ಚಿಕ್ಕಮಗಳೂರು-ಊರಿನ ಜನರಿಗೆ ಶಾಂತಿ, ನೆಮ್ಮದಿ, ರೈತರಿಗೆ ಉತ್ತಮ ಮಳೆ ಬೆಳೆ ಕೊಡು ಸ್ವಾಮಿ ಎಂದು ಶ್ರೀ ಅಯ್ಯಪ್ಪನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಮಹೋತ್ಸವದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜನವರಿ ೧೪-೧೫ ರಂದು ಶಬರಿಮಲೈ ನಲ್ಲಿ ನಡೆಯವ ಜ್ಯೋತಿ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಭಕ್ತರಿಗೆ ಅಯ್ಯಪ್ಪಸ್ವಾಮಿಯ ಆಶೀರ್ವಾದ ಬೇಡುತ್ತೇನೆ. ನಾನು ಚಿಕ್ಕವನಿದ್ದಾಗ ೧೯೮೦ ರ ದಶಕದಿಂದ ಚಿಕ್ಕಮಗಳೂರಿನಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಪ್ರತಿಷ್ಠಾಪಿಸಿ ೪೮ ದಿನ ವ್ರತ ಆಚರಣೆ ಮಾಡಿ, ನಂತರ ಶಬರಿಮಲೈಗೆ ತೆರಳಿ ಅಲ್ಲಿ ವ್ರತ ಪೂರೈಸುವ ಪದ್ದತಿಯನ್ನು ರೂಢಿಸಿಕೊಂಡು ಬರುತ್ತಿದ್ದಾರೆ.
ನಮ್ಮ ಊರಿನ ಜನರಿಗೆ ಶಾಂತಿ, ನೆಮ್ಮದಿ, ಆರೋಗ್ಯ ಕೊಡಲಿ ರೈತರಿಗೆ ಉತ್ತಮ ಮಳೆ,ಬೆಳೆ ಕೊಡಲಿ ಎಂದು ಈ ಸಂದರ್ಭದಲ್ಲಿ ಶರಣ ಅಯ್ಯಪ್ಪನಲ್ಲಿ ಪ್ರಾರ್ಥನೆ ಮಾಡುತ್ತೇನೆ. ನಾನು ಒಮ್ಮೆ ಅಯ್ಯಪ್ಪ ಭಕ್ತದಾರಿಯಾಗಿ ಅಯ್ಯಪ್ಪನ ದರ್ಶನ ಮಾಡಿದ್ದೇನೆ ಎಂದು ಹೇಳಿದರು.
ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಸಮಿತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗಾಗಿ ತಯಾರಿಸಿದ್ದ ಪ್ರಸಾದಕ್ಕೂ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅನ್ನಸಂತರ್ಪಣೆಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ೩ ರವರೆಗೂ ಸಹಸ್ರಾರು ಮಂದಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಶ್ರೀಅಯ್ಯಪ್ಪಸ್ವಾಮಿ ಪೂಜಾ ಸಮಿತಿಯ ಅಧ್ಯಕ್ಷ ಅಶೋಕ್ ಸಚ್ಚಿದೇವ್, ಗೌರವಾಧ್ಯಕ್ಷ ನಾರಾಯಣ್ ಗೌಡ, ಸಿ.ಪಿ.ರವಿಶಂಕರ್, ಪ್ರಧಾನ ಕಾರ್ಯದರ್ಶಿ ಪಿ.ಆರ್.ಮಂಜುನಾಥ್, ಖಜಾಂಚಿ ಮುಖೇಶ್ ಸಿಂಗ್, ಉಪಾಧ್ಯಕ್ಷರುಗಳಾದ ಜೀವನ್.ಕೆ.ಶೆಟ್ಟಿ, ಅಣ್ಣಯ್ಯ, ವೆಂಕಟೇಶ್ ಮಹಾದೇವ್, ಕಾರ್ಯದರ್ಶಿಗಳಾದ ಉಮೇಶ್, ಲಕ್ಷ್ಮೀಕಾಂತ್, ನಟರಾಜ್ ಕೋಟೆ, ದಿಲೀಪ್ ರಾಜ್, ಸತೀಶ್, ಧರ್ಮರಾಜ್, ಸಹಕಾರ್ಯದರ್ಶಿಗಳಾದ ಚೆನ್ನಕೇಶವ, ಮನುಕುಮಾರ್, ಮೂರ್ತಿ, ಯಶ್ವಂತ್, ಮಂಜು, ಚೇತನ್, ರಂಗನಾಥ್, ಪ್ರಶಾಂತ್, ಮಹಾದೇವ, ಕಿರಣ್ ಬಂಡೇಗಾರ್, ಗಿರೀಶ್, ಗೋಪಿ, ಬಸವಣ್ಣ ಕಿರಣ್, ರಾಮಚಂದ್ರ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾರವಿನಾಯಕ್,ಸದಸ್ಯ ಎ.ಸಿ.ಕುಮಾರಗೌಡ, ಆಯುಕ್ತ ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಪಲ್ಲವಿ ಸಿ.ಟಿ.ರವಿ, ಸಂತೋಷ್ ಕೋಟ್ಯಾನ್ ಮತ್ತಿತರರರು ಉಪಸ್ಥಿತರಿದ್ದರು.
Offering of food during the Sri Ayyappa Swamy Puja festival
Leave a comment