Home Political News ತಮಿಳು ಮಾತನಾಡಲು ನಾ ಮುಂದು ತಾ ಮುಂದು ಮತ್ತೊಬ್ರು ಹಾಡಿದ್ರು ತಮಿಳ್ ಹಾಡು
Political News

ತಮಿಳು ಮಾತನಾಡಲು ನಾ ಮುಂದು ತಾ ಮುಂದು ಮತ್ತೊಬ್ರು ಹಾಡಿದ್ರು ತಮಿಳ್ ಹಾಡು

Share
Share

ಚಿಕ್ಕಮಗಳೂರು : ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆದ ದ್ರಾವಿಡ ಸಂಸ್ಕೃತಿ ಸಮ್ಮಿಲನೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರ ತಮಿಳು ಪ್ರೇಮ ಹಾಸ್ಯ ಮಿಶ್ರಿತ ಏಟು ಎದುರೇಟಿಗೆ ಕಾರಣವಾಯಿತು. ಒಬ್ಬರಿಗಿಂತ ಒಬ್ಬರ ಮಾತಿನ ಧಾಟಿ ತಮಿಳು ಭಾಷಿಕರ ಮನಸೆಳೆಯುವಲ್ಲಿ ಯಾರು ಸಫಲವಾದರು ಎಂಬುದು ಮಾತ್ರ ಕೊನೆಗೂ ತಿಳಿಯಲಿಲ್ಲ,

ಮೊದಲಿಗೆ ಮಾತನಾಡಿದ ಸಿ.ಟಿ ರವಿ ಕನ್ನಡ ತಮಿಳು ಸೋದರತ್ವ ಹೇಳಲು ಹೋಗಿ ಕರುನಾಡನ್ನು ತಂಗಚ್ಚಿ ಎನ್ನುವ ಮೂಲಕ ಚಪ್ಪಾಳೆ ಗಿಟ್ಟಿಸಿದರು. ಇದಕ್ಕೆ ಸಖತ್ ಟಾಂಗ್ ಕೊಟ್ಟ ಶಾಸಕ ಎಚ್ ಡಿ ತಮ್ಮಯ್ಯ ನಾನು ಚಪ್ಪಾಳೆ ಗಿಟ್ಟಿಸಿಕೊಳ್ಳಲು ಮಾತನಾಡಲ್ಲ ಲಾರಿ ಆಫೀಸ್ ನಲ್ಲಿ ತಮಿಳು ಭಾಷೆಯನ್ನು ಚನ್ನಾಗಿ ಕಲಿತಿದ್ದೆ ಎಂಬುದನ್ನು ತಮಿಳಿನಲ್ಲೇ 2 ನಿಮಿಷ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದರು.‌

ಗಾಯತ್ರಿ ಶಾಂತೇಗೌಡ ಅಂತ ತಮಿಳು ಮಾತನಾಡಿದರೆ ಡಬಲ್ ಮೀನಿಂಗ್ ಆಗುತ್ತೆ ಎನ್ನುವ ಮೂಲಕ ಸಭೆಯನ್ನು ನಗೆ ಕಡಲಲ್ಲಿ ತೇಲುವಂತೆ ಮಾಡಿದರು. ಕೊನೆಗೆ ಕನ್ನಡದಲ್ಲೇ ಮಾತನಾಡಿದರು.

ಆದರೆ ಪಂಚ್ ನೀಡಿದ್ದು ಮಾತ್ರ ಎಂಎಲ್ ಸಿ ಎಸ್ ಎಲ್ ಭೋಜೇಗೌಡ ಎಲ್ಲರೂ ತಮಿಳು ಮಾತನಾಡಿ ಗಮನ ಸೆಳೆಯಲು ಯತ್ನಿಸಿದರೆ ಸಿಂದೂರ ಪೂವೆ ಸಿಂದೂರ ಪೂವೆ‌ ಎಂಬ ಅಣ್ಣಕ್ಕಿಳಿ ಸಿನೆಮಾದ ಶಿವಕುಮಾರ್ ನಟನೆಯ ಹಾಡು ಮತ್ತು ಕಾಮಿಡಿ ಹಾಡೊಂದನ್ನು ಹಾಡುವ ಮೂಲಕ ಆಕರ್ಷಣೆಯನ್ನು ತಮ್ಮತ್ತ ಬರಮಾಡಿಕೊಂಡರು.

Share

Leave a comment

Leave a Reply

Your email address will not be published. Required fields are marked *

Don't Miss

ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ

ಚಿಕ್ಕಮಗಳೂರು:  ಬಾಲ ಕಾರ್ಮಿಕರನ್ನು ಯಾವುದೇ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪ ರಾಧವಾಗಿದ್ದು, ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವ ಮಾಲೀಕರಿಗೆ ೬ ತಿಂಗಳಿಗಿಂತ ಕಡಿಮೆಯಿಲ್ಲದಂತೆ ೨ ವರ್ಷ ಜೈಲು ಶಿಕ್ಷೆ ಹಾ ಗೂ...

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂಸದರ ಅಸಮಾಧಾನ

ಚಿಕ್ಕಮಗಳೂರು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿವಿಧ ಏಜೆನ್ಸಿಗಳ ಆಮೆಗತಿಯ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಬಿಗಿ...

Related Articles

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...

ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾರನ್ನು ನಂಬಿದ್ದರು ಅವರೇ ಕೈ ಕೊಡುವ ಸೂಚನೆ ಅರಿತು ರಾಹುಲ್...