Home namma chikmagalur chikamagalur ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡಸೇನೆ ಧ್ವನಿ ಎತ್ತಿದೆ
chikamagalurHomeLatest Newsnamma chikmagalur

ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡಸೇನೆ ಧ್ವನಿ ಎತ್ತಿದೆ

Share
Share

ಚಿಕ್ಕಮಗಳೂರು: ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡಸೇನೆ ಮುಂಚೂಣಿಯಲ್ಲಿ ನಿಂತು ಧ್ವನಿ ಎತ್ತುತ್ತಿದೆ. ನಿರಂತರ ಹೋರಾಟ ಮಾಡಿಕೊಂಡು ಭಾಷೆಯ ಶಕ್ತಿಯನ್ನು ಎತ್ತಿ ಹಿಡಿಯುತ್ತಿದೆ ಎಂದು ಕನ್ನಡಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಕೆ.ಕುಮಾರ್ ಹೇಳಿದರು.

ನಗರದ ಚಂದ್ರಶೇಖರ್ ಆಜಾದ್‌ಪಾರ್ಕ್ ವೃತ್ತದಲ್ಲಿ ಜಿಲ್ಲಾ ಕನ್ನಡಸೇನೆ ಆಯೋಜಿಸಿದ್ಧ ಕನ್ನಡ ನಿ ತ್ಯೋತ್ಸವ ಹಾಗೂ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬುಧವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ನಾಡು, ನುಡಿ, ನಿಷ್ಟೆ ಸೇವೆಯ ರಾಜ್ಯ ಸಂಘಟನೆ ಕನ್ನಡಸೇನೆ. ಕನ್ನಡ ನಾಡು, ನುಡಿ, ನೆಲ ಮತ್ತು ಜಲ ಸೇರಿದಂತೆ ರಾಜ್ಯದ ಅನೇಕ ಜ್ವಲಂತ ಸಮಸ್ಯೆಗಳ ಮುಂದಿಟ್ಟುಕೊಂಡು ಕನ್ನಡಸೇನೆ ನಿರಂತರವಾಗಿ ಹೋ ರಾಟ ಮಾಡಿಕೊಂಡು ಬರುತ್ತಿದೆ. ಇದೊಂದು ಮಾದರಿ, ಪ್ರಾಮಾಣಿಕ ಸಂಘಟನೆ ಎಂದು ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ತಾಯಿ ಭುವನೇಶ್ವರಿ ನೆಲೆಸಿರುವ ಭವನಗಿರಿಯನ್ನು ಪರಿಚಯಿಸಿದ್ದು ಕನ್ನಡಸೇನೆ. ಅಲ್ಲಿಂದ ತಂದ ಕನ್ನಡ ಜ್ಯೋತಿಯನ್ನು ಚಿಕ್ಕಮಗಳೂರು, ಹಾಸನ, ಮಂಡ್ಯ ಸೇರಿದಂತೆ ನಾಡಿ ನೆಲ್ಲೆಡೆ ಕೊಂಡೊಯ್ದು ಕೊನೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಮೂಲಕ ಬೆಂಗಳೂರಿನಲ್ಲಿ ಲಕ್ಷ ದೀಪೋತ್ಸವ ನಡೆಸಲಾಯಿತು ಎಂದು ಹೇಳಿದರು.

ವಿಧಾನಸೌಧದಲ್ಲಿ ವಿರೂಪಗೊಂಡಿದ್ದ ಕೆಂಗಲ್ ಹನುಮಂತಯ್ಯನವರ ಪ್ರತಿಮೆಯನ್ನೂ ಸರಿಪಡಿಸಲಾ ಯಿತು. ಬೆಂಗಳೂರಿನ ರಾಜಾಜಿನಗರದ ಮಹಾಕವಿ ಕುವೆಂಪು ರಸ್ತೆಯನ್ನು ನಾಮಕರಣ ಮಾಡಿಸಿದ್ದು ನಾ ವು. ಹೈದರಾಬಾದ್ ಕರ್ನಾಟಕಕ್ಕೆ ಮೀಸಲಾತಿ ನೀಡಬೇಕೆಂದು ಬೀದರ್ ನಿಂದ ಬೆಂಗಳೂರಿನವರೆಗೆ ರ್‍ಯಾಲಿ ನಡೆಸಲಾಯಿತು ಎಂದು ತಿಳಿಸಿದರು.

ಕರ್ನಾಟಕ, ಕನ್ನಡಿಗರು ಅನೇಕ ಅನ್ಯ ಭಾಷಿಗರಿಗೆ ಆಶ್ರಯ ಕೊಟ್ಟಿದೆ. ಇದು ತಪ್ಪಲ್ಲ. ನಾವೆಂದೂ ಅನ್ಯ ಭಾಷಿಗರ ವಿರೋಧಿಗಳಲ್ಲ. ತೆಲುಗು, ತಮಿಳು, ಹಿಂದಿ ಸೇರಿದಂತೆ ದೇಶ- ವಿದೇಶಗಳ ಅನ್ಯಭಾಷಿಗರು ಬೆಂ ಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ನೆಲೆಕಂಡಿದ್ದಾರೆ. ಅವರವರ ಭಾ?ಗಳಲ್ಲಿ ಕರ್ನಾಟಕದಲ್ಲಿ ಕಾರ್ಯಕ್ರಮ ದ ಮಾಡುತ್ತಿದ್ದಾರೆ. ಇದು ಉದ್ದಟತನವಲ್ಲವೇ. ಕರ್ನಾಟಕದ ಅನ್ನ ತಿಂದು ನೀರು ಕುಡಿಯುವವರು ಕನ್ನ ಡಕ್ಕೆ ಏಕೆ ಮೊದಲ ಪ್ರಾಶಸ್ತ್ಯ ನೀಡುವುದಿಲ್ಲ ಎಂದು ಅವರು ಪ್ರಶ್ನಿಸಿದರು.

ಕನ್ನಡ ಭಾ?ಯನ್ನು ಉಳಿಸಿ ಬೆಳೆಸಿಕೊಳ್ಳಲು ಕನ್ನಡಿಗರೇ ಮುಂದಾಗಬೇಕು. ಇಲ್ಲದಿದ್ದರೆ ಇನ್ನು ಕೆಲವೇ ವ?ಗಳಲ್ಲಿ ಕನ್ನಡ ಭಾ? ನಶಿಸಬಹುದು. ಆದರೆ, ಅದಕ್ಕೆ ಕನ್ನಡಸೇನೆ ಆಸ್ಪದ ಮಾಡಿಕೊಡು ವುದಿಲ್ಲ. ಕನ್ನಡವನ್ನು ಉಳಿಸಿಕೊಳ್ಳುವ ಕೆಲಸವನ್ನು ಯಾರೋ ಒಬ್ಬರು ಮಾಡಿದರೆ ಸಾಕಾಗದು. ಈ ಕೆಲಸಕ್ಕೆ ಪ್ರತಿಯೊಬ್ಬ ಕನ್ನಡಿಗನೂ ಮುಂದಾಗಬೇಕು ಎಂದು ಕರೆ ನೀಡಿದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ರಾಜ್ಯದ ಏಕತೆಗಾಗಿ ವರನಟ ಡಾ|| ರಾಜ್‌ಕುಮಾರ್ ಸೇರಿದಂ ತೆ ಅನೇಕ ಕನ್ನಡಪರ ಸಂಘಟನೆಗಳು ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಬೃಹತ್ ಹೋರಾಟ ರೂಪಿ ಸಿದ ಕಾರಣದಿಂದಲೇ ಇಂದು ರಾಜ್ಯದಲ್ಲಿ ಗೋಕಾಕ್ ಪ್ರದೇಶ ಶಾಶ್ವತವಾಗಿ ಉಳಿದುಕೊಂಡಿದೆ ಎಂದು ಹೇಳಿದರು.

ನಾಡಿನ ಭಾಷಾಭಿಮಾನಕ್ಕೆ ನೋವುಂಟಾದರೆ ಕನ್ನಡಿಗರು ಕೈಕಟ್ಟಿ ಕೂರದೇ ಧೈರ್ಯವಾಗಿ ಮುನ್ನುಗ್ಗ ಬೇಕು. ನಾಡಿನ ವಿಚಾರದಲ್ಲಿ ಯಾರೂ ಕೂಡಾ ಪಕ್ಷ, ಜಾತಿ, ಧರ್ಮವನ್ನು ಬದಿಗಿರಿಸಿ, ಕನ್ನಡಾಂಭೆಯ ಮಕ್ಕಳಂತೆ ಒಟ್ಟಾಗಿ ಕೈಜೋಡಿಸುವ ಮೂಲಕ ನಾಡಿನ ಭಾಷಾ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ನಾಡಿನ ಶ್ರೇಷ್ಟ ಸಂತರು, ದಾರ್ಶನಿಕರು ಕಟ್ಟಿಬೆಳೆಸಿದ ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಚಾರಿತ್ರಿಕ ಇತಿಹಾಸವಿದೆ. ರಾಷ್ಟ್ರದಲ್ಲಿ ಸುಮಾರು ೨೨ ಭಾಷೆ ಗಳಿದ್ದು, ಕನ್ನಡಕ್ಕೆ ಮಾತ್ರ ಏಳು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದಕ್ಕೆ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆಪ ಡಬೇಕು ಎಂದು ತಿಳಿಸಿದರು.

ಹಾಸನದಿಂದ ಬೆಂಗಳೂರಿಗೆ ಚತುಸ್ಪತ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈಗಾ ಗಲೇ ಟೆಂಡರ್ ಕರೆಯಲಾಗಿದೆ. ಕೆಲಸ ಕೂಡ ಆರಂಭವಾಗಿದೆ. ಬೇಲೂರಿನಿಂದ ಚಿಕ್ಕಮಗಳೂರಿ ನವರೆಗೆ ಚತುಸ್ಪತ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಮಾಡಲಾಗಿದೆ. ಈ ರಸ್ತೆ ಅ? ಅಲ್ಲ ಶೃಂಗೇರಿ, ನ.ರಾ.ಪುರ ಮತ್ತಿತರ ರಸ್ತೆಗಳನ್ನೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದರು.

ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ದುಡಿಯುತ್ತಿರುವ ಕನ್ನಡ ಸೇನೆ ನಿ?ವಂತ ಸಂಘಟನೆಯಾಗಿದೆ. ಜಿಲ್ಲೆಯಲ್ಲಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯವರು ಕನ್ನಡ ಶಾಲೆಗಳನ್ನು ಮುಚ್ಚಬಾರದು. ಕನ್ನಡ ಶಾಲೆಗಳಿಗೆ ಮತ್ತ? ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಕ ನಂತರ ನಾಡಿನ ಖ್ಯಾತ ಕಲಾವಿದರಿಂದ ಹಾಸ್ಯಸಂಜೆ ಮತ್ತು ಪ್ರಸಿದ್ಧ ಗಾಯಕರಿಂ ದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು. ಖ್ಯಾತ ಹಾಸ್ಯ ಕಲಾವಿದರಾದ ಟೆನ್ನಿಸ್ ಕೃ?, ಮಿಮಿಕ್ರಿ ಗೋಪಿ, ನಯನಾ ಅವರು ಹಾಸ್ಯಸಂಜೆ, ಪ್ರಸಿದ್ಧ ಗಾಯಕರಾದ ಗಂಧರ್ವ ಮಂಜು, ವಿನಯ್ ಆಲಾಪ್, ಕಂಬದ ರಂಗಯ್ಯ ಮತ್ತು ಅಖಿಲಾ ಪಜಿಮಣ್ಣು ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಮನಸೂ ರಗೊಂಡಿತು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕನ್ನಡಸೇನೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಚೈತ್ರಗೌಡ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಕನ್ನಡಸೇನೆ ನಗರಾಧ್ಯಕ್ಷ ಸತೀಶ್, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರುಗಳಾದ ಹೆಚ್.ಪಿ. ಮಂಜೇಗೌಡ, ಡಾ|| ಡಿ.ಎಲ್.ವಿಜಯ್‌ಕುಮಾರ್, ಎಂ.ಎಲ್.ಮೂರ್ತಿ, ಹೊನ್ನೇಶ್, ಗುರುಶಾಂತಪ್ಪ ಮತ್ತಿ ತರರು ಉಪಸ್ಥಿತರಿದ್ದರು.

The Kannada Sena has raised its voice whenever injustice is done to Kannada.

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...