Home namma chikmagalur chikamagalur ವಾಟ್ಸಾಪ್ ಮೂಲಕ 5,35 ಲಕ್ಷ ರೂ ವಂಚನೆ
chikamagalurCrime NewsHomeLatest Newsnamma chikmagalur

ವಾಟ್ಸಾಪ್ ಮೂಲಕ 5,35 ಲಕ್ಷ ರೂ ವಂಚನೆ

Share
Share

ಚಿಕ್ಕಮಗಳೂರು: ನಗರದ ವ್ಯಕ್ತಿಯೊಬ್ಬರು ವಾಟ್ಸಾಪ್ ಮೂಲಕ ಕಳುಹಿಸಿದ APK ಫೈಲ್ ಅನ್ನು ಡೌನ್‌ಲೋಡ್ ಮಾಡಿದಾಗ ತಮ್ಮ ಕೆನರಾ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 5,35,000 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಈ ಸಂಬಂಧ ಜನವರಿ 8, 2026 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ಇಂತಹ ವಂಚನೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ಸಾಮಾನ್ಯವಾಗಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಬಳಸಲಾಗುವ APK ಫೈಲ್‌ಗಳು ಮಾಲ್‌ವೇರ್ ಅಥವಾ ಹ್ಯಾಕಿಂಗ್ ತಂತ್ರಾಂಶಗಳನ್ನು ಒಳಗೊಂಡಿರಬಹುದು.

ಇವುಗಳನ್ನು ಒಮ್ಮೆ ಇನ್‌ಸ್ಟಾಲ್ ಮಾಡಿದರೆ ಹ್ಯಾಕರ್‌ಗಳು ನಿಮ್ಮ ಫೋನ್‌ನ ಮೇಲೆ ಹಿಡಿತ ಸಾಧಿಸಿ, ಬ್ಯಾಂಕ್ ಒಟಿಪಿಗಳು, ಪಾಸ್‌ವರ್ಡ್‌ಗಳು ಮತ್ತು ನಿಮ್ಮ ಖಾಸಗಿ ಮಾಹಿತಿಯನ್ನು ಸುಲಭವಾಗಿ ಕದಿಯಬಲ್ಲರು.

ಆದ್ದರಿಂದ ಅಪರಿಚಿತ ಮೂಲಗಳಿಂದ ಬರುವ ಯಾವುದೇ ಲಿಂಕ್ ಅಥವಾ ಫೈಲ್‌ಗಳನ್ನು ಕ್ಲಿಕ್ ಮಾಡಬಾರದು. ಬ್ಯಾಂಕ್‌ಗಳು ಅಥವಾ ಸರ್ಕಾರಿ ಸಂಸ್ಥೆಗಳು ಎಂದಿಗೂ ವಾಟ್ಸಾಪ್ ಮೂಲಕ ಆಪ್‌ಗಳನ್ನು ಕಳುಹಿಸುವುದಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ನೆನಪಿಡಬೇಕು.

ಒಂದು ವೇಳೆ ನೀವು ಇಂತಹ ಸೈಬರ್ ವಂಚನೆಗೆ ತುತ್ತಾದಲ್ಲಿ ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡಿ ಅಥವಾ www.cybercrime.gov.in ವೆಬ್‌ಸೈಟ್ ಮೂಲಕ ದೂರನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ.

Rs 5.35 lakh fraud through WhatsApp

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...