Home Latest News ರೆಡ್ ಸಿಗ್ನಲ್ ನಲ್ಲಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಿಗುತ್ತಾ ಗ್ರೀನ್ ಸಿಗ್ನಲ್ ?
Latest News

ರೆಡ್ ಸಿಗ್ನಲ್ ನಲ್ಲಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಿಗುತ್ತಾ ಗ್ರೀನ್ ಸಿಗ್ನಲ್ ?

Share
Share

ಚಿಕ್ಕಮಗಳೂರು : ಕಳೆದ ಹತ್ತು ವರ್ಷಗಳ ಹಿಂದೆ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಗೌರವ ನೀಡುವ ಮೂಲಕ ಗೌರವಿಸುವ ಸಂಪ್ರದಾಯ ಪಾಲಿಸುತಿತ್ತು ಇದರಿಂದ ಹಲವು ಗಣ್ಯರಿಗೆ ಪ್ರಶಸ್ತಿಯೂ ದೊರಕಿದೆ .

ಸಾಹಿತ್ಯ ಸೇವೆ, ಕ್ರೀಡಾ ಪಟುಗಳು, ಪತ್ರಕರ್ತರು, ಕಲೆ ಮತ್ತು ಸಮಾಜಸೇವೆ ಹೀಗೆ ವಿವಿಧ 7 ಕ್ಷೇತ್ರದವರಿಗೆ ಸನ್ಮಾನ ಮಾಡಲಾಗುತ್ತಿತ್ತು. ಜಿಲ್ಲಾ ಕನ್ನಡ ರಾಜ್ಯೋತ್ಸವ ಸಮಿತಿಯಲ್ಲಿ ಒಂದೇ ವರ್ಗದವರ ಪ್ರಭಾವ ಮತ್ತು ಲಾಭಿ ನಡೆಸಿ ತಮಗೆ ಬೇಕಾದವರಿಗೆ ಪ್ರಶಸ್ತಿ ಕೊಡಿಸುವವರ ವಿರುದ್ದ ಕೆಲವರು ತಿರುಗಿ ಬಿದ್ದಿದ್ದರಿಂದ ಪ್ರಶಸ್ತಿ ನೀಡುವ ತೀರ್ಮಾನಕ್ಕೆ ಜಿಲ್ಲಾಡಳಿತ ಪುಲ್ ಸ್ಟಾಪ್ ನೀಡಿತ್ತು.

ಕಳೆದ ಹತ್ತು ವರ್ಷಗಳಿಂದ ನಿಂತಿರುವ ಪ್ರಶಸ್ತಿ ಕೊಡಿಸುವ ಪರಿ ಈ ಬಾರಿ ರಾಜ್ಯೋತ್ಸವ ಸಮಿತಿಯಲ್ಲಿ ಇರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಜ್ಜಂಪುರ ಸೂರಿ ಶ್ರೀನಿವಾಸ್ ನೇತೃತ್ವದಲ್ಲಿ ಸರ್ಕಸ್ ನಡೆಯುತ್ತಿದೆ ಇದಕ್ಕೆ ಕನ್ನಡದ ಕಟ್ಟಾಳು ಕಾಮಾತ್, ರಾಧಾಕೃಷ್ಣ, ಗ್ಯಾರಂಟಿ ಶಿವಾನಂದಸ್ವಾಮಿ, ಕನ್ನಡ ಪರ ಸಂಘಟನೆಯವರ ಪ್ರಯತ್ನ ಫಲಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಪಾಪ ಲಾಭಿ ಮಾಡಿ ತಮಗೆ ಬೇಕಾದವರಿಗೆ ಪ್ರಶಸ್ತಿ ಕೊಡಿಸಲಾಗದೆ ಕೈ,ಕೈ ಹಿಸುಕಿ ಕೊಂಡವರು ಜಿಲ್ಲಾಡಳಿತದ ಕ್ರಮ ಸರಿಯಿಲ್ಲ ಎನ್ನುತ್ತಿದ್ದಾರಂತೆ, ಈ ನಡುವೆ ಜಿಲ್ಲಾಧಿಕಾರಿಗಳು ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆನ್ನುವ ಮಂದಿಯು ಇದ್ದಾರೆ.

ನಿನ್ನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಕೊಡುವ ಬಗ್ಗೆ ಸೂರಿ ಶ್ರೀನಿವಾಸ್ ಶಿಫಾರಸ್ಸು ಕುರಿತು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ ಬರೆಯಲಿದ್ದು ಸ್ಥಗಿತಗೊಂಡಿರುವ ಪ್ರಶಸ್ತಿ ಈ ಬಾರಿಯಾದರೂ ಕೊಡುವ ತೀರ್ಮಾನ ಆಗಲಿದೆಯಾ ಎಂಬ ಕುತೂಹಲ ಜೀವಂತವಾಗಿದೆ.

ಪ್ರಶಸ್ತಿಗಳು ಹುಡುಕಿಕೊಂಡು ಬರುವ ಜಮಾನ ಮುಗಿದು ಹಲವು ವರ್ಷಗಳೇ ಆಗಿವೆ ಈಗೇನಿದ್ದರು ಲಾಬಿ, ಜಾತಿ, ಪ್ರಭಾವ ಕೊನೆಗೆ ಪಾರ್ಟಿ ಇಲ್ಲ ಎಂದರೆ ಪ್ರಶಸ್ತಿಯಲ್ಲಿ ಬರುವ ನಗದು ಹಣದಲ್ಲಿ ಹಂಚಿಕೆ ಇಲ್ಲ ಎಂದರೆ ಕೊನೆಗೆ ಬಕೇಟ್ ಹಿಡಿಯುವವರಿಗೆ ಎನ್ನುವಂತಾಗಿದೆ. ಎಲೆಮರೆಯಂತೆ ಕೆಲಸ ಮಾಡುವ ಸಮಾಜ ಸೇವಕರು, ಸಾಹಿತಿಗಳು, ಕ್ರೀಡಾಪಟುಗಳು, ಕಲಾವಿದರು, ಪತ್ರಕರ್ತರು ಮತ್ತಿತರರನ್ನು ಗೌರವಿಸವ ಕಾಲ ಇನ್ನೂ ಕಷ್ಟ,ಕಷ್ಟ ಅಲ್ಲವೇ, ಎನ್ನಿಸುತ್ತದೆ ನೀವು ಏನಂತಿರೀ?

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...