Home namma chikmagalur chikamagalur 15.99 ಲಕ್ಷ ಜನರ ಸಂಧ್ಯಾ ಸುರಕ್ಷಾ ಯೋಜನೆಯ ರದ್ದು
chikamagalurHomeLatest Newsnamma chikmagalur

15.99 ಲಕ್ಷ ಜನರ ಸಂಧ್ಯಾ ಸುರಕ್ಷಾ ಯೋಜನೆಯ ರದ್ದು

Share
Share

ಚಿಕ್ಕಮಗಳೂರು: ರಾಜ್ಯ ಸರಕಾರ ನೀಡುತ್ತಿರುವ ಸಂಧ್ಯಾ ಸುರಕ್ಷಾ ಯೋಜನೆಯ ಪ್ರಯೋಜನ ೧೫.೯೯ ಲಕ್ಷ ಜನರಿಗೆ ರದ್ದಾಗಿದ್ದು ಕೂಡಲೇ ಬಾಕಿ ಪಿಂಚಣಿ ಬಿಡುಗಡೆ ಮಾಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೋಬಳಿ ಅಧ್ಯಕ್ಷ ಬಿ.ಎಂ.ಲಿಂಗದೇವರು ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಧ್ಯಾಸುರಕ್ಷಾ ಯೋಜನೆಯಡಿ ೧೨೦೦ ರೂ .ಮಾಸಾಸನ ಪಡೆಯುತ್ತಿದ್ದ ೨೩.೧೩ ಲಕ್ಷ ಪಿಂಚಣಿದಾರರ ಪೈಕಿ ೧೫.೯೯ ಲಕ್ಷ ಜನರ ಪಿಂಚಣಿಯನ್ನು ಸರಕಾರ ತಡೆಹಿಡಿದಿದೆ.

ಇದರಿಂದ ಹಿರಿಯ ನಾಗರೀಕ ಜೀವಗಳಿಗೆ ತಮ್ಮ ಸಣ್ಣಪುಟ್ಟ ಖರ್ಚು, ವೈದ್ಯಕೀಯ ವೆಚ್ಚಗಳಿಗೆ ತೊಂದರೆಯಾಗಿದೆ. ಪರಿಶೀಲನೆ ಹೆಸರಲ್ಲಿ ಪಿಂಚಣಿ ನಿಲ್ಲಿಸಿರುವುದು ಹಿರಿಯ ಜೀವಗಳಿಗೆ ಶಾಪವಾಗಿ ಪರಿಣಮಿಸಿದೆ ಎಂದು ದೂರಿದರು.

ಕೆಲವು ಲಂಚಕೋರ ಅಕಾರಿಗಳ ಲಾಭಕೋರ ತನದಿಂದ ೪೦-೪೫ ವರ್ಷ ದವರಿಗೂ ಮಾಶಾಸನ ನೀಡಿ ಯೋಜನೆಯನ್ನು ಹಳ್ಳಹಿಡಿಸಿರುವುದು ನಿರ್ವಿವಾದ ಎಂದರು.

ಈ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕಾದ ವಿರೋಧ ಪಕ್ಷಗಳು ಜಾಣಮೌನ ವಹಿಸಿವೆ. ಆದರೆ, ರೈತ ಸಂಘ, ಒಕ್ಕೂಟಗಳು ರೈತರಿಗೋಸ್ಕರ ನಿರಂತರ ಹೋರಾಟ ಮಾಡುತ್ತಿವೆ ಎಂದು ಹೇಳಿದರು.

ಹಿಂಬಾಕಿ ಪಿಂಚಣಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಯೋಜನೆಗೆ ಬಿಪಿಎಲ್ ಕಾರ್ಡ್ ಆದ್ಯತೆ ಮಾಡಿ ಅನರ್ಹರನ್ನು ವಜಾಗೊಳಿಸುವುದು,ತಪ್ಪಿತಸ್ಥ ಅಕಾರಿಗಳನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

Sandhya Suraksha Yojana for 15.99 lakh people cancelled

Share

Leave a comment

Leave a Reply

Your email address will not be published. Required fields are marked *

Don't Miss

ಮಲೆನಾಡಿನ ಕರಾಳ ಅರಣ್ಯ ಕಾಯ್ದೆ ರದ್ದುಪಡಿಸಿ

ಚಿಕ್ಕಮಗಳೂರು: ಮಲೆನಾಡಿನ ಜನರ ಬದುಕಿಗೆ ತೊಂದರೆ ಉಂಟುಮಾಡುತ್ತಿರುವ ಕರಾಳ ಅರಣ್ಯ ಕಾಯ್ದೆಗಳನ್ನು ರದ್ದುಪಡಿಸುವುದರ ಜೊತೆಗೆ, ಹಲವು ವರ್ಷಗಳಿಂದ ಭೂಮಿ ಹಾಗೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರು, ಕಾರ್ಮಿಕರು, ದಲಿತರು ಹಾಗೂ...

ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ಗೆ 6.87 ಕೋಟಿ ರೂ. ನಿವ್ವಳ ಲಾಭ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್) 2025-26ನೇ ಸಾಲಿನ ಮಾರ್ಚ್ ಅಂತ್ಯಕ್ಕೆ 6.87 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 98.05ರಷ್ಟು ಸಾಲ ವಸೂಲಾತಿ ಸಾಧಿಸಿದೆ ಎಂದು...

Related Articles

ಗಂಜಿ ಗಿರಾಕಿಗಳ ಅಟ್ಟಾಹಾಸಕ್ಕೆ ವೀರೇಂದ್ರ ಬಲಿಪಶು ??

ಸಖಾರಾಯಪಟ್ಟಣ: ಇಲ್ಲಿಗೆ ಸಮೀಪದ ಮುಸ್ಲಪುರ್ ಹಟ್ಟಿಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಗೆ 15 ರ ನಡು...

ಎಸ್‌ಐಆರ್‌ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ

ಚಿಕ್ಕಮಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ...

ಸೌಜನ್ಯ ಪ್ರಕರಣದ ಕುರಿತು ಪಾರದರ್ಶಕ ತನಿಖೆಯಾಗಬೇಕು.

ಚಿಕ್ಕಮಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆಯಂತೆ ಎಸ್‌ಐಟಿ ರಚಿಸಿ ತನಿಖೆಯನ್ನು ಕಾಲಮಿತಿಲ್ಲಿ ಪೂರ್ಣಗೊಳಿಸಬೇಕು....

ಮಂಜೆಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಬಲಪಡಿಸಲು ಸಂಕಲ್ಪ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೂತ್‌ಮಟ್ಟದಿಂದ ಮತ್ತಷ್ಟು ಬಲಪಡಿಸುವ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು...