Home ವಯೋನಿವೃತ್ತಿ ಹೊಂದಿದ ಶ್ವಾನಕ್ಕೆ ಹೃದಯಸ್ಪರ್ಶಿ ಬೀಳ್ಕೊಡುಗೆ
Home

ವಯೋನಿವೃತ್ತಿ ಹೊಂದಿದ ಶ್ವಾನಕ್ಕೆ ಹೃದಯಸ್ಪರ್ಶಿ ಬೀಳ್ಕೊಡುಗೆ

Share
Share

ಚಿಕ್ಕಮಗಳೂರು : ಪೊಲೀಸ್ ಇಲಾಖೆಯಲ್ಲಿ ಖಾಕಿ ಧರಿಸಿದ ಮಾನವರಿಗೆ ಎಷ್ಟು ಗೌರವವಿದೆಯೋ ಅದೇ ರೀತಿ ಇಲಾಖೆಯ ಶ್ವಾನಗಳಿಗೂ ಅಷ್ಟೇ ಗೌರವವಿದೆ. ಅದರಲ್ಲೂ ನಿವೃತ್ತಿಯ ಬಗ್ಗೆಯೂ ಸಮಾನ ರೀತಿಯಲ್ಲಿ ಇಲಾಖೆ ನಡೆದುಕೊಳ್ಳುವುದು ವಿಶೇಷ ಇದಕ್ಕೆ ಸಾಕ್ಷಿ ಇತ್ತೀಚೆಗೆ ಚಿಕ್ಕಮಗಳೂರು ಡಾಗ್ ಸ್ಕ್ವಾಡ್ ನಲ್ಲಿ ಹತ್ತೂವರೆ ವರ್ಷ ಸೇವೆ ಸಲ್ಲಿಸಿದ ಪೃಥ್ವಿ ಎಂಬ ಶ್ವಾನಕ್ಕೆ ಇಲಾಖೆ ನೀಡಿದ ಹೃದಯ ಸ್ಪರ್ಶಿ ಬೀಳ್ಕೊಡುಗೆ

ಪೃಥ್ವಿ ಹುಟ್ಟಿದ್ದು ದಿ:02/01/2014 ರಂದು ಇಲಾಖೆಗೆ ಸೇರಿದ್ದು ದಿ:04/03/2014 ರಲ್ಲಿ ಪೊಲೀಸ್ ಶ್ವಾನದಳಕ್ಕೆ “ಸ್ಪೋಟಕ ಪತ್ತೆ” ಶ್ವಾನವಾಗಿ ಸೇರ್ಪಡೆಯಾಗಿದ್ದು, ಶ್ವಾನದ ಹ್ಯಾಂಡ್ಲರ್‌ಗಳಾಗಿದ್ದವರು ದಿನೇಶ.ವಿ. ಮತ್ತು ಲೋಕೇಶಪ್ಪ. ಇದರ ಟ್ರೈನಿಂಗ್ ಸಿ.ಎ.ಆರ್. ದಕ್ಷಿಣ, ಆಡುಗೋಡಿ, ಬೆಂಗಳೂರಿನಲ್ಲಿರುವ ಶ್ವಾನದಳ ತರಬೇತಿ ಕೇಂದ್ರದಲ್ಲಿ ನಡೆದಿತ್ತು, ಪೃಥ್ವಿ ಒಟ್ಟು ತನ್ನ 10 ವರ್ಷ 07 ತಿಂಗಳ ಸೇವಾವಧಿಯಲ್ಲಿ ರಾಜ್ಯದ ವಿವಿಧ ಬಂದೋಬಸ್ತ್ ಗಳಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸಿ ಉನ್ನತ ಬಂದೋಬಸ್ತ್ ಗಳಲ್ಲಿ ವಿ.ಐ.ಪಿ. ಮತ್ತು ವಿ.ವಿ.ಐ.ಪಿ. ಭದ್ರತೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಪೊಲೀಸ್ ಇಲಾಖೆಗೆ ಸಹಕರಿಸಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯು ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ಹಾಗೂ ಪ್ರವಾಸಿ ತಾಣವಾಗಿದ್ದು, ಅದರಂತೆ ನಕ್ಸಲ್ ಕರ್ತವ್ಯಗಳಲ್ಲಿ ಕೂಡಾ ಭಾಗವಹಿಸಿರುತ್ತದೆ. ಪೊಲೀಸ್ ಇಲಾಖೆ ವಾರ್ಷಿಕ ನಡೆಸಲಾಗುವ ಪೊಲೀಸ್ ಡ್ಯೂಟಿ ಮೀಟ್‌ನ 2019 ನೇ ಸಾಲಿನಲ್ಲಿ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಕಂಚಿನ ಪದಕ ಪಡೆದು, ಜಿಲ್ಲೆಯ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಕ್ಯಾಂಪ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಶ್ವಾನಗಳ ಕರ್ತವ್ಯದ ಬಗ್ಗೆ ವಿವರಣೆ ಹಾಗೂ ಡಾಗ್ ಶೋ ಗಳನ್ನು ನೀಡುವಲ್ಲಿ ಪಾತ್ರ ವಹಿಸಿತ್ತು,
ಇದೀಗ ಪೃಥ್ವಿ ವಯೋನಿವೃತ್ತಿ ಹೊಂದಿದ್ದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಕ್ರಮ್ ಅಮಟೆ ಹಾಗೂ ಡಿಎಆರ್ ಸಿಬ್ಬಂದಿ ಬೀಳ್ಕೊಡುಗೆ ಕೊಟ್ಟರು.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...