Home namma chikmagalur chikamagalur ಕಾಂಗ್ರೆಸ್ ನಲ್ಲಿ ಶಾಕರುಗಳ ಚೆಲ್ಲಾಟ.! ಮುಳುಗುತ್ತಿರುವ ಕಾರ್ಯಕರ್ತರು ?
chikamagalurHomeLatest Newsnamma chikmagalur

ಕಾಂಗ್ರೆಸ್ ನಲ್ಲಿ ಶಾಕರುಗಳ ಚೆಲ್ಲಾಟ.! ಮುಳುಗುತ್ತಿರುವ ಕಾರ್ಯಕರ್ತರು ?

Share
Share

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ನಲ್ಲಿ ಶಾಸಕರುಗಳ ಚೆಲ್ಲಾಟದಿಂದಾಗಿ ಕಾರ್ಯಕರ್ತರು ನಲುಗಿದ್ದಾರೆ ಎಂದು ಹೇಳಲಾಗುತ್ತಿದೆ.ಅಧಿಕಾರ ಮದ,ಹಣ ಬಲದಿಂದ ಶಾಸಕರಾಗಿದ್ದೇವೆ ಎನ್ನುವವರ ಮುಂದೆ ಪದಾಧಿಕಾರಿಗಳು ಹಲ್ಲುಗಿಂಜಿ ನಿಲ್ಲುವ ದುಸ್ಥಿತಿಯಲ್ಲಿ ಇದ್ದು ಮುಂದೆ ಮುಳುಗಲು ಪಿಠೀಕೆ ಬರೆಯಬಹುದು.ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಒಒ್ಬ ಶಾಸಕರನ್ನು ಚುನಾಯಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ನಡೆದಿಯುವುದೇ ಹಾದಿ ಮಾಡುವುದೆ ಅಧಿಕಾರ ಎನ್ನುವ ಉಮೇದಿಯಲ್ಲಿರುವ ಶಾಸಕರನ್ನು ಕಾದು ನಿಲ್ಲಬೇಕಾಗಿದೆ ಎನ್ನುತ್ತಾರೆ.

ಶ್ರೀನಿವಾಸ್; ತರೀಕೆರೆ ಶಾಸಕ ಶ್ರೀನಿವಾಸ್ ಮಂತ್ರಿ ಯಾಗ ಬೇಕೆಂದು ಹಟ ಹಿಡಿದು ಲಾಭಿ ಮಾಡತ್ತಿದ್ದಾರೆ.ಇದನ್ನು ಕಂಡ ಕಾಂಗ್ರೆಸ್ ನವರು ಮಂತ್ರಿಯಾಗಬೇಕಾದರೆ ನಿನ್ನ ಪರ ಯಾವ ಶಾಸಕರು ಇಲ್ಲ ಎಂದು ಹೇಳಿಕಳುಹಿಸಿದ್ದರಿಂದಾಗಿ ಜಪಿಂಗ್ ಶಾಸಕ ತಮ್ಮಯ್ಯ ನಿಗೆ ಗಾಳ ಹಾಕಿದ್ದು ಇಬ್ಬರು ದೆಹಲಿಯಲ್ಲಿ ಖರ್ಗೆ ಸೇರಿದಂತೆ ಹಲವರ ಬಳಿ ಅಲವತ್ತುಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ.ಮಂತ್ರಿಗಿರಿ ಬೇಕೇ ಬೇಕು ಎನ್ನುವ ಶಾಸಕ ಶ್ರೀನಿವಾಸ್ ಕ್ಷೇತ್ರದಲ್ಲಿ ಕುಟುಂಬದವರನ್ನು ಬಿಟ್ಟು ಅಧಿಕಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ಕೂಗು ಗಿರಿ ಮುಟ್ಟಲು ಸಾಧ್ಯವಿಲ್ಲದ ದುಸ್ಥಿತಿ ತಲುಪಿದೆ.

ಡಿ.ಕೆ.ಬಂಟ ಗೋಪಿ ಕೃಷ್ಣನ ಕಾಟ ತಡೆಯುವುದರ ಬಗ್ಗೆ ಲೆಕ್ಕಾಚಾರ ಮಾಡಿ ಅಜ್ಜಯ್ಯನ ಭೇಟಿ ಮಾಡಿ ಬಂದಿರುವುದು ಸಾಕ್ಷಿ ಎನ್ನಲಾಗುತ್ತಿದೆ.ಹಲವು ಬಾರಿ ಜಪಿಂಗ್ ಮಾಡಿರುವ ತಮ್ಮಯ್ಯ ಪವರ್ ಪುಲ್ ಎನ್ನುತ್ತಲೇ ಮಂತ್ರಿಯಾಗಲು ದೆಹಲಿಗೆ ಹೋಗಿ ಬಂದಿರುವುದು ನೋಡಿದರೆ ಆಶ್ಚರ್ಯ ಆಗುತ್ತಿದೆ . ಈಗಾಗಲೇ ಎರಡು ಜನ ಕುರುಬ ಜನಾಂಗದ ಮಂತ್ರಿಗಳಾಗಿದ್ದು ಇನ್ನೊಬ್ಬ ಮಂತ್ರಿಯಾಗ ಬೇಕಾದರೆ ಸಿದ್ದರಾಮಯ್ಯನಂತಹ ಚಾಂಪಿಯನ್ ಬಿಟ್ಟು ಹೈಕಮಾಂಡ್ ತೀರ್ಮಾನ ತೆಗೆದು ಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಸಹಜ.

ತಮ್ಮಯ್ಯ; ಚಿಕ್ಕಮಗಳೂರು ಶಾಸಕ ತಮ್ಮಯ್ಯ ಜಪಿಂಗ್, ಜಪಿಂಗ್ ಎನ್ನುವುದು ನೋಡಿದರೆ ಯಾವಾಗ ಜಂಪ್ ಮಾಡಬಹುದು ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ವಲಯದಲ್ಲಿ ಚರ್ಚೆ ಆಗುತ್ತಿರುವಾಗ ಮೊದಲು ಡಿ.ಕೆ.ಪರ ವಿನಯ್ ಗುರುವಿನ ಮುಂದೆ ಹೇಳಿದ್ದು ನೋಡಿ ಶಾಕ್ ಆದ ಅಹಿಂದ ವರ್ಗಗಳಿಗೆ ಯೂಟರ್ನ್ ಹೊಡೆದರೆ ಇತ್ತೀಚೆಗೆ ಮತ್ತೆ ಬಾಳೆಹೊನ್ನುರು ಗುರುಗಳ ಮುಂದೆ ಡಿ.ಕೆ.ಬಗ್ಗೆ ಹೇಳಿದ್ದನು ಕೇಳಿದ ಅಹಿಂದ ಮುಖಂಡರು ಮತ್ತು ಜನ ತಿರುಗಿ ನಿಂತಿದ್ದಾರೆ.

ರಾಜೇಗೌಡರ ಪರ ಇರಬೇಕಾದ ತಮ್ಮಯ್ಯ ಮತ್ತೆ ಜಂಪ್ ಮಾಡಿ ಶ್ರೀನಿವಾಸ್ ಗೆ ಮಂತ್ರಿ ಮಾಡಲು ದೆಹಲಿ ತಲುಪಿ ಬಂದಿರುವುದು ಮತ್ತೆ ಜಂಪ್ ಗೆ ಪಕ್ಕಾ ಸುದ್ದಿ.ಅನಧಿಕೃತವಾಗಿ ನಾಲ್ಕಾರು ಪತ್ರಿಕೆಯ ಮಾಲೀಕ.ಹೀಗಾಗಿ ಯಾವ ಸುದ್ದಿಗಳ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ಯಾರು ಕರೆದರು ಸಲೀಸಾಗಿ ಊಟಕ್ಕೆ ಕೂರುವ ತಮ್ಮಯ್ಯ ರ ಬಗ್ಗೆ ಕ್ಷೇತ್ರದಲ್ಲಿ ಸಮಾಧಾನವಿದ್ದರು ಕುದಿಯುತ್ತಿರುವ ಅಹಿಂದ ವರ್ಗಗಳ ಬಳಿ ಜಂಪ್ ಮಾಡುತ್ತಾರೆ ಎನ್ನಲಾಗಿದೆ. ಹೇಳಿ ಕೊಳ್ಳುವ ಕೆಲಸಗಳು ಇಲ್ಲ ಇರುವ ರಸ್ತೆಗಳಿಗೆ ತೇಪೆ ಹಾಕಿದ್ದನ್ನು ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಜೊತೆಗೆ ಇದ್ದ ಬೋಜೇಗೌಡ ಬಿಜೆಪಿ ಕಡೆಯಿರುವುದು ಮುಂದಿನ ದಿನಗಳಲ್ಲಿ ಯಾವ ಬದಲಾವಣೆ ಸಾಧ್ಯ?

ನಯನಾ; ಮೂಡಿಗೆರೆ ಶಾಸಕಿ ನಯನಾರ ಕಿರಿಕ್ ರಾಜಕಾರಣಕ್ಕೆ ಬೇಸತ್ತಿರುವ ಮೂಲ ಕಾಂಗ್ರೆಸ್ ಅರ್ಜಿ ಕೊಟ್ಟು,ಕೊಟ್ಟು ಸಾಕಾಗಿ ರೋಸಿ ಹೋಗಿದ್ದನ್ನು ಕೇರ್ ಮಾಡದೆ ಕಾಂಗ್ರೆಸ್ ಕಛೇರಿ ಗೆ ಭೇಟಿ ಕೊಡದೆ ತಮ್ಮ ಕಛೇರಿಯಲ್ಲಿ ಕಾಂಗ್ರೆಸ್ ಕಟ್ಟುವೆ ಎಂದು ಶೆಡ್ಡು ಹೊಡೆದು ಡಿ.ಕೆ.ಗೆ ನಾನೇ ರಾಜಕೀಯ ಕಾರ್ಯದರ್ಶಿ ಎಂದು ಟ್ರಿಪ್ ಹೊಡೆದು ಮನೆ ಸೇರವುದು ಖಚಿತ ಎನ್ನುವಂತೆ ದಳ ಬಿಜೆಪಿ ಮೈತ್ರಿ ಬಗ್ಗೆ ತಲೆಕೆಡಿಸಿ ಕೊಂಡಿಲ್ಲದಿರವುದು ನೋಡಿದರೆ ಆಶ್ಚರ್ಯವಾಗುತ್ತಿದೆ.ಸದಾಕಾಲವೂ ರಗಳೆಯಲ್ಲಿ ಮುಳುಗಿರುವುದನ್ನು ಕಾಂಗ್ರೆಸ್ ಕಾರ್ಯಕರ್ತರು ಮರೆಯಲಾಗದ ತಪ್ಪು ಮಾಡಿದ್ದೇವೆ ಎಂದು ನೊಂದು ಹೇಳುತ್ತಾರೆ.

ಟಿ.ಡಿ.ರಾಜೇಗೌಡ; ಶೃಂಗೇರಿ ಕ್ಷೇತ್ರದಲ್ಲಿ ರಾಜೇಗೌಡ ಗೆದ್ದಾಗಿನಿಂದ ಕೋರ್ಟಿಗೆ ಹೆಚ್ಚು ಸಮಯ ಮೀಸಲು ಇಟ್ಟಿದ್ದಾರೆ.ಬಿಜೆಪಿಯವರು ಬೆನ್ನು ಬಿಡದೆ ಕಾಡುತ್ತಿದ್ದಾರೆ.ಅಂತೂ ಸುಪ್ರೀಂ ಕೋರ್ಟ್ ನಲ್ಲಿ ಶಾಸಕ ಸ್ಥಾನ ಉಳಿಸಿಕೊಂಡಿದ್ದಾರೆ. ಒಂದು ರಾಜಕೀಯ ಜಟಾಪಟಿ ಇನ್ನೊಂದು ಕಡೆ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಘಾಟು .ಕಾಂಗ್ರೆಸ್ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ರವೀಂದ್ರ ಕುಕ್ಕಡಿಗೆ ಕೆಲವೇ ಜನ ಕರೆದುಕೊಂಡು ಓಡಾಡುತ್ತಿರುವ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿರುವುದು ನೋಡಿದರೆ ಇಲ್ಲೂ ಅಸಮಾಧಾನ ಎದ್ದು ಕಾಣುತ್ತಿದೆ.ಕಾಂಗ್ರೆಸ್ ಗೆ ರಾಜೇಗೌಡರ ಅನಿವಾರ್ಯವಾಗಿದ್ದಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.ದಳ ಬಿಜೆಪಿ ಮೈತ್ರಿ ಆದರೆ ಇನ್ನೂರು ಚಿಲ್ಲರೆ ಮತಗಳಿಂದ ಗೆದ್ದಿರುವ ರಾಜೇಗೌಡ ರಾಜಕೀಯವಾಗಿ ಸೋಲಬಹುದು ಎನ್ನುತ್ತಾರೆ ಜನ.ಮಂತ್ರಿ ಆಗಬೇಕು ಎಂದು ಡಿ.ಕೆ.ಬಳಿ ಹೋಗಿದ್ದಾಗ ನಾನೇ ಮುಖ್ಯಮಂತ್ರಿ ಕ್ಷೇತ್ರದ ಕಡೆ ಗಮನ ಹರಿಸಲು ಹೇಳಿದ್ದಾರೆ. ಜಿಲ್ಲೆಯ ವಿಸ್ತೀರ್ಣವಾದ ಶೃಂಗೇರಿ ಕ್ಷೇತ್ರದಲ್ಲಿದ್ದಾರೆ.

ಅನಂದ್; ಕಡೂರು ಕ್ಷೇತ್ರದ ಶಾಸಕ ಆನಂದ್ ಟುವಿ,ಟುವಿ ಎಂದು ಜಿಲ್ಲಾಧಿಕಾರಿ ಮತ್ತು ಎಸ್.ಪಿ ಯವರಿಗೆ ಮನವಿ ಸಲ್ಲಿಸುವುದು ನೋಡಿದರೆ ಆಶ್ಚರ್ಯವಾಗುವುದು ಸಹಜ .ಕಡೂರು ಕ್ಷೇತ್ರದಲ್ಲಿ ಎನು ನಡೆಯುತ್ತಿದೆ ಎಂಬ ಕೆಲಸಗಳು ಗೊತ್ತಾಗುತ್ತಿಲ್ಲ ಎನ್ನುವ ಜನ .ಕಾಂಗ್ರೆಸ್ ನಲ್ಲಿ ಅಸಮಾಧಾನ ಇದ್ದರೂ ಭಯ ಪಡುತ್ತಿದ್ದಾರೆ.ಆದರೆ ಅನಧಿಕೃತ ಬ್ರಾಂಡಿಗಳು ತಾರಡುತ್ತಿವೆ.ಕೆಲವು ಜನ ಮಾತ್ರ ಕಟ್ಟಿಕೊಂಡು ಓಡಾಟ ಮಾಡುವ ಅನಂದ್ ಕಾಂಗ್ರೆಸ್ ಮುಖಂಡರಿಗೆ ಇರುಸು ಮುರಿಸದರೂ ಹೇಳಲಾಗುತ್ತಿಲ್ಲ.ಡಿ.ಕೆ.ಪರವಿರುವ ಅನಂದ್ ಉಳಿದಿರುವ ದಿನಗಳಲ್ಲಿ ಎನು ಮಾಡಬಹುದು ಎಂಬ ಲೆಕ್ಕಾಚಾರಗಳ ಜೊತೆಗೆ ಶ್ರೀನಿವಾಸ್ ಮಂತ್ರಿ ಹೇಗೆ ಆಗುತ್ತಾರೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ ದಳ ಬಿಜೆಪಿ ಮೈತ್ರಿ ಮುಂದೆ ಕಷ್ಟ,ಕಷ್ಟ. ಎಂಬ ದುರ್ಗಮ ದಾರಿಯಲ್ಲಿ ಸಾಗುತ್ತಿದ್ದಾರೆ.

ಕಾಂಗ್ರೇಸ್ ಜಲ್ಲಾಧ್ಯಕ್ಷ ಅಂಶುಮಂತ ಕಾಡ ಅಧ್ಯಕ್ಷ ಆಗಿರುವುದು ಪ್ರದಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಆಗಿರುವುದು ಕಾಂಗ್ರೆಸ್ ಬಾಗಿಲು ಹಾಕುವ ಸ್ಥಿತಿಯಲ್ಲಿ ಇದೆ.ಇಬ್ಬರು ಶಾಸಕರ ಮೇಲೆ ಕ್ರಮ ಸಾಧ್ಯವಿಲ್ಲ. ಅವರೇ ಶಾಸಕರುಗಳ ಮುಂದೆ ಹಲ್ಲು ಕಿರಿಕ್ ಎನ್ನವುದು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಿಲ್ಲ ಹೀಗಾಗಿ ಮುಳುಗುತ್ತಿರುವ ಕಾಂಗ್ರೇಸ್ ನಲ್ಲಿ ಎನು ಮಾಡಲು ಸಾಧ್ಯ ಶಾಸಕರುಗಳ ಚಿಲ್ಲಾಟ ಎಗ್ಗಿಲ್ಲದೆ ಸಾಗುತ್ತಿದೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.

Shakers are playing around in Congress! Are the workers drowning?

Share

Leave a comment

Leave a Reply

Your email address will not be published. Required fields are marked *

Don't Miss

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು. ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ಗ್ರಾಮದ ನಿವಾಸಿಯಾಗಿರುವ ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ಕರ್ನಾಟಕದಲ್ಲಿ ಒಟ್ಟು 54...

ವಾಹನಗಳ ಮಿರರ್ ತಗುಲಿ-ಕತ್ತಿ-ಬಂದೂಕು ಝಳಪಿಸಿದ ಗಲಾಟೆ

ಚಿಕ್ಕಮಗಳೂರು: ವಾಹನಗಳ ಮಿರರ್ ಪರಸ್ಪರ ತಗುಲಿದ ಸಣ್ಣ ವಿಚಾರ ಕತ್ತಿ-ಬಂದೂಕು ಝಳಪಿಸುವ ಹಂತಕ್ಕೆ ತಲುಪಿರುವ ಆರೋಪವೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸರವಳ್ಳಿ ಗ್ರಾಮದಲ್ಲಿ ಜುಲೈ 2...

Related Articles

ಮಹಿಳೆ ಗಮನ ಬೇರೆಡೆ ಸೆಳೆದು ₹ 3.90 ಲಕ್ಷ ವಂಚನೆ

ಕಡೂರು: ಕಳೆದ ಜೂನ್‌ನಲ್ಲಿ ಗಮನ ಬೇರೆಡೆಗೆ ಸೆಳೆದು ಗ್ರಾಹಕರೋರ್ವರ ಖಾತೆಯಿಂದ ₹3.90 ಲಕ್ಷಡ್ರಾ ಮಾಡಿರುವ ಪ್ರಕರಣ...

ಶಿವಮೊಗ್ಗ-ಶೃಂಗೇರಿ ಮಾರ್ಗ ಪರಿಗಣಿಸಿ

ಚಿಕ್ಕಮಗಳೂರು: ನೂತನ ರೈಲ್ವೆ ಯೋಜನೆಗೆ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ ಮಾಡುವ ವೇಳೆ ಶಿವಮೊಗ್ಗ, ಭದ್ರಾವತಿ,...

ಕವಿಕಲ್ ಮಠದ ರಸ್ತೆಯಲ್ಲಿ ಹುಲಿ ದಿಢೀರನೆ ಪ್ರತ್ಯಕ್ಷ

ಚಿಕ್ಕಮಗಳೂರು: ಕಾಫಿನಾಡಿನ ಹಸಿರು ಕಾಡುಗಳ ನಡುವೆ ಸಂಚರಿಸುತ್ತಿದ್ದ ಪ್ರವಾಸಿಗರಿಗೆ ಮರೆಯಲಾಗದ ಅನುಭವವೊಂದು ಎದುರಾಗಿದೆ. ಚಿಕ್ಕಮಗಳೂರು ತಾಲೂಕಿನ...

ಭದ್ರಾ ಜಲಾಶಯದ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸೂಚನೆ

ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು,...