Home namma chikmagalur ಜಾನುವಾರು ಕಳ್ಳರಿಂದ 4 ಹಸುಗಳನ್ನು ವಶಕ್ಕೆ ಪಡೆದ ಪೋಲಿಸರರು
namma chikmagalurchikamagalurHomeLatest News

ಜಾನುವಾರು ಕಳ್ಳರಿಂದ 4 ಹಸುಗಳನ್ನು ವಶಕ್ಕೆ ಪಡೆದ ಪೋಲಿಸರರು

Share
Share

ಕಳಸ: ಜಾನುವಾರು ಕಳ್ಳರನ್ನು ಶುಕ್ರವಾರ ನಸುಕಿನಲ್ಲಿ ಬೆನ್ನಟ್ಟಿದ ಕಳಸ ಪೊಲೀಸರು ವಾಹನ, 4 ಹಸುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಲಿಗೆ- ಹೊರನಾಡು ಕಡೆಯಿಂದ ಬಂದ ವಾಹನದ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಕಳಸ ಪೊಲೀಸರು ಪಿಎಸ್‌ಐ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ವಾಹನ ದಾರಿಮನೆ- ಹಳುವಳ್ಳಿ ರಸ್ತೆಯಲ್ಲಿ ಸಾಗಿದ್ದನ್ನು ಖಚಿತಪಡಿಸಿಕೊಂಡ ಪೊಲೀಸರು ಅದೇ ಮಾರ್ಗದಲ್ಲಿ ಬೆಳಗಿನ ಜಾವ 1.30ರ ಸುಮಾರಿಗೆ ಹೊರಟಿದ್ದರು.

ಸ್ವಲ್ಪ ದೂರ ಸಾಗಿದಾಗ ದನ ಕಳ್ಳರು ವಾಹನಕ್ಕೆ ಜಾನುವಾರು ತುಂಬಿಸುತ್ತಿದ್ದು ಕಂಡು ಬಂದಿದೆ. ಪೊಲೀಸ್ ವಾಹನ ಕಳ್ಳರ ವಾಹನಕ್ಕಿಂತ ಮುಂದೆ ಹೋಗಿ ಅವರ ವಾಹನ ಅಡ್ಡಗಟ್ಟಿತು. ಅಷ್ಟರಲ್ಲಿ ಕಳ್ಳರು ವಾಹನವನ್ನು ಹಿಂದಕ್ಕೆ ತಿರುಗಿಸಿ ಪರಾರಿಯಾಗಲು ಯತ್ನಿಸಿದರು. ಪೊಲೀಸರು ಬೆನ್ನಟ್ಟಿದಾಗ ವಾಹನವನ್ನು ಅಲ್ಲೇ ಬಿಟ್ಟು ರಸ್ತೆ ಪಕ್ಕದ ಕಾಫಿ ತೋಟದ ಒಳಗೆ ಕಳ್ಳರು ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದನಕಳ್ಳರ ವಾಹನದಲ್ಲಿ 4 ಹಸುಗಳು, 3 ಫೋನ್ ಮತ್ತು ಒಂದು ಕಬ್ಬಿಣದ ರಾಡ್ ಪತ್ತೆ ಆಗಿದೆ. ವಾಹನದ ನಂಬರ್ ಪ್ಲೇಟ್ ನಕಲಿ ಎಂದು ತಿಳಿದುಬಂದಿದೆ. ಲಭ್ಯವಿರುವ ಮಾಹಿತಿ ಅನುಸರಿಸಿ ಕಳ್ಳರನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಕಳಸ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.

Police seize 4 cows from cattle thief

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷ

ಕೊಟ್ಟಿಗೆಹಾರ : ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಮಳೆಗಾಲದ ಹಿನ್ನೆಲೆ ಮತ್ತು ಕಡಿಮೆಯಾದ ದೃಶ್ಯತೆಯಿಂದ ಪ್ರವಾಸಿಗರಿಗೆ ಹೆಚ್ಚಿನ ಅಪಾಯ ಸಾಧ್ಯತೆ ಇರುವ ಕುರಿತು ಆತಂಕ...

ತೀವ್ರಗೊಂಡ ಉದ್ಯಮಿ ಪತ್ನಿಯ ಆತ್ಮಹತ್ಯೆ ಪ್ರಕರಣ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದ್ದು ನಗರದ ಉದ್ಯಮಿ ರಾಜೇಶ್ ಅವರ ಪತ್ನಿ ಸುಮ (55) ಆಲೇನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಅವರು...

Related Articles

ಅತ್ಯಾಚಾರ ಆರೋಪಿಗೆ 20 ವರ್ಷ ಕಠಿಣ ಸಜೆ-ದಂಡ

ಚಿಕ್ಕಮಗಳೂರು: ಅಪ್ರಾಪ್ತೆಯೊಬ್ಬಳು ಗರ್ಭಿಣಿಯಾಗಲು ಕಾರಣನಾದ ಆರೋಪಿಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ಎಫ್.ಟಿ.ಎಸ್.ಈ-೧ರ...

ನರೇಂದ್ರ ಮೋದಿ ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ

ಚಿಕ್ಕಮಗಳೂರು : ಸಾರ್ವತ್ರಿಕ ಚುನಾವಣೆಗಳ ಮೂಲಕ ಭಾರತದ ಅತಿ ಹೆಚ್ಚುಕಾಲ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ...

ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು

  ಚಿಕ್ಕಮಗಳೂರು : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ.ಹರಿಪ್ರಸಾದ್ ಅವರ ಅಧಿಕಾರ ಸ್ವೀಕಾರ ಸಮಾರಂಭ...

ವಿದ್ಯುತ್ ಕ್ಷೇತ್ರ ಖಾಸಗಿಕರಣಕ್ಕೆ ರೈತ ಸಂಘ ವಿರೋಧ

ಚಿಕ್ಕಮಗಳೂರು : ವಿದ್ಯುತ್ ಕ್ಷೇತ್ರವನ್ನು ಟಾಟಾ ಪವರ್ ಕಂಪನಿಗೆ ನೀಡುವ ಮೂಲಕ ಖಾಸಗಿಕರಣಗೊಳಿಸುವ ನಿರ್ಧಾರವನ್ನು ಖಂಡಿಸುವುದಾಗಿ...