Home namma chikmagalur chikamagalur ಆರೋಗ್ಯಪೂರ್ಣ ಶರೀರ ಸಂಪಾದಿಸಲು ನಡಿಗೆ ಅವಶ್ಯಕ
chikamagalurHomeLatest Newsnamma chikmagalur

ಆರೋಗ್ಯಪೂರ್ಣ ಶರೀರ ಸಂಪಾದಿಸಲು ನಡಿಗೆ ಅವಶ್ಯಕ

Share
Share

ಚಿಕ್ಕಮಗಳೂರು: ಆರೋಗ್ಯಪೂರ್ಣ ಶರೀರ ಸಂಪಾದಿಸಲು ನಡಿಗೆ ಅತ್ಯವಶ್ಯಕ. ಈ ಹಾ ದಿಯಲ್ಲಿ ಪ್ರತಿಯೊಬ್ಬರು ಹೆಚ್ಚು ತೊಡಗಿಸಿಕೊಂಡು ದೇಹ ದಂಡಿಸುವ ಜೊತೆಗೆ ನಡಿಗೆಯ ಹವ್ಯಾಸ ಬೆಳೆಸಿ ಕೊಂಡಲ್ಲಿ ಬಹುಕಾಲ ಜೀವಿಸಬಹುದು ಎಂದು ಹೆಡ್‌ಕಾನ್ಸ್ಟೇಬಲ್ ಗಿರೀಶ್ ಹೇಳಿದರು.

ನಗರದ ಸುಭಾಶ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಮುಂಜಾನೆ ವಂದೇ ಮಾತರಂ ಟ್ರಸ್ಟ್ ವತಿಯಿಂದ ತ್ರಿಲೋಕ ಸಂಚಾರಿ ನಾರದ ಮುನಿಗಳ ಜಯಂತಿ ಪ್ರಯುಕ್ತ ಆಯೋಜಿಸಿದ್ದ ೬೦ ವರ್ಷ ಮೇಲ್ಪಟ್ಟವರಿಗೆ ನಡಿಗೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾನವ ಜೀವನದಲ್ಲಿ ನಡಿದಷ್ಟು ದೀರ್ಘಾಯುಷ್ಯಿಯಾಗಿ ಜೀವಿಸಬಲ್ಲನು. ಆ ಹಿನ್ನೆಲೆ ಸರ್.ಎಂ.ವಿಶ್ವೇ ಶ್ವರಯ್ಯ ನಡಿಗೆಯಿಂದಲೇ ಹೆಚ್ಚು ಕಾಲ ಜೀವಿಸಿ ಸಾಧನೆ ಮಾಡಿದ್ದಾರೆ. ಆ ಮಹಾಸಾಧಕರು ಪ್ರತಿದಿನ ೪ ಗಂಟೆಗೆ ಎಚ್ಚರಗೊಂಡು ನಡಿಗೆ ಆರಂಭಿಸುತ್ತಿದ್ದು. ನಾವುಗಳು ಈ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನೆಡೆದರೆ ಆರೋಗ್ಯಭರಿತ ಜೀವನ ಪಡೆದುಕೊಳ್ಳಬಹುದು ಎಂದರು.

ಪ್ರಸ್ತುತ ಗ್ರಾಮೀಣ ಭಾಗದಲ್ಲಿ ರೈತರು ತೋಟ ಅಥವಾ ಜಮೀನುಗಳಿಗೆ ತೆರಳಲು ಕಾಲ್ನಡಿಗೆಯಲ್ಲಿ ತೆರ ಳುತ್ತಾರೆ. ಹಾಗಾಗಿಯೇ ಹಳ್ಳಿಜನರ ಆರೋಗ್ಯ ಸದೃಢವಾಗಿದೆ. ಆದರೆ ಇತ್ತೀಚಿನ ಆಧುನಿಕ ಕಾಲದಲ್ಲಿ ಅನಾ ರೋಗ್ಯದ ಹಿನ್ನೆಲೆ ನಡಿಗೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಪಾಲಕರು ಬಾಲ್ಯದಿಂದಲೇ ಈ ರೀತಿ ಆರೋಗ್ಯ ಚಟುವಟಿಕೆಗೆ ಪ್ರೋತ್ಸಾಹಿಸಬೇಕು ಎಂದರು.

ಹಿರಿಯರು, ಯುವಜನತೆ ಹಾಗೂ ಮಕ್ಕಳಿಗೆ ಸ್ಪೂರ್ತಿ ನೀಡುವಂಥ ಕಾರ್ಯಕ್ರಮ ವಂದೇ ಮಾತರಂ ಟ್ರಸ್ಟ್ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅಲ್ಲದೇ ನಾರದ ಜಯಂತಿ ಪ್ರಯುಕ್ತ ಹಿರಿಯ ನಾಗರೀಕರಿಗೆ ನಡಿಗೆ ಸ್ಪರ್ಧೆ ನಡೆಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಮಾತನಾಡಿ ತ್ರಿಲೋಕ ಸಂಚಾರಿ ನಾದರ ಮುನಿಗಳು ಲೋ ಕ ಕಲ್ಯಾಣಗಾಗಿ ನಾಮಸ್ಮರಣೆ ಹಾಗೂ ನಡಿಗೆಯಿಂದ ಹಲವು ಲೋಕಗಳಲ್ಲಿ ಸಂಚರಿಸುತ್ತಿದ್ದರು. ಈ ಉದ್ದೇ ಶದಿಂದ ಸಾರ್ವಜನಿಕರು ನಾರದ ಮಹಾತ್ಮೆ ಮೂಡಿಸಲು ನಡಿಗೆ ಸ್ಫರ್ಧೆ ಆಯೋಜಿಸಿ ಸರ್ವರಿಗೂ ಉಚಿ ತವಾಗಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.

ಸ್ಪರ್ಧೆ ವಿಜೇತರು : ಪುರುಷರ ವಿಭಾಗ :- ಸಿ.ನಿಂಗಪ್ಪ ಪ್ರಥಮ, ಶಾಂತಕುಮಾರ್ ದ್ವೀತಿಯ, ಸಿ.ಆರ್. ಸುಧಾಕರ್ ತೃತೀಯ. ಮಹಿಳಾ ವಿಭಾಗ :- ಟಿ.ಮಂಜುಳಾ ಪ್ರಥಮ, ಎಸ್.ತಾರಾ ದ್ವೀತಿಯ, ಹೆಚ್.ಎಂ. ಪುಷ್ಪಲತಾ ತೃತೀಯ ಪಡೆದಿದ್ದು ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ಶಂಕರ್, ಸ್ಥಳಿಯರಾದ ಶ್ರೀಧರ್, ಮಂಜುನಾಥ್, ವಂ ದೇ ಮಾತರಂ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Walking is essential for a healthy body.

Share

Leave a comment

Leave a Reply

Your email address will not be published. Required fields are marked *

Don't Miss

ನೋಟರಿ ವಿ.ಕೆ.ರಘುಯಿಂದ ನೀರಿನ ಮೇಲೆ ತೇಲುತ್ತಾ ಯೋಗ ಭಂಗಿ ಪ್ರದರ್ಶನ

ಚಿಕ್ಕಮಗಳೂರು: ಯೋಗ ಸಾಧಕ ನಗರದ ವಕೀಲ ಹಾಗೂ ನೋಟರಿ ವಿ.ಕೆ.ರಘು ಅವರು  ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನೀರಿನ ಮೇಲೆ ತೇಲುತ್ತಾ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿದರು. ಬೈಪಾಸ್ ರಸ್ತೆಯ ನರ್ಚರ್...

ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

ಕಡೂರು: ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಲ್ಲೂರು ಗ್ರಾಮದ 20 ವರ್ಷದ ಚಂದನ್ ಮೃತಪಟ್ಟ ದುರ್ದೈವಿ. ಇತ್ತೀಚೆಗೆ...

Related Articles

ಎಐಟಿ ವೃತ್ತದ ಬಳಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಎಐಟಿ ವೃತ್ತದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಚೇರಿಯಿಂದ ಮೋಟಾರ್ ಸೈಕಲ್‌ನಲ್ಲಿ...

ಅಭಿವೃದ್ಧಿ ಕೆಲಸಗಳ ಬಗ್ಗೆ ಕೆಲವರು ಪೂರ್ವಗ್ರಪಿಡಿತರಾಗಿ ಮಾತನಾಡುತ್ತಿದ್ದಾರೆ

ಚಿಕ್ಕಮಗಳೂರು: ಅಭಿವೃದ್ಧಿ ಕೆಲಸಗಳ ಬಗ್ಗೆ ಕೆಲವರು ಪೂರ್ವಗ್ರಪಿಡಿತರಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಒಬ್ಬರಿಗೆ ಮಾತ್ರ ಗುತ್ತಿಗೆ...

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು...