Home Latest News ರಸ್ತೆ ಗುಂಡಿಗೆ ಪೂಜೆ ಸಲ್ಲಿಸಿದ ವಾಹನ ಸವಾರರು : ನಗರಸಭೆ ವಿರುದ್ಧ ಆಕ್ರೋಶ
Latest News

ರಸ್ತೆ ಗುಂಡಿಗೆ ಪೂಜೆ ಸಲ್ಲಿಸಿದ ವಾಹನ ಸವಾರರು : ನಗರಸಭೆ ವಿರುದ್ಧ ಆಕ್ರೋಶ

Share
Share

ಚಿಕ್ಕಮಗಳೂರು :

ಮಳೆ ನಿಂತು ಎಷ್ಟೋ ದಿನಗಳು ಕಳೆದರೂ ಚಿಕ್ಕಮಗಳೂರು ನಗರದ ಗುಂಡಿಮಯ ರಸ್ತೆಗಳಿಗೆ ಇನ್ನೂ ಮುಚ್ಚುವ ಭಾಗ್ಯ ದೊರೆತಿಲ್ಲ, ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದ್ದರೂ ನಗರಸಭೆ ಮಾತ್ರ ಎಚ್ಚೆತ್ತುಕೊಂಡಿಲ್ಲ, ರೋಸಿ ಹೋದ ಸಾರ್ವಜನಿಕರು ರಸ್ತೆಯಲ್ಲಿನ ಗುಂಡಿಗೆ ಪೂಜೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಹೌದು ರಸ್ತೆಯಲ್ಲಿನ ಗುಂಡಿಗೆ ಪೂಜೆ ಮಾಡಿರುವ ಘಟನೆ ಇದು ವಿಪರೀತ ಮಳೆಯಿಂದ ಚಿಕ್ಕಮಗಳೂರು ನಗರ ಗುಂಡಿ ಬಿದ್ದು ಹೋಗಿತ್ತು ಇದೀಗ ವಾಹನ ಸವಾರರ ತಾಳ್ಮೆಯ ಕಟ್ಟೆ ಹೊಡೆದಿದ್ದು ಮೂರು ದಿನದಲ್ಲಿ ಗುಂಡಿ ಮುಚ್ಚದಿದ್ರೆ ಹಾಲು ತುಪ್ಪ ಬಿಡುವ ಎಚ್ಚರಿಕೆಯನ್ನು ನಗರಸಭೆಗೆ ಕೊಟ್ಟಿದ್ದಾರೆ.

ಪಲಾವ್, ವಡೆ, ನಿಂಬೆಹಣ್ಣು ಹೂವು, ಬ್ಯಾರಿಕೇಡ್ ಇಟ್ಟು ಪೂಜೆ ಸಲ್ಲಿಸಿ ಪ್ರತಿಭನಾರ್ಥಕವಾಗಿ ಸ್ಥಳದಲ್ಲಿ ಘೋಷಣೆ ಕೂಗಿದ್ದಾರೆ.
ಹಲವು ದಿನಗಳಿಂದ ನಗರದ ಕೆಲ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರು ಯಾರು ಕೇಳುವವರಿಲ್ಲದಂತಾಗಿದೆ.
ಹಲವು ಬಾರಿ ಮನವಿ ಮಾಡಿದ್ರು ಇಲ್ಲಿನ ನಗರಸಭೆ ಮಾತ್ರ ಸ್ಪಂದಿಸಿಲ್ಲ

  1. ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಕಳೆದ ರಾತ್ರಿ ಗುಂಡಿ ಪೂಜೆ ನಡೆದಿದೆ. ನಗರಸಭೆ ಯುಜಿಡಿ ಕೆಲಸಕ್ಕೆಂದು ಈ ಮೊದಲು ಕಾಮಗಾರಿಗೆ ಗುಂಡಿ ತೆಗೆಯಲಾಗಿತ್ತು ನಂತರ ಆ ಗುಂಡಿ ಮುಚ್ಚಿದ್ದರೂ ಮತ್ತೆ ಗುಂಡಿಯಾಗಿದ್ದ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಗುಂಡಿಯಿಂದ ಹಲವಾರು ಬೈಕ್ ಗಳು ಅಪಘಾತ ವಾಗಿ ನೂರಾರು ಜನರಿಗೆ ಗಾಯಗಳಾಗಿವೆ.‌ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು ಸ್ಪಂದಿಸದ ಹಿನ್ನೆಲೆ ಕಳೆದ ರಾತ್ರಿ
    ರಸ್ತೆ ಗುಂಡಿಗೆ ಬ್ಯಾರಿಕೇಡ್ ಇಟ್ಟು ಪೂಜೆ ಸಲ್ಲಿಸಲಾಗಿದೆ. ಚಿಕ್ಕಮಗಳೂರು ನಗರದ ಹತ್ತಾರು ರಸ್ತೆಗಳು ಇದೇ ರೀತಿ ಗುಂಡಿಗಳಿಂದ ಕೂಡಿವೆ.
Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...