ಅದಲು-ಬದಲು ಯಾವ ಪಕ್ಷಗಳಿಗೆ ಸಿದ್ದಾಂತ, ನೈತಿಕತೆ ಇದೆ ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಬೆರಿಕೆಯ ತುರಿಕೆಯಲ್ಲಿವೆ.ಅದರಲ್ಲೂ ನಾಯಕರುಗಳು,ಮುಖಂಡರು ಮತ್ತೆ ಜನ ಕೂಡ ಮತ್ತೆ, ಮತ್ತೆ ಬೇಲಿ ಹಾರುವ ಚಾಳಿಗೆ ಒಗ್ಗಿಹೋಗುತ್ತಿದ್ದಾರೆ.ಒಟ್ಟಾರೆ ಅಧಿಕಾರ ಮತ್ತು ಹಣ,ಹಾಗೂ ಆಸ್ತಿ ಸಂಪಾದನೆ ಮುಖ್ಯ ಎನ್ನುವ ಮನಸ್ಥಿತಿಯಲ್ಲಿದ್ದಾರೆ.
ಸ್ವಾತಂತ್ರ್ಯ. ಬಂದ ದಿನಮಾನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ರನ್ನು ಊರಿನ ಮುಖಂಡರುಕರೆದು ಸ್ಥಾನ ಮಾನ ಕೊಟ್ಟು ವಿಧಾನಸಭಾ ಮತ್ತು ಲೋಕಸಭಾ ಸ್ಥಾನಗಳಿಗೆ ಕಳುಹಿಸಿ ಕೊಡುತ್ತಿದ್ದರು.ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬಿಟ್ಟರೆ ಬಹುತೇಕ ಬುದ್ಧಿಜೀವಿಗಳು ಅಡಳಿತ ಮತ್ತು ವಿರೋಧ ಪಕ್ಷದಲ್ಲಿ ಠಳಾಯಿಸುತ್ತಿದ್ದವರು ಅಷ್ಟೇ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದರು. 70ರವರೆಗೆ ಇದೇ ಪರಿಸ್ಥಿತಿ ಇತ್ತು ಎಂಬುದನ್ನು ಇತಿಹಾಸ ಹೇಳುತ್ತದೆ.
70ರಿಂದ 80 ರವರೆಗೆ ಒಂದು ಒಟೂ ಮತ್ತೆ ನೋಟು ರಾಜಕಾರಣ ಕೂಡ ನೈತಿಕವಾಗಿತ್ತು ಯಾವುದೇ ಊರಿಗೆ ಹೋದಾಗ ಮನೆಗೆ ಇಲ್ಲ ಕಟ್ಟೆ ಮೇಲೆ ಕುಳಿತು ಹಣ ಕೊಟ್ಟು ಒಟೂ ನೀಡುತ್ತಿದ್ದ ಮುಗ್ದ ಜನರನ್ನು ಕಾಣಬಹುದಾಗಿತ್ತು. ಜನಪ್ರತಿನಿಧಿಗಳಿಗೆ ಗೌರವ ಇತ್ತು ಜನಪ್ರತಿನಿಧಿಗಳು ಜನರಿಗೆ ಅಷ್ಟೇ ಘನತೆಯಿಂದ ನಡೆದುಕೊಳ್ಳುತ್ತಿದ್ದ ದಿನಗಳು ಮಾಯವಾಗುತ್ತಾ ಬಂದಿತು.ಕೆಂಪು ಸೂರ್ಯ ದಿ.ಕಾಂ.ಸುಂದರೇಶ್ ಕೂಡ ಇಂತಹ ಚುನಾವಣೆ ಮಾಡಿದ್ದನ್ನು ನಾವು ಕಾಲೇಜ್ ದಿನಗಳಲ್ಲಿ ನೋಡಿದ್ದೇವೆ.
ಕಾಂಗ್ರೆಸ್ ಮತ್ತು ಕಮ್ಯುನಿಸ್ಟ ಪಕ್ಷಗಳ ಮಧ್ಯೆ ಇಂತಹ ನೈತಿಕ ರಾಜಕಾರಣ ನೋಡಬಹುದು. ದೇಶದಲ್ಲಿ ಕಾಂಗ್ರೆಸ್ ಶ್ರೀ ಮಂತ ಪಕ್ಷ ಬಡಜನತೆ ಪಕ್ಷ ಕಮ್ಯುನಿಸ್ಟ್ ಎಂಬ ತತ್ವಧಾರಿತ ರಾಜಕಾರಣ ನಡೆದಿತ್ತು ಅಲ್ಲೊಂದು ಇಲ್ಲೊಂದು ಪ್ರಾದೇಶಿಕ ಪಕ್ಷ ಹೊರೆತು ಪಡಿಸಿದರೆ ತತ್ವ ಸಿದ್ದಾಂತ ಮತ್ತು ಬದ್ದತೆಯ ಜೊತೆಗೆ ರಾಜಕಾರಣ ಬೆರೆತು ಹೋಗಿತ್ತು.ತುರ್ತುಪರಿಸ್ಥಿತಿ ನಂತರದ ದಿನಗಳಲ್ಲಿ ಕಾಂಗ್ರೆಸ್ ವಂಶ ಪಾರಂಪರ್ಯವಾದ ಪಕ್ಷ ವಾದರೆ ಇಂದಿರಾಗಾಂಧಿ ತುರ್ತುಪರುಸ್ಥಿತಿ ತಂದಾಗ ಕಮ್ಯುನಿಸ್ಟ್ ಪಕ್ಷ ಪರ ನಿಂತವರು ವಿರೋಧ ಮಾಡಿ ಕಮ್ಯೂನಿಸ್ಟ್ ಪಕ್ಷ ಒಡೆದು ಹೋಗಿ ರಾಜಕಾರಣದ ಇಳಿಜಾರಿನಲ್ಲಿ ಸಾಗತೊಡಗಿತು.ಅಲ್ಲಿಂದ ಜಾತಿ,ರಾಜಕಾರಣ, ಭಟ್ಟಂಗಿಗಳ ಸಮಯ ಸಾಧಕರ ರಾಜಕಾರಣ ಪ್ರಾರಂಭವಾಗಿದೆ ಇದಕ್ಕೆ ಮುನ್ನುಡಿ ಬರೆದವರು ದಿ.ಇಂದಿರಾಗಾಂಧಿ ಮತ್ತು ಮಗ ಸಂಜಯ್ ಗಾಂಧಿ ಎನ್ನುತ್ತಾರೆ ರಾಜಕೀಯ ತಜ್ಞರು. ಅಲ್ಲಿಂದ ಪ್ರಾರಂಭದ ರಾಜಕಾರಣ ಹಣ ಬಲ,ತೊಳ್ ಬಲ ಜಾತಿ ರಾಜಕಾರಣ ಲಂಗುಲಾಗಮು ಇಲ್ಲದೇ ನಡೆಯುತ್ತಿದೆ.
ಜಾತಿ ಬಲ ಹಣ ಇದ್ದವನು ರಾಜಕಾರಣ ಮಾಡಬಹುದು ಇಲ್ಲಾ ಎಲ್ಲ ಕಳೆದುಕೊಂಡು ಮಠ ಸೇರಬಹುದು.2000 ದ ನಂತರದ ರಾಜಕಾರಣದಲ್ಲಿ ಬಿಜೆಪಿಯವರು ಧರ್ಮ ಮತ್ತು ದೇವರ ಹೆಸರಿನಲ್ಲಿ ಮಠಗಳನ್ನು ರಾಜಕೀಯ ಕೇಂದ್ರ ಮಾಡಿಕೊಂಡು ರಾಜಕೀಯ ನಡೆಸುತ್ತಿದ್ದಾರೆ. ಪಕ್ಷಗಳು ಗೌಣವಾಗುತ್ತಿವೆ ವ್ಯಕ್ತಿ ರಾಜಕಾರಣ ವಂಶಪಾರಂಪರ್ಯ ಅತಿಯಾಗಿದೆ ಇದಕ್ಕೆ ಯಾವುದೇ ಪಕ್ಷ ಸೀಮಿತ ವಲ್ಲ.ಇನ್ನೂ ಮುಂದೆ ಸಾಗಿರುವ ರಾಜಕಾರಣ ಎಜುಕೇಶನ್ ಮಾಫಿಯಾ ಹೆಂಡದ ಅಂಗಡಿ ಮಾಲೀಕರು, ರಿಯಲ್ ಎಸ್ಟೇಟ್ ಡಾನ್ ಗಳು, ಗಣಿಮಾಫಿಯಾ,ಗೆದ್ದು ಬಂದು ತಮ್ಮ ಧಂದೆಯನ್ನು ಮತ್ತಷ್ಟು ವಿಸ್ತಾರವಾನ್ನಾಗಿಸಿ ಕೊಳ್ಳುತಿದ್ದಾರೆ.ಪಕ್ಷಾಂತರ ಮಾಡಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದಾರೆ.ಹಿಂದೆ ಕಾಂಗ್ರೆಸ್ ನವರು ರಾಜ್ಯಪಾಲರನ್ನು ಬಳಸಿ ಸರ್ಕಾರ ಬದಲಾವಾಣೆ ಮಾಡಿದರೆ ಪ್ರಸ್ತುತ ಐ.ಟಿ.ಇ.ಡಿ ಇ.ಸಿ ಸಿಬಿಐ ತೋರಿಸುವುದರ ಜೊತೆಗೆ ಹಣದ ತೈಲಿ ಬಹಿರಂಗವಾಗಿ ಸರ್ಕಾರ ಬದಲಾವಣೆ ಮಾಡುತ್ತಿರುವುದು ಎದ್ದು ಕುಣಿಯುತ್ತಿದೆ.
ವಂಶಪಾರಂಪರ್ಯದ ರಾಜಕಾರಣಕ್ಕೆ ಕರ್ನಾಟಕದ ಹಲವು ಜಿಲ್ಲೆಗಳು ಒಂದು ಮನೆತನಕ್ಕೆ ಸೇರಿ ರಾಜಕಾರಣ ಮಾಡುತ್ತಿರುವುದರ ಮತದಾರ ಹಣದ ಮೋಹಕ್ಕೆ ಜೋತು ಬಿದ್ದು ಬೆಂಬಲಿಸುತ್ತಿರುವುದು ಕಾಣಬಹುದು. ಬಳ್ಳಾರಿ ಬಿಜೆಪಿಯ ಗಣಿಧಣಿಗಳಾದ ಜನಾರ್ದನ ರೆಡ್ಡಿ,ಕರುಣಾಕರ ರೆಡ್ಡಿ,ಸೋಮಶೇಖರ್ ರೆಡ್ಡಿಗಳು ಗುಲ್ಬರ್ಗ .ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ,ಪ್ರಿಯಾಂಕಾ ಖರ್ಗೆ,ಅಳಿಯ.ಇಲ್ಲಿ ಧರ್ಮಸಿಂಗ್ ಮತ್ತು ಮಕ್ಕಳು ಕಮ್ರುಲ್ ಇಸ್ಲಾಮ್ ಲೋಕಸಭಾ ಸದಸ್ಯ. ದಾವಣಗೆರೆ .ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ ಮಗ ಮಲ್ಲಿಕಾರ್ಜುನ ಸೊಸೆ ಪ್ರಭಾ ಮಲ್ಲಿಕಾರ್ಜುನ ಮೊಮ್ಮಗ ಸಮಂತ್ .ಮತ್ತು ಬಿಜೆಪಿ ಸಿದ್ದೇಶ ಮತ್ತು ಕುಟುಂಬ.
ಬೀದರ್ ಕಾಂಗ್ರೆಸ್ ನ ಖಂಡ್ರೆ ಕುಟುಂಬ ಶಿವಮೊಗ್ಗ ಕಾಂಗ್ರೆಸ್ ನ ಬಂಗಾರಪ್ಪ ಮತ್ತು ಮಕ್ಕಳು ಬಿಜೆಪಿಯ ಯಡಿಯೂರಪ್ಪ ಮತ್ತು ಮಕ್ಕಳು, ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿ ರೇವಣ್ಣ,ಕುಮಾರಸ್ವಾಮಿ ಮತ್ತು ಮೊಮ್ಮಕ್ಕಳು ಜೊತೆಗೆ ಮನೆ ಮಂದಿಯಲ್ಲ ರಾಜಕಾರಣದಲ್ಲಿದ್ದಾರೆ. ಮೈಸೂರಿನಲ್ಲಿ ಸಿದ್ದಾರಾಮಯ್ಯ ಕೂಡ ಪುತ್ರ ಪ್ರೇಮಕ್ಕೆ ಯತೀಂದ್ರ ಮಂತ್ರಿಯಾಗಿದ್ದಾರೆ,ಅಜೀಜ್ ಸೇಠ್ ಮತ್ತು ಮಗ ತನ್ವೀರ್ ಸೇಟ್ ಭದ್ರ ನೆಲೆಯಲ್ಲಿದ್ದಾರೆ.
ಜಿ.ಟಿ.ದೇವೇಗೌಡ ಮತ್ತು ಮಗ ಹರೀಶ್ ಶಾಸಕರುಗಳು,ಹೆಚ್.ಸಿ.ಮಹದೇವಪ್ಪ ಮತ್ತು ಮಗ ಸುನೀಲ್ ಬೋಸ್ ವಂಶಪಾರಂಪರ್ಯದ ರೂವಾರಿಗಳು, ರಾಮನಗರದಲ್ಲಿ ಹಾಲಿ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ತಮ್ಮ ಡಿ.ಕೆ .ಸುರೇಶ್ ತಾಜಾ ಉದಾಹರಣೆ. ಕೋಲಾರದಲ್ಲಿ ಮಂತ್ರಿ ಮುನಿಯಪ್ಪ ಮತ್ತು ಮಗಳು ರೂಪಕಲಾ ಶಾಸಕಿಯಾಗಿದ್ದಾರೆ.ಬಚ್ಚೇಗೌಡ ಮತ್ತು ಶರತ್ ಕೂಡ ಸೇರಿದ್ದಾರೆ.ತುಮಕೂರಿನಲ್ಲಿ ಎಂ.ಪಿ.ಯಾಗಿದ್ದಬಸವರಾಜು ಮತ್ತುಮಗ ಜ್ಯೋತಿ ಗಣೇಶ್ ಶಾಸಕ ದಕ್ಷಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ವಂಶಪಾರಂಪರ್ಯಕ್ಕೆ ಅವಕಾಶ ಕೊಟ್ಟಿಲ್ಲ ಆದರೆ ಉಡುಪಿಯಲ್ಲಿ ಮನೋರಮಾ ಮದ್ವರಾಜ್ ಮತ್ತು ಮಗ ಪಳೆಯುಳಿಕೆಯಾಗಿದ್ದಾರೆ.ಇನ್ನೂ ಬಹಳ ಜನ ಈ ಪಟ್ಟಿಗೆ ಸೇರುತ್ತಾರೆ.
ವ್ಯವಸ್ಥೆ ರಾಜಕಾರಣಕ್ಕೆ ಮಾತ್ರ ಸೀಮಿತವೆಂದರೆ ಎಂದರೆ ಇಲ್ಲ ಮಠದ ಸ್ವಾಮಿಗಳು ಪರೋಕ್ಷವಾಗಿ ಹಲವು ಪಕ್ಷದ ಉಸ್ತುವಾರಿ ಗಳಂತೆ ಇದ್ದಾರೆ.ಅದರಲ್ಲೂ ಜಾತಿಗೊಬ್ಬ ಸ್ವಾಮೀಜಿಗಳು ವಿಧಾನ ಸೌದದಲ್ಲಿ ಮಂತ್ರಿ ಗಳ ಮನೆಯಲ್ಲಿ ಠಳಾಯಿಸುತ್ತಾರೆ.ಇವರು ಕ್ಷೇತ್ರದ ಪ್ರಮುಖ ಭಕ್ತರನ್ನು ಕರೆಯಿಸಿ ಇಂತಹ ಪಕ್ಷ ಗೆಲ್ಲಿಸಿ ಎಂಬ ಆರ್ಡರ್ ಮಾಡಿರುವುದು ಉಂಟು ಮತ್ತೆ ಪೂಜೆ ನೆಪದಲ್ಲಿ ಪ್ರಚಾರಕ್ಕೆ ಹೋಗಿರುವುದು ಉಂಟು ಅಸುದಾನಕ್ಕಾಗಿ ದುಂಬಾಲು ಬೀಳುತ್ತಾರೆ. ಇದು ಯಡ್ಡಿ ಕಾಲದಿಂದ ಹೆಚ್ಚಾಗಿದೆ.
ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಹಾಗೂ ಇಂದಿನ ಮಾಧ್ಯಮಗಳು ಕೂಗುಮಾರಿಯಂತೆ ವರ್ತಿಸುತ್ತಿರುವುದು, ಮಾದ್ಯಮಗಳು ದಾರಿ ತಪ್ಪಿವೆ ಎನ್ನುವಂತಾಗಿದೆ ಹಾಗೇಯೇ ಕ್ರೀಡಾಕ್ಷೇತ್ರ ಮತ್ತು ಮನೂರಂಜ ನೆ ನೀಡುತ್ತಿದ್ದ ಚಿತ್ರರಂಗ ಕೂಡ ನೈತಿಕ ಅಧಃಪತನ ದಾರಿ ಹೋಗುತ್ತಿರುವು ಜನ ನಂಬಿಕೆ ಕಳೆದು ಕೊಳ್ಳವಂತೆ ಮಾಡಿದೆ.
ಸಂಪೂರ್ಣ ವಿವರ ಬರೆಯಬೇಕಾದರೆ ಒಂದು ನೂರು ಪುಸ್ತಕದಲ್ಲಿ ಬರೆಯಬೇಕಾಗುತ್ತದೆ.ಮಾಹಿತಿ ಗಾಗಿ . ಮೌಲ್ಯ, ಸೇವೆ, ಜನರಹಿತ ಬಯಸುವ ಕಾಲವೊಂದು ಇತ್ತು ಇಂದು ಹಣಕ್ಕಾಗಿ ಇಂತಹ ನೀಚತನಕ್ಕೆ ಬಂದು ನಿಂತಿದೆ.ಜನ ಕೂಡ ಐದು ವರ್ಷಕ್ಕೆ ಕೈ ಚಾಚಿ ನಿಲ್ಲುವುದರಿಂದ ಸುಧಾರಣೆ ಕಷ್ಟ, ಕಷ್ಟ ಎನ್ನುವ ಮಧ್ಯೆ ಜೆನ್ ಜೀಗಳು ಹೊಸ ಭರವಸೆ ಮೂಡಿಸಿದ್ದಾರೆ.
Politics is dirty money and money is greed……
Leave a comment