Home namma chikmagalur ಅನಸೂಯ ಜಯಂತಿ-ಶೋಭಾಯಾತ್ರೆ ದಿನ ವಾಹನ ನಿಲುಗಡೆ-ಸಂಚಾರ ನಿಷೇಧ
namma chikmagalurchikamagalurHomeLatest News

ಅನಸೂಯ ಜಯಂತಿ-ಶೋಭಾಯಾತ್ರೆ ದಿನ ವಾಹನ ನಿಲುಗಡೆ-ಸಂಚಾರ ನಿಷೇಧ

Share
????????????????????????????????????
Share

ಚಿಕ್ಕಮಗಳೂರು: ದತ್ತಜಯಂತಿ ಪ್ರಯುಕ್ತ ನವೆಂಬರ್ ೨ರ ಅನಸೂಯ ಜಯಂತಿ ಹಾಗೂ ನವೆಂಬರ್ ೩ರ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಈ ಎರಡು ದಿನಾಂಕಗಳಲ್ಲಿ ನಗರದ ಹಲವು ಕಡೆಗಳಲ್ಲಿ ನಿಗದಿಪಡಿಸಿದ ಅವಧಿಯಲ್ಲಿ ವಾಹನಗಳ ನಿಲುಗಡೆ ಹಾಗೂ ಸಂಚಾರವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ನವೆಂಬರ್ ೨ರ ಅನಸೂಯ ಜಯಂತಿಯಂದು ಮೆರವಣಿಗೆ ಸಂಚರಿಸುವ ಮಾರ್ಗವಾದ ಕೆ.ಎಂ.ರಸ್ತೆ (ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ಶೃಂಗಾರ್ ಸರ್ಕಲ್‌ವರೆಗೆ ಐ.ಜಿ.ರಸ್ತೆಯ ಎಡಭಾಗದ ಪಥದಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಲ್ಲಿ ನಿಲುಗಡೆ ಮಾಡುವ ವಾಹನಗಳಿಗೆ ಜಿಲ್ಲಾ ಆಟದ ಮೈದಾನದ ಸುತ್ತಮುತ್ತ ಮತ್ತು ಬಾರ್‌ಲೇನ್ ರಸ್ತೆಯನ್ನು ಬದಲಿ ಸ್ಥಳವಾಗಿ ನೀಡಲಾಗಿದೆ. ಅಂತೆಯೇ ರತ್ನಗಿರಿ ರಸ್ತೆಯ ಶೃಂಗಾರ್ ಸರ್ಕಲ್‌ನಿಂದ ಭುವನೇಶ್ವರಿ ವೃತ್ತ(ಟೌನ್ ಕ್ಯಾಂಟೀನ್)ದವರೆಗೆ ಆರ್.ಜಿ.ರಸ್ತೆಯ ಎಡಭಾಗದ ಪಥದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಇಲ್ಲಿಗೆ ಪರ್ಯಾಯವಾಗಿ ಬಸವನಹಳ್ಳಿ ರಸ್ತೆ ಮತ್ತು ವಿಜಯಪುರ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು.

ಅನಸೂಯ ಜಯಂತಿಯ ಮೆರವಣಿಗೆ ಸಾಗುವ ಬೋಳರಾಮೇಶ್ವರ ದೇವಸ್ಥಾನದಿಂದ ಶೃಂಗಾರ್ ಸರ್ಕಲ್‌ವರೆಗೆ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಮಾರ್ಗಕ್ಕೆ ಪರ್ಯಾಯವಾಗಿ ಮೂಡಿಗೆರೆಯಿಂದ ಕಡೂರು ಕಡೆ ಸಂಚರಿಸುವ ವಾಹನಗಳು ಆಜಾದ್ ಪಾರ್ಕ್-ಬೈಪಾಸ್ ರಸ್ರೆಯ ಮೂಲಕ ಸಂಚರಿಸಬೇಕು. ಕಡೂರಿನಿಂದ ಮೂಡಿಗೆರೆಗೆ ಸಂಚರಿಸುವ ವಾಹನಗಳು ಬೈಪಾಸ್, ಮಾರ್ಕೇಟ್ ರಸ್ತೆ ಮತ್ತು ಎಂ.ಜಿ.ರಸ್ತೆ ಮೂಲಕ ಸಂಚರಿಸಬೇಕು. ರತ್ನಗಿರಿ ರಸ್ತೆಯಲ್ಲಿ ಶೃಂಗಾರ್ ಸರ್ಕಲ್‌ನಿಂದ ಟೌನ್ ಕ್ಯಾಂಟೀನ್ ಸರ್ಕಲ್‌ವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಈ ಮಾರ್ಗಕ್ಕೆ ಪರ್ಯಾಯವಾಗಿ ಬಸವನಹಳ್ಳಿ ರಸ್ತೆ ಮತ್ತು ಕೆಂಪನಹಳ್ಳಿ ರಸ್ತೆ ಮೂಲಕ ಸಂಚರಿಸಬೇಕು.

ಅಂದು ಮೂಡಿಗೆರೆ ಕಡೆಯಿಂದ ಬರುವ, ಹಾಸನ ಹಾಗೂ ಕಡೂರು ಕಡೆಗೆ ಹೋಗುವ ಎಲ್ಲಾ ರೀತಿಯ ಭಾರೀ ಸರಕು ವಾಹನಗಳು ಇಂಡಸ್ಟ್ರಿಯಲ್ ಏರಿಯಾ ಕಡೆಯಿಂದ ಸಾಗಬೇಕು. ಅದೇ ರೀತಿಯ ಕಡೂರು ಕಡೆಯಿಂದ ಬರುವ ಮೂಡಿಗೆರೆ ಹಾಗೂ ಹಾಸನ ಕಡೆಗೆ ಹೋಗುವ ಎಲ್ಲಾ ಭಾರಿ ಸರಕು ವಾಹನಗಳು ಬೈಪಾಸ್ ಮೂಲಕ ಪೈ ಸರ್ಕಲ್ ಕಡೆಗೆ ಹೋಗಬೇಕು.

ಶೋಭಾಯಾತ್ರೆಯ ದಿನವಾದ ಡಿ.೩ ರಂದು ಮೆರವಣಿಗೆ ಸಂಚರಿಸುವ ರತ್ನಗಿರಿ ರಸ್ತೆಯ ಫುಡ್ ಪ್ಯಾಲೆಸ್‌ನಿಂದ ಟೌನ್ ಕ್ಯಾಂಟೀನ್‌ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದ್ದು, ಇಲ್ಲಿಗೆ ಪರ್ಯಾಯವಾಗಿ ವಿಜಯಪುರ ಮುಖ್ಯರಸ್ತೆ, ವಿಜಯಪುರ ಫುಡ್ ಕೋರ್ಟ್, ಕೆಂಪನಹಳ್ಳಿ ರಸ್ತೆ, ವೀರಭದ್ರೇಶ್ವರ ದೇವಾಲಯದ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಬಸವನಹಳ್ಳಿ ರಸ್ತೆಯ ಭುವನೇಶ್ವರಿ ಸರ್ಕಲ್ (ಟೌನ್ ಕ್ಯಾಂಟೀನ್), ಕೆ.ಇ.ಬಿ. ಸರ್ಕಲ್‌ನಿಂದ ಹನುಮಂತಪ್ಪ ಸರ್ಕಲ್‌ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದ್ದರೆ, ಇದಕ್ಕೆ ಪರ್ಯಾಯವಾಗಿ ಕೆಂಪನಹಳ್ಳಿ ರಸ್ತೆ, ಕುಂಬಾರ ಬೀದಿ, ರಾಮನಹಳ್ಳಿ ಮತ್ತು ವಿಜಯಪುರದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಮಹಾತ್ಮ ಗಾಂಧಿ ರಸ್ತೆಯ ಹನುಮಂತಪ್ಪ ಸರ್ಕಲ್‌ನಿಂದ ಆಜಾದ್ ಪಾರ್ಕ್‌ವರೆಗೆ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಐ.ಜಿ.ರಸ್ತೆ, ಅಂಬೇಡ್ಕರ್ ರಸ್ತೆ ಮತ್ತು ಬಾರ್‌ಲೇನ್ ರಸ್ತೆಗಳಲ್ಲಿ ನಿಲುಗಡೆಗೆ ಅವಕಾಶ ಒದಗಿಸಲಾಗುವುದು.

ಶೋಭಾಯಾತ್ರೆ ಸಾಗುವ ರತ್ನಗಿರಿ ರಸ್ತೆಯ ಫುಡ್ ಪ್ಯಾಲೇಸ್‌ನಿಂದ ಭುವನೇಶ್ವರಿ ಸರ್ಕಲ್‌ವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಪರ್ಯಾಯವಾಗಿ ಬಸವನಹಳ್ಳಿ ರಸ್ತೆ, ವಿಜಯಪುರ, ಕೆಂಪನಹಳ್ಳಿ ರಸ್ತೆ ಮತ್ತು ವೀರಭದ್ರೇಶ್ವರ ದೇವಸ್ಥಾನದ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕು. ಬಸವನಹಳ್ಳಿ ರಸ್ತೆಯ ಭುವನೇಶ್ವರಿ ಸರ್ಕಲ್‌ನಿಂದ ಹನುಮಂತಪ್ಪ ಸರ್ಕಲ್‌ವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಪರ್ಯಾಯವಾಗಿ ರತ್ನಗಿರಿ ರಸ್ತೆ, ಕೆಂಪನಹಳ್ಳಿ ರಸ್ತೆ ಮತ್ತು ರಾಮನಹಳ್ಳಿ, ವಿಜಯಪುರ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕು. ಮಹಾತ್ಮ ಗಾಂಧಿ ರಸ್ತೆಯ ಹನುಮಂತಪ್ಪ ಸರ್ಕಲ್‌ನಿಂದ ಆಜಾದ್ ಪಾರ್ಕ್ ವೃತ್ತದವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಅಂಬೇಡ್ಕರ್ ರಸ್ತೆ, ಇಂದಿರಾಗಾಂಧಿ ರಸ್ತೆ ಮತ್ತು ಬಾರ್‌ಲೇನ್ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕು.

ಪ್ರಸ್ತುತ ಅಂಬೇಡ್ಕರ್ ರಸ್ತೆಯು ದ್ವಿಮುಖ ರಸ್ತೆಯಾಗಿದ್ದು, ಶೋಭಾಯಾತ್ರೆಯ ದಿನದಂದು ಕೆ.ಎಂ.ರಸ್ತೆ ಕ್ರಾಸ್‌ನಿಂದ ಅಂಬೇಡ್ಕರ್ ರಸ್ತೆಯ ಮೂಲಕ ದೀಪಾ ನರ್ಸಿಂಗ್ ಹೋಂ ಕಡೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಅಂದು ಮೂಡಿಗೆರೆ ಕಡೆಯಿಂದ ಬರುವ, ಹಾಸನ ಹಾಗೂ ಕಡೂರು ಕಡೆಗೆ ಹೋಗುವ ಎಲ್ಲಾ ರೀತಿಯ ಭಾರೀ ಸರಕು ವಾಹನಗಳು ಇಂಡಸ್ಟ್ರಿಯಲ್ ಏರಿಯಾ ಕಡೆಯಿಂದ ಸಾಗಬೇಕು. ಅದೇ ರೀತಿ ಕಡೂರು ಕಡೆಯಿಂದ ಬರುವ ಮೂಡಿಗೆರೆ ಹಾಗೂ ಹಾಸನ ಕಡೆಗೆ ಹೋಗುವ ಎಲ್ಲಾ ಭಾರಿ ಸರಕು ವಾಹನಗಳು ಬೈಪಾಸ್ ರಸ್ತೆ ಮೂಲಕ ಪೈ ಸರ್ಕಲ್‌ನಿಂದ ಹಿರೇಮಗಳೂರು ಮತ್ತು ಹಿರೇಮಗಳೂರು ಸೇತುವೆ ಮೂಲಕ ಇಂಡಸ್ಟ್ರಿಯಲ್ ಏರಿಯಾ ಕಡೆಗೆ ಹೋಗಬೇಕು ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Parking and traffic ban on Anasuya Jayanti-Proceeding Day

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...