ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಗೆದ್ದು ಬರಲಿ ನಾವು ಶರಣಾಗುತ್ತೇವೆ.
ಸುದ್ದಿಗೋಷ್ಟಿಯಲ್ಲಿ ಬುಧವಾರ ಹೀಗೆಂದು ಹೇಳಿದವರು ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಪರಿಶ್ರಮದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದೇನೆ ಎನ್ನುವುದನ್ನು ಮರೆಯಬಾರದು. ದಲಿತ ಮಹಿಳೆಯಾಗಿರುವುದರಿಂದ ಪಕ್ಷದಲ್ಲಿ ಕೆಲವರು ನನ್ನನ್ನು ತುಳಿಯುತ್ತಿದ್ದಾರೆಂದು ಹೇಳುವ ಮೂಲಕ ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆಂದು ತಿಳಿಸಿದರು.
ಮೂಡಿಗೆರೆಗೆ ನೀವು ಹಿಟ್ಲರಾ ಎಂದು ಕೇಳಿದ ಅವರು, ಮುಂದೊಂದು ದಿನ ನೀವು ಮಾಜಿಯಾಗಲೇಬೇಕು. ಈಗ ನೀವು ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ, ಪಕ್ಷದ ಮುಖಂಡರಿಗೆ ಗೌರವ ಕೊಡುವುದನ್ನು ಮೊದಲು ಕಲಿತುಕೊಳ್ಳಬೇಕಿದೆ ಎಂದು ಹೇಳಿದರು.
ಜಾತ್ಯತೀತ ಸಿದ್ಧಾಂತ ಇಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷದಲ್ಲಿರುವ ನೀವು ಕೋಮುವಾದಿ ಸಿದ್ಧಾಂತಹೊಂದಿರುವ ಪ್ರಮೋದ್‌ಮುತಾಲಿಕ್ ಅವರೊಂದಿಗೆ ವೇದಿಕೆಹಂಚಿಕೊಂಡು ಅವರನ್ನು ಹೊಗಳಿ ಕೇಸರಿಶಾಲು ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ. ನೀವು ಕಣ್ಣುಬಿಡುವ ಮೊದಲೇ ರಾಜಕಾರಣಕ್ಕೆ ಬಂದ ಕಾಂಗ್ರೆಸ್ ಮುಖಂಡರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕಿದೆ ಎಂದರು.
ಬ್ಲಾಕ್‌ಕಾಂಗ್ರೆಸ್ ಮುಖಂಡ ಹೆಚ್.ಜಿ.ಸುರೇಂದ್ರ ಮಾತನಾಡಿ,ನಯನಮೋಟಮ್ಮ ಶಾಸಕರಾಗಿ ಮೂರುವರ್ಷಗಳಾಗಿದ್ದು, ಕಚೇರಿಯಲ್ಲಿ ಸಭೆ ನಡೆಸಿಲ್ಲ, ಅವರ ನಡವಳಿಕೆ ಕುರಿತು ಅವರ ತಾಯಿ ಮೋಟಮ್ಮ ಅವರೊಂದಿಗೆ ಎರಡು ಬಾರಿ ಚರ್ಚಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರೊಂದಿಗೂ ಮಾತನಾಡಿದ್ದು, ಸರಿಪಡಿಸುವ ಭರವಸೆ ನೀಡಿದ್ದರು. ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಈ ಕುರಿತು ಮಾತನಾಡಿದ್ದೇನೆಂದು ತಿಳಿಸಿದರು.
ಈ ಹಿಂದೆ ಮೂಡಿಗೆರೆಯಲ್ಲಿ ಗೆಲುವುಸಾಧಿಸಿದ್ದ ಕೆ.ಹೆಚ್.ರಂಗನಾಥ, ಜಿ.ಪುಟ್ಟಸ್ವಾಮಿ, ತಿಪ್ಪಯ್ಯ ಅವರುಗಳು ಜನರ ಮನಸ್ಸು ಗೆದ್ದವರು. ಚುನಾವಣೆಯಲ್ಲಿ ಗೆಲ್ಲುವ ಮೊದಲು ಒಂದು ನಡವಳಿಗೆ ಗೆದ್ದಮೇಲೆ ಮತ್ತೊಂದು ನಡವಳಿಕೆ ಪ್ರದರ್ಶಿಸುತ್ತಿದ್ದೀರಿ ಪಕ್ಷದ ಕೆಲವು ಮುಖಂಡರ ಬಗ್ಗೆ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿಕ ಮೂಡಿಗೆರೆ ಕ್ಷೇತ್ರದಲ್ಲಿ ಶಕ್ತಿವಂತ ಸಮುದಾಯ ಗೆಲುವಿಗೆ ಸಹಾಯಮಾಡಿದ್ದಾರೆ. ನೀವು ಆತ್ಮವಾಲೋಕನಮಾಡಿಕೊಳ್ಳಬೇಕು.ಪಕ್ಷಕ್ಕೆ ದುಡಿದವರ,ಗೆಲುವಿಗೆ ಶ್ರಮಿಸಿದವರನ್ನು ಮರೆಯಬಾರದು. ರಾಜ್ಯಮಟ್ಟದಲ್ಲಿ ಪಕ್ಷಕಟ್ಟಬೇಕಾದ ಎಲ್ಲರಿಗೂ ಮಾರ್ಗದರ್ಶನ ಮಾಡಬೇಕಾದ ಮೋಟಮ್ಮನವರು ಮಗಳಿಗಾಗಿ ರಾಜಕಾರಣ ಮಾಡಬಾರದು.ಬುದ್ದಿವಾದವನ್ನು ಹೇಳಬೇಕಾಗಿದೆ ಎಂದು ಹೇಳಿದರು.
ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮಹ್ಮದ್ ಮಾತನಾಡಿ,ಮೂಡಿಗೆರೆಯಲ್ಲಿ ಕೋಮುವಾದಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿರುವುದು ತಪ್ಪು, ಉಡಾಫೆಯಾಗಿ ಮಾತನಾಡಿರುವುದು ಸಮುದಾಯದ ಮುಖಂಡರಿಗೆ ನೋವುಂಟುಮಾಡಿದ್ದು, ನಿಮ್ಮ ವಿರುದ್ಧ ಪಕ್ಷ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ,ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಸಹಜ. ಅದನ್ನು ಸರಿಪಡಿಸಿಕೊಳ್ಳಬೇಕೆ ಹೊರತು ದಲಿತ ಪದವನ್ನು ಟ್ರಂಪ್‌ಕಾರ್ಡ್ ಮಾಡಿಕೊಳ್ಳಬಾರದು. ಜನರ ಸೇವೆಗೆ ಬಂದಿರುವ ಜನಪ್ರತಿನಿಧಿಗಳು ಭೇಟಿಗೆ ಸಮಯ ನಿಗದಿಪಡಿಸಿಕೊಳ್ಳುವುದು ಸರಿಯಲ್ಲವೆಂದರು. ಮುಖಂಡ ಎಂ.ಪಿ.ಮನು ಮಾತನಾಡಿ,ಶಾಸಕಿಯ ಹೇಳಿಕೆಗಳು ಪಕ್ಷದ ಮುಖಂಡರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಪದ ಬಳಕೆ ಸರಿಯಾಗಿ ಕಾಣುತ್ತಿಲ್ಲ, ಮಾಜಿ ಸಚಿವೆ ಮೋಟಮ್ಮ ಅವರು ಮಗಳಿಗೆ ಬುದ್ದಿವಾದ ಹೇಳಬೇಕೆ ಹೊರತು ಮಗಳ ಪರವಾಗಿ ಮಾತನಾಡುವುದು ಸರಿಯಲ್ಲವೆಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಬಿ.ಎಸ್.ಜಯರಾಂ,ಜಿ.ಹೆಚ್.ಹಾಲಪ್ಪಗೌಡ, ಮರಗುಂದ ಪ್ರಸನ್ನ, ಸಿ.ಕೆ.ಇಬ್ರಾಹಿಂ, ಎ.ಸಿ.ಅಯೂಬ್, ಕೆ.ಭರತ್ ಇದ್ದರು.
If MLA Nayana has any morals she should resign and win.
Leave a comment