ಚಿಕ್ಕಮಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ರಸ್ತೆ ಅಭಿವೃದ್ಧಿ ಕಾಮಗಾರಿ ವಿಚಾರವಾಗಿ ಜಟಾಪಟಿಯ ನಂತರ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ಮಾಜಿ ಶಾಸಕ ಸಿ.ಟಿ. ರವಿ ಅವರು ತಾಂತ್ರಿಕ ಕಾರಣಗಳಿಂದ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಜನರ ವಿಶ್ವಾಸ ಕಳೆದುಕೊಂಡಿಲ್ಲ ಎಂಬ ಮಾತನಾಡಿದ್ದಾರೆ.
ತಾವು ಸೋತಿದ್ದರೂ ಈ ಹಿಂದಿನ ಚುನಾವಣೆಗಳಿಗಿಂತ 2023ರಲ್ಲಿ ಹೆಚ್ಚಿನ ಮತಗಳನ್ನು ಪಡೆದಿದ್ದು, ಜನರ ಪ್ರೀತಿ ಇಂದಿಗೂ ತಮ್ಮ ಮೇಲಿದೆ ಎಂದು ಶಾಸಕ ತಮ್ಮಯ್ಯ ವಿರುದ್ಧ ಪರೋಕ್ಷವಾಗಿ ನಡೆಸಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ಇವತ್ತು ಅಧಿಕಾರದಲ್ಲಿ ಮೆರೆಯುತ್ತಿರುವವರು ಜೆಡಿಎಸ್ ಮತ್ತು ಬೋಜೇಗೌಡರ ಭಿಕ್ಷೆಯಿಂದ ಮೆರೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ತಾವು ಎಂದಿಗೂ ಅಭಿವೃದ್ಧಿ, ನೀತಿ ಮತ್ತು ಪಕ್ಷನಿಷ್ಠೆಯ ರಾಜಕಾರಣ ಮಾಡಿದ್ದೇನೆಯೇ ಹೊರತು ಜಾತಿ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮನ್ನು ನಂಬಿದವರನ್ನು ತಾವು ಎಂದಿಗೂ ಕೈಬಿಟ್ಟಿಲ್ಲ, ಆದರೆ ದುರಾಸೆಯಿಂದ ಅಡ್ಡದಾರಿ ಹಿಡಿದವರನ್ನು ಮಾತ್ರ ದೂರ ಇಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಕಷ್ಟಪಟ್ಟು ಮೇಲೆ ಬರಲು ಬಯಸುವವರಿಗೆ ತಾವು ಸದಾ ಬೆಂಬಲವಾಗಿ ನಿಂತಿರುವುದಾಗಿ ಹೇಳಿದ ಅವರು, ಜಿಲ್ಲೆಯ ಜನರಿಗೆ ಯಾರು ಸೈಕಲ್ನಿಂದ ಕಾರಿಗೆ ಬೆಳೆದಿದ್ದಾರೆ ಎಂಬುದು ಚೆನ್ನಾಗಿ ಗೊತ್ತು ಎಂದಿದ್ದಾರೆ. ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯದ ವ್ಯವಹಾರ, ಬೇನಾಮಿ 21ಗುತ್ತಿಗೆಗಳು ಹಾಗೂ ಬಾರ್ಗಳ ದಂಧೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯವನ್ನು ಹೊರತರಲಿ ಎಂದು ಸವಾಲು ಹಾಕಿದ್ದಾರೆ.
ತಮಗೆ ಜನರ ಪ್ರೀತಿಯೇ ಮುಖ್ಯವಾಗಿದ್ದು, ಅಡ್ಡಕಸಬಿಗಳ ಬೆದರಿಕೆಗೆ ತಾವು ಎಂದಿಗೂ ಬಗ್ಗುವುದಿಲ್ಲ ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Those who are in power are living on the alms of JDS-Boje Gowda.
Leave a comment