ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನ ಕುರ್ಚಿ ಕಿತ್ತಾಟ ನಡೆಯುತ್ತಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಿಲ್ಲ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುರ್ಚಿ ಕೊಡಿ ಕುರ್ಚಿ ಕೊಡಿ ಎಂದು ಹಲವು ಪಟ್ಟುಗಳನ್ನು ಬಿಗಿಗೊಳಿಸುತ್ತಿದ್ದಾರೆ.ಇದರ ಮಧ್ಯೆ ಹಲವರು ಮಂತ್ರಿಗಳಾಗಲು ಹರ ಸಾಹಸ ಪಡುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದಾರೆ.ಪ್ರಥಮ ಬಾರಿಗೆ ಹೆಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ ಆಯ್ಕೆಯಾಗಿದ್ದಾರೆ.ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸತತ ಎರಡನೇ ಬಾರಿ ಶಾಸಕರಾಗಿದ್ದು ತರೀಕೆರೆ ಶಾಸಕ ಶ್ರೀನಿವಾಸ್ ಕೂಡಾ ಎರಡು ಬಾರಿ ಶಾಸಕರಾಗಿದ್ದಾರೆ.ಇಬ್ಬರು ಮಂತ್ರಿ ಆಗಬೇಕು ಎಂದು ಕುರ್ಚಿ ಮೇಲೆ ಟವಲ್ ಇಟ್ಟಿದ್ದಾರೆ.
ರಾಜೇಗೌಡರು ಡಿ.ಕೆ.ಜೊತೆಗೆ ಗುರ್ತಿಸಿ ಕೊಂಡರೆ ಶ್ರೀನಿವಾಸ್ ಸಿದ್ದರಾಮಯ್ಯರ ಗುಂಪಿನಲ್ಲಿ ಟಳಾಯಿಸುತ್ತಿದ್ದಾರೆ. ರಾಜೇಗೌಡರು ಒಕ್ಕಲಿಗರ ಕೋಟಾದಲ್ಲಿ ಸಚಿವರಾಗುವ ಪ್ರಯತ್ನಕ್ಕೆ ತುಂಬಾ ಕಷ್ಟ ಪಡ ಬೇಕಾಗಿದೆ.ಏಕೆಂದರೆ ಒಕ್ಕಲಿಗರಲ್ಲಿ 6 ರಿಂದ 7 ಜನ ಮಂತ್ರಿಗಳಾಗಲು ಘಟಾನುಘಟಿಗಳಿದ್ದಾರೆ.ಡಿ.ಕೆ.ಶಿವಕುಮಾರ್ , ಮತ್ತು ರಾಮಲಿಂಗ ರೆಡ್ಡಿ ಹಾಲಿ ಮಂತ್ರಿಗಳು ಇವರು ಸ್ಥಾನ ಗಟ್ಟಿ. ಮಾಗಡಿ ಬಾಲಕೃಷ್ಣ, ಕೋಲಾರದ ನಂಜೇಗೌಡ ಮತ್ತು ನಾರಯಣ ಸ್ವಾಮಿ ಮಂತ್ರಿಗಳಾಗಲು ಪೈಪೋಟಿ ನಡೆಸಿದ್ದಾರೆ. ಜೊತೆಗೆ ನಾಲ್ಕು ಬಾರಿ ಗೆದ್ದು ಸೀನಿಯರ್ ಇದ್ದಾರೆ.ಅರಸೀಕೆರೆ ಶಿವಲಿಂಗೇಗೌಡ ,ಶಿರಾದ ಡಿ.ಟಿ.ಜಯಕುಮಾರ್ ಮತ್ತು ಶರತ್ ಬಚ್ಚೇಗೌಡರನ್ನು ಮೀರಿ ಮಂತ್ರಿಯಾಗುವುದು ಕಷ್ಟ, ಕಷ್ಟ. ಹೀಗಾಗಿ ರಾಜೇಗೌಡರ ಪ್ರಯತ್ನ ತೀರಾ ಸುಲುಭವಾಗಿಲ್ಲಾ.
ತರೀಕೆರೆ ಶಾಸಕ ಶ್ರೀನಿವಾಸ್ ಕೂಡ ಮಂತ್ರಿಯಾಗಲು ಪ್ರಯತ್ನ ನಡೆಸಿದ್ದಾರೆ.2013 ರಲ್ಲಿ ಗೆದ್ದು 2018 ರಲ್ಲಿ ಸೋತಿದ್ದವರು 2023 ರಲ್ಲಿ ಮತ್ತೆ ಶಾಸಕರಾಗಿ ಮಂತ್ರಿ ಸ್ಥಾನಕ್ಕೆ ಆಸೆ ಪಡುವುದು ಸಹಜ .ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆದರೆ ಬೈರತಿ ಸುರೇಶ್ ಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.ಸಿದ್ದರಾಮಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮಗ ಯತೀಂದ್ರ ಮಂತ್ರಿ ಆಗುವುದು ಖಚಿತ. ಹೊಸದುರ್ಗದ ಗೋವಿಂದಪ್ಪ ಐದು ಬಾರಿ ಶಾಸಕರಾಗಿದ್ದರು ಮಂತ್ರಿಯಾಗಿಲ್ಲ ಹಿರಿತನದ ಅಧಾರದ ಮೇಲೆ ಗೋವಿಂದಪ್ಪ ಮಂತ್ರಿ ಸ್ಥಾನ ಸಿಗಬೇಕು. ರಾಜೇಗೌಡ ಮತ್ತು ಶ್ರೀನಿವಾಸ್ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ನಗೆಯಾಡುತ್ತಿದ್ದಾರೆ.
ಇಪ್ಪತ್ತೈದು ವರ್ಷಗಳಿಂದ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬೇರೆ ಜಿಲ್ಲೆಯವರು ಬಂದ ಪುಟ್ಟ, ಹೋದಾ ಪುಟ್ಟ ಎನ್ನುವಂತೆ ಬಂದು ಹೋಗುತ್ತಿದ್ದಾರೆ.ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿಲ್ಲದೆ ಸಭೆ,ಸಮಾರಂಭ ಮೀಟಿಂಗ್ ಇಟಿಂಗ್ ಮುಗಿಸಿ ಹೋಗುವುದರಿಂದ ಅಧಿಕಾರಿಗಳಿಗೆ ಹಬ್ಬವಾಗಿದೆ.ಇದರಿಂದ ಜಿಲ್ಲೆಯವರು ಮಂತ್ರಿಗಳಾದರೆ ಒಳ್ಳೆಯದು ಆದರೆ ಜಾತಿ ಲೆಕ್ಕಾಚಾರದಲ್ಲಿ ಮಂತ್ರಿಗಳನ್ನು ಮಾಡುವುದರಿಂದ ಚಿಕ್ಕಮಗಳೂರು ಜಿಲ್ಲೆಯವರು ಮಂತ್ರಿಗಳಾಗಲು ಹಗಲು ಕನಸು ಕಾಣುತ್ತಾ ಜುಬರಿಸ ಬೇಕಾಗಿದೆ.
Like a minister a minister – a daydreaming legislator?
Leave a comment