂಟ್‌ಗಳು ನಡುರಸ್ತೆಯಲ್ಲೇ ಪುಂಡಾಟ ನಡೆಸಿ, ರಕ್ತ...