Home namma chikmagalur chikamagalur 1 ಕೆ.ಜಿ ಚಿನ್ನ ಕೊಡುವ ಆಮಿಷ ಪ್ರಕರಣದಲ್ಲಿ ₹10 ಲಕ್ಷ ವಂಚನೆ
chikamagalurCrime NewsHomeLatest Newsnamma chikmagalur

1 ಕೆ.ಜಿ ಚಿನ್ನ ಕೊಡುವ ಆಮಿಷ ಪ್ರಕರಣದಲ್ಲಿ ₹10 ಲಕ್ಷ ವಂಚನೆ

Share
Share

ಕಡೂರು: 900 ವರ್ಷಗಳ ಹಳೆಯ ಒಂದು ಕೆ.ಜಿ.ಯಷ್ಟು ಚಿನ್ನ ಕೊಡುವುದಾಗಿ ನಂಬಿಸಿ ಕೇರಳದ ವ್ಯಕ್ತಿಯಿಂದ ₹10 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಸಖರಾಯಪಟ್ಟಣ ಠಾಣೆಯಲ್ಲಿ ದಾಖಲಾಗಿದೆ.

ಕೇರಳ ಕಣ್ಣೂರು ಜಿಲ್ಲೆಯ ನೀರಕಡುವು ಪಟ್ಟಣದ ಸುಮಿತ್ ವಾಲಿಯಾ ವೀಟ್ಟಿಲ್ ಎಂಬುವರು ಕಡೂರಿನ ವಿಷ್ಣು ಎಂಬ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

*9 ತಿಂಗಳ ಹಿಂದೆ ಪರಿಚಯವಾಗಿದ್ದ ವಿಷ್ಣು. ನಮ್ಮ ಜಮೀನಿನಲ್ಲಿ 1 ತಿಂಗಳು ಕೆಲಸ ಮಾಡಿದ್ದ. ಇತ್ತೀಚೆಗೆ ಕರೆ ಮಾಡಿ ಸರ್ಕಾರಿ ಜಮೀನು ಖರೀದಿ ಮಾಡಿದ್ದೇನೆ. ಜಮೀನಿನ ಕೆಲಸ ಮಾಡುವಾಗ ಮಣ್ಣಿನಲ್ಲಿ ಒಂದು ಕೆ.ಜಿ.ಯಷ್ಟು ಚಿನ್ನ ಸಿಕ್ಕಿದ್ದು, ಅದು 900 ವರ್ಷಗಳ ಹಿಂದಿನ ಕಾಲದ ಚಿನ್ನ. ಅದನ್ನು ನಾನು ಮಾರಾಟ ಮಾಡಲು ಸಾಧ್ಯವಿಲ್ಲ, ₹50 ಲಕ್ಷ ನೀಡಿ ನೀವೇ ಖರೀದಿ ಮಾಡಿ ಎಂದು ಹೇಳಿದ್ದ. ಅದನ್ನು ನಂಬಿ ಬಂದಿದ್ದೆವು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಸ್ನೇಹಿತ ಅಭಿಲಾಷ್ ಜತೆಗೆ ಬಂದಾಗ ಚಿನ್ನದ ಎರಡು ತುಂಡುಗಳನ್ನು ವಿಷ್ಣು ನೀಡಿದ್ದ. ಪರಿಶೀಲಿಸಿದಾಗ ಅದು ಅಸಲಿ ಚಿನ್ನವಾಗಿತ್ತು. ನಂತರ ವಾಪಸ್ ಕೇರಳಕ್ಕೆ ಹೋಗಿದ್ದೆವು. ಸ್ನೇಹಿತ ಬಿಜಿಲ್ ಹಾಗೂ ಫೈಜಲ್ ಜತೆ ಜೂನ್ 1ರಂದು ಕಡೂರಿಗೆ ಬಂದು ವಿಷ್ಣುಗೆ ಕರೆ ಮಾಡಿದಾಗ ಚಿಕ್ಕಮಗಳೂರು ರಸ್ತೆಗೆ ಬರಲು ಹೇಳಿದ. ಸಖರಾಯಪಟ್ಟಣದಿಂದ ಕೊಂಚ ಹಿಂದೆ ನಿಂತಿದ್ದಾಗ ಎರಡು ಬೈಕ್‌ನಲ್ಲಿ ವಿಷ್ಣು ಸೇರಿ ಆರು ಜನ ಬಂದರು.

ಮೊದಲು ₹10 ಲಕ್ಷ ನೀಡಿದರೆ ಚಿನ್ನ ಒಪ್ಪಿಸಲಾಗುವುದು, ಉಳಿದ ಮೊತ್ತವನ್ನು ಚಿನ್ನ ಅಸಲಿ ಎಂದು ಪರೀಕ್ಷಿಸಿದ ನಂತರ ಕೊಡಿ ಎಂದು ಹೇಳಿದರು. ಅದರಂತೆ ₹10 ಲಕ್ಷ ನೀಡಿದ ಕೂಡಲೇ ಅಲ್ಲಿಂದ ಬೈಕ್‌ನಲ್ಲಿ ಪರಾರಿಯಾದರು’ ಎಂದು ವಿವರಿಸಿದ್ದಾರೆ.

ಚಿನ್ನ ಕೊಡುವುದಾಗಿ ನಂಬಿಸಿ ಮೋಸ ಮಾಡಿದವರನ್ನು ಹಿಡಿದು ಹಣ ವಾಪಸ್ ಕೊಡಿಸುವಂತೆ ದೂರಿನಲ್ಲಿ ವಿನಂತಿಸಿದ್ದಾರೆ.

₹10 lakh fraud in 1 kg gold lure case

Share

Leave a comment

Leave a Reply

Your email address will not be published. Required fields are marked *

Don't Miss

ಅನಧಿಕೃತ ಜೀಪ್‌ಗಳ ಹಾವಳಿ ತಪ್ಪಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು:  ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅನಧಿಕೃತ ಮತ್ತು ಅಕ್ರಮ ಜೀಪ್ ಗಳ ಹಾವಳಿ ತಡೆಗಟ್ಟಿ ಪ್ರವಾಸಿಗರ ಸುರಕ್ಷತೆ ಕಾಪಾಡಬೇಕು ಎಂದು ಆಗ್ರಹಿಸಿ ಜಿಲ್ಲೆಯ ಸ್ಥಳೀಯ ನಾಗರೀ ಕರು ಸೋಮವಾರ ಅಪರ ಜಿಲ್ಲಾಧಿಕಾರಿ...

ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಾಫಿಯಾ ದಂದೆಗಳು ?

ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಅಗ್ರಸ್ಥಾನವಿದೆ.ನಿಜವಾದ ಪ್ರವಾಸಿಗರು ಜಿಲ್ಲೆಯ ಪ್ರಕೃತಿ ಸೌಂದರ್ಯದ ಜೊತೆಗೆ ಧಾರ್ಮಿಕ ಸ್ಥಳಗಳು, ಝರಿಗಳ ಜೊತೆಗೆ ಬೋರ್ಗರಿಯುವ ನದಿಗಳು, ಉಪ ನದಿಗಳು,ಅರಣ್ಯದ ಜೊತೆಗೆ ಕಾಡು ಪ್ರಾಣಿಗಳು...

Related Articles

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ...

ಅಂಚೆ ನಾಗಭೂಷಣ್ ಗೆ’ಪತ್ರಿಕಾ ರತ್ನ’ ಪ್ರಶಸ್ತಿ ಪ್ರಧಾನ

ತರೀಕೆರೆ : ಪಟ್ಟಣದ ಹಿರಿಯ ಪತ್ರಕರ್ತರು, ಜಿಲ್ಲಾ ಕನ್ನಡ ವಾರಪತ್ರಿಕೆ ಅಂಚೆವಾರ್ತೆ ಸಂಪಾದಕರು ಆದ ಅಂಚೆ...

ಇಂದು ಆರ್‌ಟಿಒ ರಾಕೇಶ್ ಕುಮಾರ್ ವಿರುದ್ಧ ವಿಚಾರಣೆ

ಚಿಕ್ಕಮಗಳೂರು: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಹಣಕಾಸು ಅಕ್ರಮಗಳ ಆರೋಪ ಕೇಳಿಬಂದಿರುವ ಬೆನ್ನಲ್ಲೇ...

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು...