Home Latest News ವಿಕ್ರಮ್ ಗೌಡ ಅಂತ್ಯಕ್ರಿಯೆ ಇಂದು : ಹೋಟೆಲ್ ಮಾಣಿ ಸೇರಿದ್ದೇಗೆ ನಕ್ಸಲಿಸಂ
Latest News

ವಿಕ್ರಮ್ ಗೌಡ ಅಂತ್ಯಕ್ರಿಯೆ ಇಂದು : ಹೋಟೆಲ್ ಮಾಣಿ ಸೇರಿದ್ದೇಗೆ ನಕ್ಸಲಿಸಂ

Share
Share

ಚಿಕ್ಕಮಗಳೂರು : ಇಂದು ನಕ್ಸಲ್​ ನಾಯಕ ವಿಕ್ರಂಗೌಡ ಅಂತ್ಯಕ್ರಿಯೆ ನಡೆಯಲಿದೆ. ಮರಣೋತ್ತರ ಪರೀಕ್ಷೆ ಮುಗಿದಿದ್ದು ಕುಟುಂಬಕ್ಕೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಕಳ ನ್ಯಾಯಾಧೀಶರ ಸಮ್ಮುಖದಲ್ಲಿ ಪೋಸ್ಟ್​ಮಾರ್ಟಂ ನಡೆದಿದ್ದು ನಿನ್ನೆಯೇ ಕಳಿಸಲಾಗಿತ್ತು. ಇಂದು ಉಡುಪಿ ಅಥವಾ ಹೆಬ್ರಿಯಲ್ಲಿ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.

ಹುಟ್ಟೂರು ನಾಲ್ಪಾಡು ಗ್ರಾಮದಲ್ಲಿ ವಿಕ್ರಂಗೌಡ ಅಂತ್ಯಕ್ರಿಯೆ ಸಾಧ್ಯತೆ ಇದ್ದು ಬಿಗಿ ಭದ್ರತೆಯನ್ನು ಪೊಲೀಸರು ಕಲ್ಪಿಸಿದ್ದಾರೆ.
ವಿಕ್ರಂಗೌಡ ಕುಟುಂಬ ವರ್ಗ, ಸಂಬಂಧಿಕರು ಆಪ್ತ ವಲಯದವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗ್ತಾರೆ-

ವಿಕ್ರಮ್ ಗೌಡ ಹಿನ್ನೆಲೆ ಏನು

4ನೇ ಕ್ಲಾಸ್​ ಓದಿದ್ದ ವಿಕ್ರಂ ನಕ್ಸಲ್​ ನಾಯಕನಾಗಿದ್ದೇಗೆ ಎಂಬುದೇ ರೋಚಕ ಆರಂಭದಲ್ಲಿ ಮುಂಬೈನ ಹೋಟೆಲ್​​​ನಲ್ಲಿ ಕೆಲಸ ಮಾಡ್ತಿದ್ದ ವಿಕ್ರಂ ಕೆಂಪುಸೇನೆ ಅಧಿನಾಯಕ ಆಗಿದ್ದನು. 20ನೇ ವಯಸ್ಸಿನಲ್ಲಿ ಹೋಟೆಲ್​​ ಬಿಟ್ಟು ಹೋರಾಟಕ್ಕೆ ಎಂಟ್ರಿ ಕೊಟ್ಟು ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ವಿರೋಧಿ ಹೋರಾಟ ಸೇರಿದ್ದ ನಂತರ 2002-03 ರಲ್ಲಿ ನಕ್ಸಲ್​​​ ಸಂಘಟನೆಯನ್ನು ಸೇರಿಕೊಂಡಿದ್ದ

ಹೆಬ್ರಿಯ ಪೀತಾಬೈಲು ನಾಡ್ಪಾಲು ಗ್ರಾಮದ ವಿಕ್ರಂಗೌಡ ಅಂದಿನ ನಕ್ಸಲ್​ ನಾಯಕ ಸಾಕೇತ್​ ರಾಜನ್​ ಭೇಟಿಯಾಗಿ ಸಂಘಟನೆ ಸೇರಿದ್ದ ಇದೀಗ ರಾಜ್ಯದಲ್ಲಿ ಬಲಿಯಾದ 15ನೇ ನಕ್ಸಲ್​ ನಾಯಕ ವಿಕ್ರಂಗೌಡ ಆಗಿದ್ದಾನೆ. 12 ವರ್ಷಗಳ ನಂತರ ಕರ್ನಾಟಕದಲ್ಲಿ ಮತ್ತೆ ನಕ್ಸಲ್​ ಬಲಿಯಾದಂತಾಗಿದೆ. ಮೋಸ್ಟ್ ವಾಂಟೆಡ್​ ಮಾವೋವಾದಿ​ ವಿಕ್ರಂಗೌಡ ಕೇವಲ 46 ವರ್ಷದವನಾಗಿದ್ದ

ಕರ್ನಾಟಕ ಸೇಫ್ ಅಲ್ಲ ಎಂದು ಕೇರಳದ ಅರಣ್ಯಕ್ಕೆ ತೆರಳಿದ್ದ ವಿಕ್ರಮ್ ಗೌಡ ನಕ್ಸಲ್​​ ಹೋರಾಟ ಪುನರ್​​ ಸಂಘಟಿಸಲು ಹೊರಟಿದ್ದ ಎನ್ನಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕಸ್ತೂರಿ ರಂಗನ್​​​ ವರದಿ ವಿರೋಧಿ ಹೋರಾಟ ಶುರು ಮಾಡಿದ್ದ ವಿಕ್ರಂ-ಅರಣ್ಯ ಒತ್ತುವರಿ ವಿಚಾರವಾಗಿ ರಹಸ್ಯ ಸಭೆ ನಡೆಸುತ್ತಿದ್ದ ವಿಕ್ರಂ ಅಲ್ಲದೇ ಮುಂಡಗಾರು ಲತಾ, ಜಯಣ್ಣ, ವನಜಾಕ್ಷಿ- ಸುಂದರಿ ಪತ್ತೆಗೆ ಸರ್ಕಾರ 5 ಲಕ್ಷ ಬಹುಮಾನ ಘೋಷಣೆ ಮಾಡಿತ್ತು-ಉಡುಪಿಯ ಹೆಬ್ರಿ ಬಳಿ ಸೋಮವಾರ ರಾತ್ರಿ ಎನ್​​ಕೌಂಟರ್​​-ಕಾಡಂಚಿನ ಮಲೆಕುಡಿ ಮನೆಯಿಂದ ರೇಷನ್​​ ಒಯ್ಯಲು ಬಂದಿದ್ದು ಪೊಲೀಸರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಸಾವು ಕಂಡಿದ್ದಾನೆ. ಮತ್ತಿಬ್ಬರಿಗೆ ಗಾಯ ಆಗಿದ್ದು ಎಸ್ಕೇಪ್​ ಆಗಿರುವ ನಕ್ಸಲರಿಗಾಗಿ ಕೂಂಬಿಂಗ್ ಮುಂದುವರೆದಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಕಂಸಾಗರ ಗ್ರಾಮದ ಕೆಂಚಪ್ಪ...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ಕಚೇರಿ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿದೆ ಎಂಬ ಆರೋಪ...

Related Articles

ಕಾಫಿಕಿಂಗ್ ಸಿದ್ಧಾರ್ಥಹೆಗ್ಗಡೆ ಹೆಸರು ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಬೇಕಿದೆ

ಮೂಡಿಗೆರೆ: ಕಾಫಿ ಡೇ ಮಾಲೀಕ ದಿವಂಗತ ವಿ.ಜಿ.ಸಿದ್ಧಾರ್ಥ ಹೆಗ್ಗಡೆ ಅವರು ತಮ್ಮ ಸಂಪೂರ್ಣ ಜೀವನವನ್ನು ಕಾಫಿ...

ವಿಮಾನ ನಿಲ್ದಾಣಕ್ಕಾಗಿ ಜಮೀನ ಸ್ವಾಧೀನಕ್ಕೆ ರೈತರ ವಿರೋಧ

ಚಿಕ್ಕಮಗಳೂರು: ನಗರದ ಹೊರವಲಯದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿರುವ ಪ್ರದೇಶ ಕೃಷಿ ಅವಲಂಬಿತವಾಗಿದ್ದು, ಅತ್ಯಂತ...

ಎತ್ತಿನಭುಜ ಚಾರಣದಕ್ಕೆ ಟ್ರಕ್ಕಿಂಗ್‌ ಬಂದು ಸಮಸ್ಯೆ ಎದುರಿಸುತ್ತಿರುವ ಪ್ರವಾಸಿಗರು

ಮೂಡಿಗೆರೆ : ವಾರಾಂತ್ಯದ ಮಜಾ ಕಳೆಯಲು ಬೆಟ್ಟಗುಡ್ಡಗಳತ್ತ ಮುಖ ಮಾಡಿದ ಚಾರಣಪ್ರಿಯರಿಗೆ ನಿರಾಶೆಯ ಜೊತೆಗೆ ಕಾಡಿನ...

₹1.39 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಅಜ್ಜಂಪುರ: ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೀರುವಿನ ಲಾಕರ್‌ನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು...