ಚಿಕ್ಕಮಗಳೂರು : ಎಂತಹ,ಎಂತಹ ಜನರಿದ್ದಾರೆ ಎಂಬುದಕ್ಕೆ ಅಪ್ಪಟ ಉದಾಹರಣೆಯೆಂದರೆ ತರೀಕೆರೆಯ ಗಾಳಿಹಳ್ಳಿ ಕ್ರಾಸ್ ನಲ್ಲಿ ಕಟ್ಟಿರುವ ಸಾಯಿ ಆಸ್ಪತ್ರೆ ಕಟ್ಟಡ ನೋಡಿದರೆ ತಿಳಿಯುತ್ತದೆ.ಶರಾವತಿಯಿಂದ ಬೆಂಗಳೂರಿಗೆ 220 ವಿದ್ಯುತ್ ಹೆಚ್ ,ಟಿ (high tension) ಲೈನ್ ಎಳೆಯಲಾಗಿದೆ.ಇದರ ಅಕ್ಕಪಕ್ಕದಲ್ಲಿ 55 ಅಡಿ ಜಾಗ ಬಿಟ್ಟು ವಾಸ ಮಾಡ ಬೇಕೆಂಬ ಸ್ಪಷ್ಟವಾದ ನಿಯಮವಿದ್ದು ಇದನ್ನು ಉಲ್ಲಂಘಿಸಿ ಲೈನ್ ಪಕ್ಕದಲ್ಲಿ ಬೃಹತ್ ಕಟ್ಟಡ ಕಟ್ಟಿದ್ದು ಇದರ ಬಗ್ಗೆ ಯಾವ ಇಲಾಖೆಯವರು ಕ್ರಮ ತೆಗೆದುಕೊಳ್ಳುವ ಬದಲು ಕೈ ಜೋಡಿಸಿದ್ದಾರೆ.ಅದರಲ್ಲೂ ಇಲ್ಲಿ ಆಸ್ಪತ್ರೆ ನಡೆಯುತ್ತಿರುವುದು ಸೋಜಿಗ .
ಕಟ್ಟಡದ ಮಾಲೀಕ ಕೆ.ಇ.ಬಿಯಿಂದ ವಿದ್ಯುತ್ ಪಡೆಯಲು ಹೋದಾಗ ಇದು ಕಾನೂನು ಬಾಹಿರ ಎಂದು ತಿರಸ್ಕಾರಿಸಿದ್ದಾರೆ.ಇದಕ್ಕೂ ಕೇರ್ ಮಾಡದೆ ಅನಧಿಕೃತವಾಗಿ ವಿದ್ಯುತ್ ಪಡೆದಿದ್ದು ಸ್ಕ್ವಾಡ್ನವರು ಒಮ್ಮೆ ಮಾತ್ರ ಕಾಟಚಾರಕ್ಕೆ ಕ್ರಮಕೈಗೊಂಡು ಅಗಾಗ ಭೇಟಿ ನೀಡಿ ನಗುನಗುತ್ತಾ ಹೊರಗೆ ಬರುವುದು ನೋಡಿದರೆ ಎಲ್ಲಾ ವ್ಯವಹಾರ ಖುಲ್ಲಾ,ಖುಲ್ಲ ನಡೆಯುತ್ತಿದೆ ಎನ್ನಿಸುತ್ತದೆ.
ಆರೋಗ್ಯ ಇಲಾಖೆಯು ಕೂಡ ಇಲಾಖೆಯ ನಿಯಮಗಳನ್ನು ಬದಿಗೊತ್ತಿದೆ ಈ ಬಗ್ಗೆ ಡಿ,ಹೆಚ್,ಒ ಅಶ್ವಥ್ ಬಾಬು ವಿಚಾರಿಸಿದರೆ ರಾಜಕೀಯದವರ ತರಹ ಉತ್ತರ ಕೊಡುತ್ತಾರೆ.
ಅಕಸ್ಮಾತ್ತಾಗಿ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರದ್ದು ? ಹೀಗೆ ಬಿಟ್ಟರೆ ಹೆಚ್,ಟಿ ಲೈನ್ ನ ಐದು ಅಡಿ ಪಕ್ಕದಲ್ಲಿ ಕಟ್ಟಿರುವುದನ್ನು ನೋಡಿದರೆ ಮುಂದೆ ಸಾಧ್ಯವಾದರೆ ಲೈನ್ ಮೇಲೆ ಕಟ್ಟಡ ಕಟ್ಟಿದರು ಆಶ್ಚರ್ಯವಿಲ್ಲ ಎನ್ನುತ್ತಾರೆ ಜನ.ಪುರಸಭೆಯವರು ಇದರ ಬಗ್ಗೆ ಮೌನವಹಿಸಿದ್ದಾರೆ, ಆರೋಗ್ಯ ಇಲಾಖೆಗೆ ಅನಾರೋಗ್ಯ ಬಾಧಿಸುತ್ತಿರುವಾಗ, ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳ ಬೇಕಾಗಿದೆ.
Leave a comment