Home ವರ್ಷ ಪೂರೈಸಿದ “ನ್ಯೂಸ್ ಕಿಂಗ್ ” ಮಾಹಿತಿ ಕಣಜ
HomechikamagalurLatest Newsnamma chikmagalur

ವರ್ಷ ಪೂರೈಸಿದ “ನ್ಯೂಸ್ ಕಿಂಗ್ ” ಮಾಹಿತಿ ಕಣಜ

Share
Share

ಚಿಕ್ಕಮಗಳೂರು: ಇಂದಿಗೆ “ನ್ಯೂಸ್ ಕಿಂಗ್ ” ಪ್ರಾರಂಭಿಸಿ ವರ್ಷವಾಯಿತು.ಲಕ್ಷಾಂತರ ಓದುಗರು ನಮ್ಮ ಜೊತೆಗೆ ಹೆಜ್ಜೆ ಹಾಕಿರುವುದು,ಬೆಂಬಲಿಸಿರುವುದು ಸಾವಿರಾರು ಜನ ಚಂದಾದಾರರು ನಿರಂತರವಾಗಿ ಹಾರೈಸಿದ್ದಕ್ಕೆ ಧನ್ಯವಾದಗಳು.

1986 ರಿಂದ ಪತ್ರಿಕಾ ಕ್ಷೇತ್ರದಲ್ಲಿ ಇರುವುದು ತಮಗೆ ತಿಳಿದಿದೆ.ಮುಂಗಾರು,ಸಂಯುಕ್ತ ಕರ್ನಾಟಕ, ಮಲೆನಾಡು ಸಂಗತಿ ಜೊತೆಗೆ ಗೆಳೆಯ ಪತ್ರಿಕೆ ವರದಿಗಾರನಾಗಿ ನಂತರ ಸಂಪಾದಕರಾಗಿ ” ಸುದ್ದಿ ಅಕ್ಷಯ” ಹಾಗೂ ” ಜಿಲ್ಲಾ ಸಮಾಚಾರ ” ಪತ್ರಿಕೆ ಪ್ರಾರಂಭಿಸಿ ನಂತರ ಪತ್ರಕರ್ತರ ಸಂಘಟನೆಯಲ್ಲಿ ಪತ್ರಕರ್ತರಿಗೆ ಹಲವು ಅನುಕೂಲ ಮಾಡಿರುವೆ ಎಂದು ಹೆಮ್ಮೆಯಿಂದ ಹೇಳುವೆ.

ಪತ್ರಕರ್ತರು ಮತ್ತು ಪತ್ರಿಕೆಗಳ ಬಗ್ಗೆ ಜನಸಾಮಾನ್ಯರು ನಂಬಿಕೆ ಕಳೆದುಕೊಂಡಿರುವುದು ಮತ್ತು ಕೊರಾನ ಸಮಯದಲ್ಲಿ ಪತ್ರಿಕೆಯನ್ನು ನಿಲ್ಲಿಸಿ ಸುಮ್ಮನಿದ್ದ ನನಗೆ ಹಲವು ಮಿತ್ರರರು ನೀವು ಏನಾದರೂ ಸರಿ ಬರವಣಿಗೆ ನಿಲ್ಲಿಸಬಾರದು ಎಂಬ ಸಲಹೆ ನೀಡಿದ್ದರಿಂದ “ನ್ಯೂಸ್ ಕಿಂಗ್” ವೆಬ್ ಸೈಟ್ ಪ್ರಾರಂಭವಾಯಿತು. ಇಂದಿಗೆ ಒಂದು ವರ್ಷದ ಕೂಸು ಇದಕ್ಕೆ ಸಾವಿರಾರು ಜನ ಸಬ್ ಸ್ಕೈ ಬರ್ ( ಚಂದಾದಾರರು) ನಿರಂತರವಾಗಿ ಕೈ ಜೋಡಿಸಿದ್ದನ್ನು ಎಂದು ಮರೆಯುವಂತಿಲ್ಲ. ಹಲವರು ಬಂದು ಹೋಗಿದ್ದಾರೆ ಎಲ್ಲರಿಗೂ ಹೃದಯ ಪೂರ್ವಕ ಸದಾ ಅಭಿನಂದನೆಗಳು.
ನಾನು ಎಡವಿದ್ದಕ್ಕಿಂತ ನಾನು ನಂಬಿ ಬೆಳೆಸಿದವರು ಚೂರಿ ಇರಿದು ಗಾಯದ ಮೇಲೆ ಖಾರ ಹಾಕಿದವರ ಮಧ್ಯೆ ಮತ್ತೆ,ಮತ್ತೆ ಸೆಟೆದು ನಿಲ್ಲುವುದು ಅನಿವಾರ್ಯ.

ಜೆನ್ ಜೀ ಗಳ ಮಧ್ಯೆ ಅಧುನಿಕ ಆವಿಷ್ಕಾರ ನಿರಂತರವಾಗಿ ಇರುತ್ತದೆ.ಇದರ ಮಧ್ಯೆ ಜನರಿಗೆ ತ್ವರಿತವಾಗಿ ಸುದ್ದಿ, ಲೇಖನಗಳನ್ನು ಸರಣಿಯಾಗಿ ಕೊಡುತ್ತಿರುವ ಸಮಾಧಾನ ನಮಗಿಲ್ಲಾ.ಇನ್ನಷ್ಟು ಮತ್ತಷ್ಟು ಕುತೂಹಲ ಹುಟ್ಟಿಸುವ ಸುದ್ದಿಗಳನ್ನು ಕೊಡಬೇಕು ಕೊಡುತ್ತೇವೆ.ಇದಕ್ಕೆ ನಿರಂತರವಾಗಿ ನನ್ನ ಜೊತೆಗೆ ಇರುವವರನ್ನು ನಾನು ಮರೆಯಬಾರದು. ಹಲವಾರು ಸುದ್ದಿಗಳಿಗೆ ಮೆಚ್ಚಿಗೆ ಮತ್ತು ಟೀಕೆ ಬಂದಿವೆ.ಅವರವರ ಭಾವನೆ ನಮ್ಮ ಕೆಲಸ ನಿಷ್ಠೆಯಿಂದ ಮಾಡುತ್ತಿರುವ ನಮ್ಮ ಬಳಗದ ಎಲ್ಲರಿಗೂ ಅಭಿನಂದನೆಗಳು. ಜನಸಾಮಾನ್ಯರು ಕೂಡ ಸುದ್ದಿ ಕೊಡುವುದು ವಿಶೇಷ ಎನ್ನಿಸುತ್ತದೆ .

ಪತ್ರಿಕಾ ಕ್ಷೇತ್ರ ಉದ್ಯಮ ವಾಗಿದೆ ಇದರ ಪರಿಣಾಮ ವ್ಯಾಪಾರ ವಹಿವಾಟು ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪ ಸತ್ಯಕ್ಕೆ ಹತ್ತಿರವಿದೆ.ಇದರ ಮಧ್ಯೆ ಸಾವಿರಾರು ಜನ ನಮ್ಮ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ ಎಂಬುದಕ್ಕೆ ” ಹೊನ್ನ ಬಿತ್ತೇವು ಹೊಲಕೆಲ್ಲ” ಜಾನಪದ ಅಕರ ಗ್ರಂಥದ ಮೂರನೇ ಆವೃತ್ತಿಯ ಬಿಡುಗಡೆಗೆ ಸೇರಿದ ಜನರೇ ಸಾಕ್ಷಿ. ಪುಸ್ತಕ ಮಾರಾಟ ಕೂಡ ಚೆನ್ನಾಗಿದೆ.ಓದುಗರಿಗೆ ಕೊರತೆ ಇಲ್ಲ ನಮ್ಮ ಆಲೋಚನೆಗಳಿಗೆ ಕೊರತೆ ಇದೆ ಎನ್ನಿಸುತ್ತದೆ.

ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮಕ್ಕೆ ಅತ್ಯುತ್ತಮ ನಿಜ.ಒಂದು ಕಾಲದಲ್ಲಿ ಪ್ರವಾಸೋದ್ಯಮಕ್ಕೆ ನಮ್ಮ ಒತ್ತಾಯವು ಇತ್ತು ಆದರೆ ಪ್ರವಾಸದ ನೆಪದಲ್ಲಿ ಬಹಳ ಹಾನಿ ಆಗುತ್ತಿರುವ ಸುದ್ದಿಗಳು ಬರುತ್ತಿವೆ.ಜಿಲ್ಲೆಯ ತೋಟಗಳನ್ನು ಮತ್ತು ಭೂಮಿ ಖರೀದಿ ಮಾಡಿರುವುದು ನೋಡಿದರೆ ಅಸಹ್ಯ ಹುಟ್ಟುತ್ತಿದೆ.ಭ್ರಷ್ಟ ರಾಜಕಾರಣಿಗಳು, ನಿವೃತ್ತ ಅಧಿಕಾರಿಗಳು, ರಿಯಲ್ ಎಸ್ಟೇಟ್ ಮಾಫಿಯಾದವರು ಜೊತೆಗೆ ಡ್ರಗ್ಸ್ ಧಂದೆಯವರು,ಸೆಕ್ಸ್ ಮಾಫಿಯಾ ಎಂಟ್ರಿ ಕೊಟ್ಟಿರುವುದು ನಮ್ಮ ಜಿಲ್ಲೆ ನಮ್ಮ ಜನರಿಗೆ ಕಳಂಕ ಹಚ್ಚುತ್ತಿದ್ದಾರೆ ಇದನ್ನು ಅನಿವಾರ್ಯ ಮತ್ತು ಅಗತ್ಯವಾಗಿ ತಡೆಯಬೇಕಾಗಿದೆ.ಇಲ್ಲದಿದ್ದರೆ ಅನ್ಯರ ಪಾಲಾಗುವುದು ಖಚಿತ.ಇದಕ್ಕಾಗಿ ” ನ್ಯೂಸ್ ಕಿಂಗ್ “ಗೆ ಮಾಹಿತಿ ಕೊಟ್ಟರೆ ಜನರಿಗೆ ಸುದ್ದಿ ಮುಟ್ಟಿಸುವುದರ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ.

ಕಡು ಭ್ರಷ್ಟ ರಾಜಕಾರಣಿಗಳು ಜನಪ್ರತಿನಿಧಿಗಳಾದರೆ ಮನೆ ಮಂದಿಯಾಲ್ಲಾ ಎತ್ತುವಳಿ ಪ್ರಾರಂಭಿಸಿದ್ದಾರೆ.ಬ್ರಾಂಡಿ ಅಂಗಡಿಗಳಲ್ಲಿ ಮಾಮೂಲಿ ವಸೂಲಿಯಿಂದ ಹಿಡಿದು ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಇಂತಹವರ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು. ಇವರು ದಲ್ಲಾಳಿಗಳು ಎಂಬ ಅರಿವು ಮೂಡಿಸುವ ಜವಾಬ್ದಾರಿ ಕೂಡ ಇದೆ.

80 ರ ದಶಕದಲ್ಲಿ ರೈತ ಚಳುವಳಿ, ಕಾರ್ಮಿಕ ಚಳುವಳಿ, ದಲಿತ ಚಳುವಳಿಗಳು ಹೆಮ್ಮರವಾಗಿ ಬೆಳೆದು ಹಲವು ಸಮಸ್ಯೆಗಳನ್ನು ಪರಿಹರಿಸಿದ್ದು ಇದೆ.ಮತ್ತೆ ಇಂತಹ ಚಳುವಳಿ ಮತ್ತು ಮುಖಂಡರ ಅಗತ್ಯವಾಗಿದೆ. ಸಂಘಟನೆಗಳು ಕವಲು ಹೊಡೆದು ಚಳುವಳಿಗಳು ತೀವ್ರತೆ ಕಳೆದುಕೊಂಡಿವೆ.ಈಗ ರೈತರ ಶೋಷಿತರ ಸಮಸ್ಯೆ ಹೆಚ್ಚಾಗುತ್ತಿವೆ .ಅನ್ಯರಾಜ್ಯದವರು, ರಾಜಕಾರಣಿಗಳು,ರಿಯಲ್ ಎಸ್ಟೇಟ್ ಮಾಫಿಯಾ ಪ್ರಾಕೃತಿಕ ಜಿಲ್ಲೆಯನ್ನು ಕಬಳಿಸಲು ನಿರಂತರವಾಗಿ ಯೋಜನೆ ರೂಪಿಸಿವೆ ಇದಕ್ಕಾಗಿ ಚಳುವಳಿಗಳು ಹೆಚ್ಚಾಗ ಬೇಕಾಗಿದೆ.ಎಲ್ಲರೂ ಒಗ್ಗೂಡಿ ಹೋಗುವ ಅನಿವಾರ್ಯತೆ ಹೆಚ್ಚಾಗಿದೆ.

ಎಲ್ಲರಿಗೂ ಹಣತೆ ಹಬ್ಬದ ಶುಭಾಶಯಗಳು.

“News King” information hub completes one year

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧ ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ’ರಾಷ್ಟ್ರೀಯ ಲೋಕ್ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಗೌ.ಪ್ರಧಾನ ಜಿಲ್ಲಾ...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ ಸಂಚಾರ) ಬಂದ ಕಾರೊಂದು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ದುಡುಕುತನದಿಂದ ಡಿಕ್ಕಿ ಹೊಡೆದ ಪರಿಣಾಮ...

Related Articles

ಅಮೃತ್ 2.0 ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

ಚಿಕ್ಕಮಗಳೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಮೃತ್ 2.0 ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ...

ವಿಕಲಚೇತನ ವ್ಯಕ್ತಿಯ ₹8 ಲಕ್ಷ ಬ್ಯಾಂಕ್ ಸಾಲ ಕೇವಲ ₹15,000 ಕ್ಕೆ ಇತ್ಯರ್ಥ

ಚಿಕ್ಕಮಗಳೂರು:  ಇಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ನ್ಯಾಯಾಂಗದ ವಿಶೇಷ...

ಎಟಿಎಂ ಕಾರ್ಡ್ ಬದಲಿಸಿ ₹3.09 ಲಕ್ಷ ವಂಚನೆ

ಕಡೂರು: ಪಟ್ಟಣದ ಜೈನ್ ಟೆಂಪಲ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ಹಿಂಪಡೆಯಲು ಯತ್ನಿಸುತ್ತಿದ್ದ ವೇಳೆ...

ಕೆಪಿಟಿಸಿಎಲ್ ಸಿಎಸ್‌ಆರ್ ಅನುದಾನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಣ್ಣಾವಲಿಗೆ ನೆರವು

ಚಿಕ್ಕಮಗಳೂರು: ಸರ್ಕಾರದ ಅನುದಾನದ ಕೊರತೆ ನಡುವೆ ಕೆಪಿಟಿಸಿಎಲ್ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ) ಅನುದಾನ...