Home namma chikmagalur chikamagalur ಎಟಿಎಂ ಕಾರ್ಡ್ ಬದಲಿಸಿ ₹3.09 ಲಕ್ಷ ವಂಚನೆ
chikamagalurHomeLatest Newsnamma chikmagalur

ಎಟಿಎಂ ಕಾರ್ಡ್ ಬದಲಿಸಿ ₹3.09 ಲಕ್ಷ ವಂಚನೆ

Share
Share

ಕಡೂರು: ಪಟ್ಟಣದ ಜೈನ್ ಟೆಂಪಲ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ಹಿಂಪಡೆಯಲು ಯತ್ನಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಎಟಿಎಂ ಕಾರ್ಡ್ ಬದಲಿಸಿ, ಬಳಿಕ ಅದನ್ನು ದುರುಪಯೋಗಪಡಿಸಿಕೊಂಡು ₹3.09 ಲಕ್ಷ ವಂಚಿಸಿರುವ ಪ್ರಕರಣ ವರದಿಯಾಗಿದೆ.

ಚಿಕ್ಕಪಟ್ಟಣಗೆರೆ ಗ್ರಾಮದ ಸುನಂದಾ ಅವರು, ತಮ್ಮ ಪತಿಯ ಹೆಸರಿನಲ್ಲಿದ್ದ ಭೂಮಿಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ₹5 ಲಕ್ಷವನ್ನು ಕಡೂರು ಕೆನರಾ ಬ್ಯಾಂಕ್ ಖಾತೆಗೆ ಜಮಾಮಾಡಿದ್ದರು.
ಜೂನ್ ತಿಂಗಳಲ್ಲಿ ಪುತ್ರ ರಾಕೇಶ್ ಅವರು, ಕೆನರಾ ಬ್ಯಾಂಕ್ ಎಟಿಎಂನಲ್ಲಿ ಮೂರು ಬಾರಿ ಹಣ ಹಿಂಪಡೆಯಲು ಯತ್ನಿಸಿದರೂ ಹಣ ಬರಲಿಲ್ಲ.

ಈ ವೇಳೆ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ನೆರವಾಗುವುದಾಗಿ ಹೇಳಿ ಎಟಿಎಂ ಕಾರ್ಡ್ ಪಡೆದು ಖಾತೆಯಲ್ಲಿನ ಬಾಕಿ ಮೊತ್ತ ಪರಿಶೀಲಿಸಿದ್ದಾನೆ. ಬಳಿಕ ‘ಹಣ ಬರುತ್ತಿಲ್ಲ’ ಎಂದು ಹೇಳಿ ಕಾರ್ಡ್ ಹಿಂತಿರುಗಿಸಿ ಸ್ಥಳದಿಂದ ತೆರಳಿದ್ದಾನೆ.

ಅದೇ ತಿಂಗಳಲ್ಲಿ ಸುನಂದಾ ಅವರು ಬ್ಯಾಂಕ್‌ನಿಂದ ₹2 ಲಕ್ಷ ನಗದು ಪಡೆದು ಸಂಬಂಧಿಕರೊಬ್ಬರಿಗೆ ಸಾಲ ತೀರಿಸಿದ್ದರು. ಬಳಿಕ, ಈ ತಿಂಗಳ 1ರಂದು ಮತ್ತೆ ಹಣ ಹಿಂಪಡೆಯಲು ಬ್ಯಾಂಕ್‌ಗೆ ತೆರಳಿದಾಗ ಖಾತೆಯಲ್ಲಿ ಹಣ ಇಲ್ಲ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.

ಎಟಿಎಂ ಕಾರ್ಡ್ ಪರಿಶೀಲಿಸಿ ದಾಗ ಅದು ಸುನಂದಾ ಅವರದ್ದಲ್ಲ ಎಂಬುದು ಗೊತ್ತಾಗಿದೆ. ಪಾಸ್‌ಬುಕ್ ಪರಿಶೀಲಿಸಿದಾಗ ಖಾತೆಯಿಂದ ₹3.09 ಲಕ್ಷ ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ.

ರಾಕೇಶ್ ಎಟಿಎಂನಲ್ಲಿ ಹಣ ಹಿಂಪಡೆಯಲು ಯತ್ನಿಸಿದ ವೇಳೆ ನೆರವಾಗುವ ನೆಪದಲ್ಲಿ ಬಂದಿದ್ದ ಅನಾಮಧೇಯ ವ್ಯಕ್ತಿ ಪಿನ್ ಸಂಖ್ಯೆ ಗಮನಿಸಿ, ಕಾರ್ಡ್ ಬದಲಿಸಿ ವಾಪಸ್ ನೀಡಿದ್ದಾನೆ. ಬಳಿಕ, ಮೂಲ ಕಾರ್ಡ್ ಬಳಸಿ ತಲಾ ₹10 ಸಾವಿರದಂತೆ 30 ಬಾರಿ ಹಾಗೂ ಒಮ್ಮೆ ₹9 ಸಾವಿರ ಸೇರಿ ಒಟ್ಟು ₹3.09 ಲಕ್ಷ ಹಣ ಹಿಂಪಡೆದು ವಂಚನೆ ಎಸಗಿದ್ದಾನೆ ಎಂದು ರಾಕೇಶ್ ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

₹3.09 lakh fraud by changing ATM card

Share

Leave a comment

Leave a Reply

Your email address will not be published. Required fields are marked *

Don't Miss

ಕ್ಷೌರಿಕ ಮೂಲ ವೃತ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡಿ

ಚಿಕ್ಕಮಗಳೂರು:  ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಅನೇಕ ಬಲಾಡ್ಯ ಕಂಪನಿಗಳು ಮು ಂದಾಗಿವೆ. ಈ ಮೂಲ ವೃತ್ತಿದಾರರು ಕುಲಕಸುಬನ್ನು ತ್ಯಜಿಸದೇ, ಉತ್ತೇಜಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ಬಳ ಸಿ ಕ್ಷೌರಿಕ ಉದ್ಯಮವನ್ನು ವೃದ್ದಿಸಬೇಕು ಎಂದು...

ಅನುಸೂಚಿತ ಜಾತಿ-ಬುಡಕಟ್ಟುಗಳ ಆಯೋಗದ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ

ಚಿಕ್ಕಮಗಳೂರು : ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ರಾಜ್ಯ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ...

Related Articles

ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾರಾಮಾರಿ

ಚಿಕ್ಕಮಗಳೂರು: ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯೊಂದು ನೋಡನೋಡುತ್ತಿದ್ದಂತೆ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟ...

ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಪ್ರತಿಷ್ಠಾಪನೆ ಉತ್ಸವಗಳು ನಡೆದವು. ಬೋಳರಾಮೇಶ್ವರ...

ಖಾಯಂ ಹಕ್ಕುಪತ್ರಕ್ಕೆ ವಿವೇಕಾನಂದ ಯುವಕ ಸಂಘ ಆಗ್ರಹ

ಚಿಕ್ಕಮಗಳೂರು: ನಗರದ 18ನೇ ವಾರ್ಡ್ ವ್ಯಾಪ್ತಿಯ ಕಲ್ಲೊಡ್ಡಿ-ಶಾಂತಿನಗರ ಪ್ರದೇಶ ಗ್ರಾಮವಾಗಿ ನಿರ್ಮಾಣಗೊಂಡು 37 ವರ್ಷ ಕಳೆದರೂ...

ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಸಲು ಕಿಸಾನ್ ಸಂಘ ಆಗ್ರಹ

ಚಿಕ್ಕಮಗಳೂರು: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ಬರಪೀಡಿತ ತಾಲೂಕುಗಳ ಘೋಷಣೆಯನ್ನು ಹಂತ-ಹಂತವಾಗಿ ಕೈಗೊಳ್ಳುತ್ತಿರುವ ಸರ್ಕಾರವು...