ಚಿಕ್ಕಮಗಳೂರು: ಸ್ಕೌಟ್ಸ್‌ನ ಗುಣಾತ್ಮಕ ವಿಚಾರಗಳನ್ನು ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿ ಗಳಿಗೆ ಪರಿಚಯಿಸುವ ಕಾರ್ಯ ಶಿಕ್ಷಕರು ಮಾಡಬೇಕು. ಇದು ಮಕ್ಕಳ ಜೀವನದ ಕಾಲಘಟ್ಟದಲ್ಲಿ ಶಿಸ್ತಿನ ಪಾ ರಿಪಾಠ ಬೋಧಿಸಿದಂತಾಗಲಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ನಗರದ ಸ್ಕೌಟ್ಸ್ ಭವನದಲ್ಲಿ ಶನಿವಾರ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಜಿ.ಪಂ. ಇವರ ಸಹಯೋಗದಲ್ಲಿ ಅಧಿಕಾರಿಗಳು, ಸಿಆರ್‌ಪಿ ಮತ್ತು ಬಿಆರ್‌ಪಿ ಸಿಬ್ಬಂದಿಗಳಿಗೆ ಆಯೋಜಿಸಿದ್ಧ ಸ್ಕೌಟ್ಸ್ ಮತ್ತು ಗೈಡ್ಸ್ ಸಾಮಾನ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಚಟುವಟಿಕೆಗೆ ಮಾತ್ರ ಸೀಮಿತರಾಗದೇ, ಕೊಠಡಿಯಿಂದ ಹೊರ ಬಂದು ಸೇ ವಾಕಾರ್ಯ ಮೈಗೂಡಿಸುವ ಸ್ಕೌಟ್ಸ್-ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಬಗ್ಗೆ ಶಾಲಾ ಶಿಕ್ಷ ಕರು ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದಲ್ಲಿ ಗುರುಗಳ ಶ್ರಮ ಸಾರ್ಥಕವಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸ್ಕೌಟ್ಸ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ತರಬೇತಿಗಾಗಿ ಭವ್ಯವಾದ ಕಟ್ಟಡವು ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಎ.ಎನ್.ಮಹೇಶ್ ಅವರ ಕೊಡುಗೆ ಅಪಾರದ್ದು ಮುಂದೆ ಈ ಕಟ್ಟಡವು ಸ್ಕೌಟ್ಸ್‌ನ ಎಲ್ಲಾ ಕಾರ್ಯಗಳಿಗೂ ಪೂರಕವಾಗಲಿದೆ ಎಂದರು.
ರಾಜ್ಯದ ಸ್ಕೌಟ್ಸ್ ಕಾರ್ಯಚಟುವಟಿಕೆಗಳಲ್ಲಿ ಸುಮಾರು ೫೦ ಸಾವಿರ ಸೇವಕರು, ೮ ಲಕ್ಷ ಮಂದಿ ಸದಸ್ಯ ರಿದ್ದು ಆರೇಳು ಸಾವಿರ ಶಿಕ್ಷಕರಿಗೆ ನಿರಂತರ ತರಬೇತಿ ನೀಡುತ್ತಿದೆ. ಅಲ್ಲದೇ ಸದಸ್ಯರುಗಳ ಮಕ್ಕಳು ಅತಿಹೆಚ್ಚು ಗಳಿಸಿದವರಿಗೂ ಪ್ರತಿವರ್ಷವು ಗೌರವಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಇತ್ತೀಚೆಗೆ ಐಸ್‌ಕ್ರೀಂ ಚಾಕಲೇಟ್‌ಗಳಲ್ಲಿ ಡ್ರಗ್ಸ್ ಪದಾರ್ಥಗಳು ಸೇರ್ಪಡೆಗೊಳ್ಳುತ್ತಿವೆ. ಇದನ್ನು ಮಕ್ಕಳು ನೇರವಾಗಿ ಸೇವಿಸುತ್ತಿದ್ದಾರೆ. ಇದರಿಂದ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸುತ್ತಿಲ್ಲ. ಶಿಕ್ಷಕರ ಪಾಠ ನಡೆ ಸುವ ವೇಳೆಯಲ್ಲೂ ಯಾವುದೋ ಲೋಕದಲ್ಲಿ ತೇಲಾಡುವಂಥ ಮನಸ್ಥಿತಿಯಿದ್ದು ಇದರಿಂದ ಹೊರತರಲು ಸ್ಕೌಟ್ಸ್ ತರಬೇತಿ ಅವಶ್ಯಕ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಉಪಾಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಶತಮಾನೋತ್ಸವ ಪೂ ರೈಸಿರುವ ಸ್ಕೌಟ್ಸ್ ಸಂಸ್ಥೆ ಜಗತ್ತಿನಾದ್ಯಂತ ಒಂದು ಆಂದೋಲನದ ರೂಪದಲ್ಲಿ ಹರಡಿಕೊಂಡಿದೆ. ಈ ಸಂಸ್ಥೆ ಯ ಸಿದ್ದಾಂತವನ್ನು ದೇಶದ ಅನೇಕ ರಾಜಮಹಾರಾಜರು, ಪಿಜಿಆರ್ ಸಿಂಧ್ಯಾ ಹಿರಿಯರ ಮಾರ್ಗದರ್ಶನ ದಲ್ಲಿ ಒಂದು ಆನೆಬಲದಂತೆ ಸಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರತಿ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಿಸುವ ಉದ್ದೇಶದಿಂದ ಅಧಿಕಾರಿ ವೃಂದ, ದೈಹಿಕ ಶಿಕ್ಷಣಾಧಿಕಾರಿ, ಗುಚ್ಚ ಸಂಪನ್ಮೂಲ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಿಗೆ ಸಾಮಾನ್ಯ ಮಾಹಿತಿ ಶಿಬಿರ ಏ ರ್ಪಡಿಸಿದ್ದು ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ಸ್ಕೌಟ್ಸ್-ಗೈಡ್ಸ್‌ನ ಶಿಕ್ಷಕರ ಜೊತೆಗೂಡಿ ಘಟಕವನ್ನು ತೆರೆಯು ವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.
ಡಿಡಿಪಿಐ ತಿಮ್ಮರಾಜು ಮಾತನಾಡಿ ವಿದ್ಯಾರ್ಥಿದೆಸೆಯಲ್ಲಿ ಶಿಸ್ತು, ಸಂಯಮ, ಬದುಕಿನ ಮೌಲ್ಯಗಳನ್ನು ಮೂಡಿಸಲು ಸ್ಕೌಟ್ಸ್-ಗೈಡ್ಸ್ ತರಬೇತಿ ಸಹಕಾರಿಯಾಗಿದೆ. ಕೇವಲ ಅಂಕ ಗಳಿಕೆ ಹಾಗೂ ಒತ್ತಡಕ್ಕೆ ವಿದ್ಯಾಥಿ ಗಳು ಸಿಲುಕಿಕೊಳ್ಳಬಾರದು. ಇದು ಬಹಳ ಅಪಾಯಕಾರಿಯಾಗಿದೆ. ಹೀಗಾಗಿ ಕೊಠಡಿ ಹೊರತಾಗಿ ಚಟು ವಟಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.
ಇತ್ತೀಚೆಗೆ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಬಿಡುವಿಲ್ಲದೇ ಪಾಠವನ್ನು ಕೇಳುವಂತಾಗಿದೆ. ವಿಶೇ ಷವಾಗಿ ಖಾಸಗೀ ಶಾಲೆಗಳಲ್ಲಿ ಅತಿಯಾದ ಹೋಂವರ್ಕ್ಸ್, ಪಾಲಕರ ಒತ್ತಡದಿಂದ ಮಕ್ಕಳು ಮಾನಸಿಕ ವಾ ಗಿ ಕುಗ್ಗುವ ಜೊತೆಗೆ ಬಾಲ್ಯದಲ್ಲೇ ಹೃದಯಘಾತಕ್ಕೆ ತುತ್ತಾಗುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಮಕ್ಕ ಳಿಗೆ ಶಾಲೆ ಹಾಗೂ ಮನೆಗಳಲ್ಲಿ ವಿಶ್ರಾಂತಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಇದೇ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಶೇ.೯೯ ರಷ್ಟು ಅಧಿಕ ಅಂಕಗಳಿಸಿ ರಾಜ್ಯಕ್ಕೆ ೬ನೇ ಸ್ಥಾನ ಗಳಿಸಿದ ಕು. ಕೆ.ಪಿ.ಚೇತನ ಅವರಿಗೆ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ, ಆಯುಕ್ತರಾದ ಟಿ.ಕೆ.ಫಣಿರಾಜ್, ಡಿ.ಎಸ್.ಮಮತ, ಖಜಾಮಚಿ ಕೆ.ಎಸ್.ರಮೇಋಶ್, ಕಾರ್ಯದರ್ಶಿ ನೀಲಕಂಠಚಾರ್, ತರಬೇತಿ ಆಯುಕ್ತೆ ಸಂಧ್ಯಾರಾಣಿ, ಕಿರಣ್‌ಕುಮಾರ್, ಪ್ರಥಮ ಮುಂತಾದವರು ಉಪಸ್ಥಿತರಿದ್ದರು.
Children should be introduced to the positive ideas of Scouts.
Leave a comment