Home namma chikmagalur chikamagalur ‘ಸ್ವದೇಶಿ ಬಳಸಿ, ದೇಶ ಬೆಳೆಸಿ’ ಜಾಗೃತಿ ಸೈಕಲ್ ಯಾತ್ರೆ
chikamagalurHomeLatest Newsnamma chikmagalur

‘ಸ್ವದೇಶಿ ಬಳಸಿ, ದೇಶ ಬೆಳೆಸಿ’ ಜಾಗೃತಿ ಸೈಕಲ್ ಯಾತ್ರೆ

Share
Share

ಚಿಕ್ಕಮಗಳೂರು: ಸ್ವದೇಶಿ ಬಳಸಿ, ದೇಶ ಬೆಳೆಸಿ ಎಂಬ ಘೋಷವಾಕ್ಯದೊಂದಿಗೆ ಪರಿ ಪೂರ್ಣ ಸನಾನತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನಿಂದ ಹೊರಟ ಸೈಕಲ್ ಯಾತ್ರೆ ಶುಕ್ರವಾ ರ ಸಂಜೆ ನಗರದ ಚಂದ್ರಶೇಖರ್ ಆಜಾದ್‌ಪಾರ್ಕ್ ವೃತ್ತಕ್ಕೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು, ಭಾರ ತೀಯ ಕಿಸಾನ್ ಸಂಘ ಹಾಗೂ ಬಜರಂಗದಳದ ಮುಖಂಡರುಗಳು ಅಭಿನಂದಿಸಿದರು.

ಈ ವೇಳೆ ಸೈಕಲ್ ಯಾತ್ರಿಕರು ಮಾತನಾಡಿ ರಾಷ್ಟ್ರದ ಪ್ರಜೆಗಳು ಆತ್ಮನಿರ್ಭರರಾಗಲು ಸ್ವದೇಶಿ ಬಳಸಿ, ದೇಶ ಬೆಳೆಸಬೇಕೆಂಬ ಆಶಯದೊಂದಿಗೆ ೧೭ ಮಂದಿ ೩೭ ದಿನಗಳ ಅಭಿಯಾನ ಹಮ್ಮಿಕೊಂಡಿದ್ದು ರಾಜ್ಯ ಸರ್ಕಾರದ ಮಾಜಿ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಸೈಕಲ್ ಯಾ ತ್ರೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ರಾಜ್ಯಾದ್ಯಂತ ಎರಡು ಹಂತಗಳಲ್ಲಿ ಸೈಕಲ್ ಯಾತ್ರೆ ನಡೆಸಲಾಗುತ್ತಿದ್ದು ಮೊದಲನೇ ಹಂತದಲ್ಲಿ ಬೆಂ ಗಳೂರಿನಿಂದ ಆರಂಭಿಸಿ ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರ ಮಾರ್ಗವಾಗಿ ಒಟ್ಟು ಒಂಭತ್ತು ದಿನಗಳಲ್ಲಿ ೯೦೦ ಕಿ.ಮೀ. ಸಂಚರಿಸಲಾಗಿದೆ ಎಂದು ತಿಳಿಸಿದರು.

ಎರಡನೇ ಹಂತವಾಗಿ ಡಿ.೨೫ ರಿಂದ ಆರಂಭಗೊಂಡ ಸೈಕಲ್ ಯಾತ್ರೆ ನೆಲಮಂಗಲ, ಚನ್ನರಾಯಪ ಟ್ಟಣ, ಹಾಸನ ಮಾರ್ಗವಾಗಿ ಶನಿವಾರ ಸಂಜೆ ಚಿಕ್ಕಮಗಳೂರು ತಲುಪಿದ್ದು ಮರುದಿನ ಶಿವಮೊಗ್ಗ, ದಾವ ಣನಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕಲ್ಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ದೊಡ್ಡಬಳ್ಳಾಪುರ, ಕೋಲಾರ ಮಾರ್ಗವಾಗಿ ನೆಲಮಂಗಲಕ್ಕೆ ವಾಪಸ್ ತೆರಳಿ ೨೫೦೦ ಕಿ.ಮೀ. ಕ್ರಮಿಸಲಾಗುವುದು ಎಂದರು.

ಈ ಯಾತ್ರೆಯಲ್ಲಿ ರಾಜ್ಯಾದ್ಯಂತ ೩೧ ಜಿಲ್ಲೆಗಳಲ್ಲಿ ಸಂಚರಿಸಿ ನೂರಾರು ತಾಲ್ಲೂಕು ಹಾಗೂ ಸಾವಿರಾರು ಗ್ರಾಮೀಣ ಪ್ರದೇಶದ ಮೂಲಕ ಸಾಗಿ ಜನರಲ್ಲಿ ಸ್ವದೇಶಿ ಬಳಕೆಯ ಬಗ್ಗೆ ಜಾಗೃತಿಗೊಳಿಸಿ, ದೇಶವನ್ನು ಸದೃ ಢಗೊಳಿಸಲು ಚಿಂತಿಸಲಾಗಿದೆ. ನಮ್ಮ ಸೈಕಲ್ ಯಾತ್ರಿಕರು ೫೦ ರಿಂದ ೬೦ ಮೇಲ್ಪಟ್ಟರಾಗಿದ್ದು ಈ ಭವ್ಯ ಯಾ ತ್ರೆಯನ್ನು ಕೈಗೊಂಡಿದ್ದೇವೆ ಎಂದರು.

ರಾಜ್ಯಾದ್ಯಂತ ಆಯಾ ಜಿಲ್ಲೆಗಳಲ್ಲಿ ಅದರದೇ ವಿಶೇಷತೆಯಿದೆ. ಕಾಫಿ, ರೇಷ್ಮೆ, ಸಕ್ಕರೆ, ಕರಾವಳಿ, ಗೊಂಬೆ ಗಳ ನಾಡೆಂಬ ಪ್ರತೀತಿಯಿದೆ. ಅವರಲ್ಲಿ ಸ್ಥಳೀಯವಾಗಿ ಉತ್ಪನ್ನಗೊಳ್ಳುವ ವಸ್ತುಗಳನ್ನು ಸ್ಥಳೀಯವಾಗಿ ಮಾ ರಾಟ ಮಾಡಿ, ಅದೇ ವಸ್ತುಗಳನ್ನು ಸ್ಥಳೀಯರೇ ಖರೀದಿಸುವ ಮೂಲಕ ಸ್ವದೇಶ ಬಳಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಅಂಕಿತಾ, ನಾಗರಾಜ್, ಬೆನಡಿಕ್ಟ್ ಜೇಮ್ಸ್, ಸೀತರಾ ಮಭರಣ್ಯ, ಕಿಸಾನ್ ಸಂಘದ ಅಧ್ಯಕ್ಷ ಪೂರ್ಣೇಶ್, ಬಜರಂಗದಳ ಮುಖಂಡ ಶ್ಯಾಮ್ ವಿ.ಗೌಡ ಸೇರಿದಂತೆ ಸಾರ್ವಜನಿಕರು, ಅಭಿಮಾನಿ ಬಳಗದವರು ಹಾಜರಿದ್ದರು.

‘Use Swadeshi Grow the Nation’ Awareness Cycle Yatra

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...