Home namma chikmagalur chikamagalur ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು
chikamagalurCrime NewsHomeLatest Newsnamma chikmagalur

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

Share
Share

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ ವಿಗ್ರಹಗಳಿಗೆ ಅಲಂಕರಿಸಲಾಗಿದ್ದ ಬೆಳ್ಳಿ ಆಭರಣಗಳನ್ನು ಕಳ್ಳರು ಕಳವು ಮಾಡಿದ್ದಾರೆ.

ಚೌಡೇಶ್ವರಿ ದೇವಿಗೆ ಅಳವಡಿಸಿದ್ದ ಸುಮಾರು 400 ಗ್ರಾಂ ತೂಕದ ನಾಲ್ಕು ಬೆಳ್ಳಿ ಛತ್ರಿಗಳು, ಈಶ್ವರ ದೇವರಿಗೆ ಅರ್ಪಿಸಲಾಗಿದ್ದ 400 ಗ್ರಾಂ ತೂಕದ ಎರಡು ಬೆಳ್ಳಿ ಕೊಳಗ ಹಾಗೂ 100 ಗ್ರಾಂ ತೂಕದ ಬೆಳ್ಳಿ ತ್ರಿಶೂಲ ಕಳುವಾಗಿದೆ. ಕಳುವಾದ ಆಭರಣಗಳ ಒಟ್ಟು ತೂಕ 900 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ₹70 ಸಾವಿರ ಎಂದು ತಿಳಿದುಬಂದಿದೆ.

ಎರಡೂ ದೇವಾಲಯಗಳ ಬಾಗಿಲಿನ ಚಿಲಕ ಮುರಿದು ಒಳನುಗ್ಗಿ ಕಳವು ಮಾಡಿರುವುದನ್ನು ಬುಧವಾರ ಬೆಳಿಗ್ಗೆ ಪೂಜೆಗೆ ತೆರಳಿದ ಚೌಡೇಶ್ವರಿ ದೇವಾಲಯದ ಅರ್ಚಕ ಎಸ್‌.ಕೆ. ನಾಗರಾಜು ಹಾಗೂ ಈಶ್ವರ ದೇವಾಲಯದ ಅರ್ಚಕ ನಾಗರಾಜು ಎಸ್.ಕೆ. ಅವರು ಗಮನಿಸಿದರು.

ಬಳಿಕ ದೇವಾಲಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಿವಣ್ಣ ಅವರಿಗೆ ಮಾಹಿತಿ ನೀಡಲಾಯಿತು. ಅವರ ನೀಡಿದ ದೂರಿನ ಮೇರೆಗೆ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Jewelry theft at Sri Eeshwara-Chowdeshwari temples

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....

ಪೋಕ್ಸೋ ಪ್ರಕರಣ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

ಚಿಕ್ಕಮಗಳೂರು: ಬಣಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಆರೋಪಿ ತಪ್ಪಿತಸ್ಥನೆಂದು ಸಾಬೀತಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ...