Home namma chikmagalur chikamagalur ಅಕ್ರಮ ನುಸುಳುಕೋರರ ಮತಪಟ್ಟಿಗೆ ದಾಖಲಿಸದಂತೆ ಕ್ರಮವಹಿಸಿ
chikamagalurHomeLatest Newsnamma chikmagalur

ಅಕ್ರಮ ನುಸುಳುಕೋರರ ಮತಪಟ್ಟಿಗೆ ದಾಖಲಿಸದಂತೆ ಕ್ರಮವಹಿಸಿ

Share
Share

ಚಿಕ್ಕಮಗಳೂರು: ಎಸ್‌ಐಆರ್ ಸಂಬಂಧ ಬಿಎಲ್‌ಒ೨ಗಳು ಪಕ್ಷದ ಮತದಾರರನ್ನು ಪಟ್ಟಿ ಯಿಂದ ಕೈಜಾರದಂತೆ ಗಮನಹರಿಸುವ ಜೊತೆಗೆ ಅಕ್ರಮ ನುಸುಳುಕೋರರನ್ನು ಮತಪಟ್ಟಿಗೆ ಸೇರ್ಪಡೆಗೊ ಳಿಸದಂತೆ ಸಮಗ್ರವಾಗಿ ನಿಗಾವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಹೇಳಿದರು.

ನಗರದ ಪಾಂಚಜನ್ಯ ಕಚೇರಿಯಲ್ಲಿ ಶನಿವಾರ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ಧ ಜಿಲ್ಲಾ ಮ ಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರ್ಪಡೆಗೊಳಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಶಾಶ್ವತ ವಾಸ ಪ್ರಮಾಣ ಪತ್ರವನ್ನು ಕೊಡುವ ಮೂಲಕ ರಾಷ್ಟ್ರದ್ರೋಹ ಘಾತುಕದ ಕೆಲಸಕ್ಕೆ ಮುಂದಾಗುತ್ತಿದೆ. ಪಿಡಿಓ, ನಗರಸಭಾ ಆಯುಕ್ತ ಅಧಿಕಾರಿಗಳನ್ನು ಬಳಸಿಕೊಂಡು ವಾಸವಿಲ್ಲದಿದ್ದರೂ ಪ್ರಮಾಣ ಪತ್ರ ವಿತರಣೆ ಗೆ ಮುಂದಾಗಿ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ ಎಂದು ದೂರಿದರು.

ದೇಶದ ಸಕ್ರಮ ಮತದಾರರನ್ನು ಮತಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಮುತುವರ್ಜಿ ವಹಿಸಬೇ ಕು. ನಮ್ಮದ್ದಲ್ಲದ ಅಕ್ರಮ ಮತದಾರರ ಸೇರ್ಪಡೆಗೆ ಪಕ್ಷದ ಬಿಎಲ್‌ಓ೨ಗಳು ಅವಕಾಶ ಕಲ್ಪಿಸದಂತೆ ಹೆಚ್ಚು ಕಾಳಜಿ ವಹಿಸುವುದೇ ಸೂತ್ರವಾಗಿದ್ದು, ನಮ್ಮದೇ ಮತದಾರರ ಫಾರಂ ಭರ್ತಿ ಮಾಡಿಸುವ ಮೂಲಕ ದೇಶ ದ ಏಕತೆಗೆ ಶ್ರಮಿಸಬೇಕಿದೆ ಎಂದರು.

ಆಗಸ್ಟ್ ೫ ಬಳಿಕ ಕರಡು ಮತದಾರರ ಪಟ್ಟಿ ಲಭಿಸಿದಾಗ ಅಕ್ರಮ ಮತದಾರರು ಸೇರ್ಪಡೆ ಗೊಂಡಿದ್ದಲ್ಲಿ ಬಿಎಲ್‌ಎ೨, ಬಿಎಲ್‌ಎ೧ ಮೂಲಕ ಪ್ರಕರಣ ದಾಖಲಿಸಿ ಸ್ವೀಕೃತಿ ಪಡೆದುಕೊಂಡಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲೇಬೇಕು. ಹೀಗಾಗಿ ನಮ್ಮದಾಗಿರುವ ಸಕ್ರಮ ಮತದಾರರ ಫಾರಂ ಭರ್ತಿ ಮಾಡಿ ಕೊಡುವ ಕೆಲಸವ ನ್ನು ಪಕ್ಷದ ಬಿಎಲ್‌ಎ೨ ಗಳು ಮಾಡಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣಕ್ಕೆ ಮುಸ್ಲೀಂ ಜನಾಂಗವನ್ನು ಓಟ್‌ಬ್ಯಾಂಕ್‌ಗೆ ಕ್ಷೇತ್ರದ ಲ್ಲಿ ಭಾವಿಸಿರುವ ಹಿನ್ನೆಲೆಯಿದೆ. ಬೇರೆ ಬೇರೆ ರಾಜ್ಯದಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳಿದ್ದರೂ ಅಧಿಕಾರಕೋಸ್ಕ ರ ಕಾಂಗ್ರೆಸ್ ಬೆಂಬಲಿಸಿದೆಯೇ ಹೊರತು, ನೈತಿಕವಾಗಿ ಬೆಂಬಲಿಸುವ ಸನ್ನಿವೇಶವೇ ಇಲ್ಲವಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ನಕಲಿ ದಾಖಲೆ ಸೃಷ್ಟಿಸುವ ಮೂಲಕ ದೇಶದ ಪ್ರಜೆಗಳನ್ನಾಗಿಸುವ ಹು ನ್ನಾರ ನಡೆಸಲಾಗುತ್ತಿದೆ. ಕೆಲವು ಅಧಿಕಾರಿಗಳ ಮೂಲಕ ದಾಖಲೆಯಿಲ್ಲದ ವ್ಯಕ್ತಿಗಳಿಗೆ, ದಾಖಲೆಗಳನ್ನು ಒದ ಗಿಸುವ ಮೂಲಕ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದು ಇದು ಭವಿಷ್ಯದಲ್ಲಿ ಬಹುದೊಡ್ಡ ಅಪಾಯಕಾರಿಯಾಗಿದೆ ಎಂದರು.

ಮಾಜಿ ಶಾಸಕ ಹರತಾಳ್ ಹಾಲಪ್ಪ ಮಾತನಾಡಿ ಪಕ್ಷದ ಸಿದ್ದಾಂತ, ಶಿಸ್ತು, ಸಂಘಟನಾ ಬಲ ಮತ್ತು ಕಾರ್ಯಖರ್ತರ ಸಮರ್ಪಣೆಯೇ ಬಿಜೆಪಿಯ ಯಶಸ್ಸಿನ ಮೂಲ ಎಂದು ತಿಳಿಸಿದ ಅವರು ಮುಂಬರುವ ರಾಜಕೀಯ ಸವಾಲುಗಳನ್ನು ಸಂಘಟನಾತ್ಮಕ ಬಲದಿಂದ ಎದುರಿಸಲು ಎಲ್ಲಾರು ಸಜ್ಜಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಆರ್.ದೇವರಾಜ್‌ಶೆಟ್ಟಿ ಜಿಲ್ಲಾವಾರು ಬಿಜೆಪಿ ನಗ ರ, ಮಂಡಲ, ಶಕ್ತಿಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಕನಿಷ್ಟ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳನ್ನು ಜಿಲ್ಲಾ ಕಮಿಟಿಗೆ ಮಾಹಿತಿ ನೀಡಬೇಕು. ವಿಶೇಷವಾಗಿ ಕೇಂದ್ರ ಸರ್ಕಾ ರದ ಯೋಜನೆ, ತಾಯಿ ಹೆಸರಿನಲ್ಲಿ ಒಂದು ಸಸಿನೆಡುವ ಕಾರ್ಯಕ್ರಮಕ್ಕೆ ಒತ್ತು ನೀಡಬೇಕಿದೆ ಎಂದರು.

ಇದೇ ವೇಳೆ ಸಭೆಯಲ್ಲಿ ಪಕ್ಷ ಸಂಘಟನೆ ಬಲಿಷ್ಟ, ಬೂತ್ ಮಟ್ಟದ ಕಾರ್ಯಚಟುವಟಿಕೆ ತೀವ್ರ, ಸದಸ್ಯ ತ್ವ ಅಭಿಆನ, ಜನಸಂಪರ್ಕ ವಿಸ್ತರಣೆ, ಬಿಜೆಪಿ ಅಧಿಕಾರದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಬಿಜೆ ಪಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಬೆಳವಾಡಿ, ಡಾ.ನರೇಂದ್ರ, ಪುಣ್ಯಪಾಲ್, ನಗರಸೆ ಸದಸ್ಯೆ ಕವಿ ತಾ ಶೇಖರ್ ಮುಂತಾದವರು ಉಪಸ್ಥಿತರಿದ್ದರು.

Take steps to prevent illegal infiltrators from being included in the voter list.

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದಲೇ 12 ಸಾವಿರ ಕೋಟಿ ರೂ. ವೆಚ್ಚ

ಚಿಕ್ಕಮಗಳೂರು:  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ೫,೩೦೦ ಕೋಟಿ ರೂ. ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಆದರೆ, ನಮ್ಮ ರಾಜ್ಯ ಸರ್ಕಾರ ಈಗಾಗಲೇ ತನ್ನ ಪಾಲಿನ ೧೨,೦೦೦...

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬಿಜೆಪಿ ರಾಜಕೀಯ

ಕಡೂರು: ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಸಚಿವ ರಾಮಲಿಂಗಾರೆಡ್ಡಿ ಅವರು ರಾಜಕೀಯ ವಲಯದ ಪ್ರಮುಖ ವಿದ್ಯಮಾನಗಳು, ರಾಜ್ಯದ ಜಲವಿವಾದ ಹಾಗೂ ಸಚಿವ ಸಂಪುಟ ವಿಸ್ತರಣೆಯ ಕುರಿತಾಗಿ ಮಾಧ್ಯಮಗಳ ಎದುರು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ....

Related Articles

ವಾಹನ ಡಿಕ್ಕಿಗೆ ಬೈಕ್ ಸವಾರ ಸಾವು

ಬೀರೂರು: ಕಡೂರು ತಾಲ್ಲೂಕಿನ ಹೇಮಗಿರಿ ಗೇಟ್ ಬಳಿಯ ಜಮೀನಿನಲ್ಲಿ ಕೆಲಸ ಮುಗಿಸಿ, ಅಜ್ಜಂಪುರ ಕಡೆಗೆ ಬೀರೂರು...

ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ

ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ...

ದನ ಅಕ್ರಮ ಸಾಗಾಟ: ಪ್ರಕರಣ ದಾಖಲು

ಅಲ್ಲೂರು: ಇಲ್ಲಿಗೆ ಸಮೀಪದ ಹಾಂದಿಯ ಅಂಬೇಡ್ಕರ್ ವೃತ್ತದ ಬಳಿಯ ರಜಾ ಕ್ಯಾಂಟೀನ್ ಎದುರು 5 ವರ್ಷ...

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ: 9.20 ಲಕ್ಷ ಗಣತಿ ನಮೂನೆಗಳ ವಿತರಣೆ

ಚಿಕ್ಕಮಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Intensive Revision...