Home namma chikmagalur chikamagalur ಕಾಫಿಕಿಂಗ್ ಸಿದ್ಧಾರ್ಥಹೆಗ್ಗಡೆ ಹೆಸರು ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಬೇಕಿದೆ
chikamagalurHomeLatest Newsnamma chikmagalur

ಕಾಫಿಕಿಂಗ್ ಸಿದ್ಧಾರ್ಥಹೆಗ್ಗಡೆ ಹೆಸರು ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಬೇಕಿದೆ

Share
Share

ಮೂಡಿಗೆರೆ: ಕಾಫಿ ಡೇ ಮಾಲೀಕ ದಿವಂಗತ ವಿ.ಜಿ.ಸಿದ್ಧಾರ್ಥ ಹೆಗ್ಗಡೆ ಅವರು ತಮ್ಮ ಸಂಪೂರ್ಣ ಜೀವನವನ್ನು ಕಾಫಿ ಬೆಳೆಗಾರರ ಮತ್ತು ಕಾರ್ಮಿಕರ ಹಿತಕ್ಕಾಗಿ ಸವಿಸಿದ್ದಾರೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.

ಅವರು ಭಾನುವಾರ ತಾಲೂಕಿನ ಸಿದ್ಧಾರ್ಥವನದಲ್ಲಿ ಸಿದ್ಧಾರ್ಥ ಹೆಗ್ಗಡೆ ಅವರ ಅಭಿಮಾನಿಗಳ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ವೇದಿಕೆ ಹಾಗೂ ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಕಾಫಿ ಕಿಂಗ್ ಸಿದ್ದಾರ್ಥ ಹೆಗ್ಗಡೆ ಅವರ ಜನ್ಮ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರಳ ಸಜ್ಜನಿಕೆಗೆ ಮತ್ತೊಂದು ಹೆಸರೇ ಸಿದ್ಧಾರ್ಥ ಹೆಗ್ಗಡೆ ಅಂದರೆ ತಪ್ಪಾಗಲಾರದು ಅವರ ಹೆಸರು ಶಾಶ್ವತವಾಗಿ ಉಳಿಯಲು ಜಿಲ್ಲೆಯ ಎಲ್ಲಾ ಕಡೆ ಸಿದ್ದಾರ್ಥ ಹೆಗ್ಗಡೆ ಅವರ ನೆನಪಿಗಾಗಿ ಹಲವು ಕಾರ್ಯಕ್ರಮ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ಮಾತನಾಡಿ, ಸಿದ್ಧಾರ್ಥ ಹೆಗ್ಗಡೆ ಅವರು ಪರಿಶ್ರಮದಿಂದ ಇಂದು ಕಾಫಿ ಬೆಳೆಗಾರರು ಆರ್ಥಿಕವಾಗಿ ಸಬಲರಾಗಲು ಕಾರಣರಾಗಿದ್ದಾರೆ. ಅಲ್ಲದೇ ಲಕ್ಷಾಂತರ ಮಂದಿ ಕಾರ್ಮಿಕರ ಬದುಕಿಗೆ ಆಸರೆಯಾಗಿದ್ದರು. ಅವರು ಮೃತರಾಗುವ ಮುನ್ನ ಇನ್ನೂ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಕೊಡುವ ಕನಸು ಹೊತ್ತಿದ್ದರು. ಆದರೆ ವಿಧಿಯಾಟದಿಂದ ಅವರನ್ನು ಕಳೆದುಕೊಳ್ಳುವಂತಾಯಿತು. ಅಂತಹ ಮಹಾನ್ ವ್ಯಕ್ತಿಯ ಹೆಸರನ್ನು ವಿದ್ಯಾನಗರದ ರಸ್ತೆಯೊಂದಕ್ಕೆ ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.

ಸಿದ್ಧಾರ್ಥ ಹೆಗ್ಗಡೆ ಅಭಿಮಾನಿಗಳ ಬಳಗದ ಅಧ್ಯಕ್ಷ ಜಿ.ಎಚ್.ಹಾಲಪ್ಪಗೌಡ ಮಾತನಾಡಿ, ಸಿದ್ಧಾರ್ಥ ಅವರ ಹೆಸರು ಬಳಸಿಕೊಂಡು ಯಾವುದೇ ವ್ಯಕ್ತಿ ಹಾಗೂ ಸಂಘಟನೆ ಹಣ ಸಂಗ್ರಹಿಸಿ ಕಾರ್ಯಕ್ರಮ ಆಯೋಜಿಸಬಾರದು. ಒಂದು ವೇಳೆ ಕಾರ್ಯಕ್ರಮ ಆಯೋಜಿಸಿದರೆ ಅವರ ಕುಟುಂಬದವರ ಗಮನಕ್ಕೆ ತರಬೇಕು. ವಯಕ್ತಿಕ ಲಾಭಕ್ಕೆ ಕುಟುಂಬದ ಗೌರವ, ಘನತೆಗೆ ದಕ್ಕೆ ಉಂಟಾಗದಂತೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.

ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ಅಶೋಕ್ ಆಲ್ದೂರು, ಅಭಿಮಾನಿ ಬಳಗದ ಡಾ.ಜ.ಪಿ.ಕೃಷ್ಣೇಗೌಡ, ಕೃಷ್ಣೇಗೌಡ ಅವಳ್ಳಿ, ಪಿ.ಜಿ.ಅನುಕುಮಾರ್, ಜೆ.ಎಸ್.ರಘು, ಶಿವಪ್ರಕಾಶ್ ಮಾತನಾಡಿದರು. ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಫ್, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ, ಮಂಚೇಗೌಡ, ಎಂ.ಸಿ.ಹೂವಪ್ಪ, ವಿನಯ್ ಹಳೆಕೋಟೆ, ಶಿವಣ್ಣ ಬಿಳಗುಳ, ಪ್ರಶಾಂತ್ ಬಿಳಗುಳ, ಸುಗುಣ ಶಿವಪ್ರಸಾಧ್, ಮೋಹಿದ್ದೀನ್ ಸೇಟ್, ಪ್ರಶಾಂತ್, ಪೂರ್ಣೇಶ್ ಮೂರ್ತಿ, ಮದೀಶ್ ಮತ್ತಿತರರಿದ್ದರು.

Coffee King Siddhartha Heggade’s name needs to be preserved forever.

Share

Leave a comment

Leave a Reply

Your email address will not be published. Required fields are marked *

Don't Miss

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಕಂಸಾಗರ ಗ್ರಾಮದ ಕೆಂಚಪ್ಪ...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ಕಚೇರಿ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿದೆ ಎಂಬ ಆರೋಪ...

Related Articles

ವಿಮಾನ ನಿಲ್ದಾಣಕ್ಕಾಗಿ ಜಮೀನ ಸ್ವಾಧೀನಕ್ಕೆ ರೈತರ ವಿರೋಧ

ಚಿಕ್ಕಮಗಳೂರು: ನಗರದ ಹೊರವಲಯದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿರುವ ಪ್ರದೇಶ ಕೃಷಿ ಅವಲಂಬಿತವಾಗಿದ್ದು, ಅತ್ಯಂತ...

ಎತ್ತಿನಭುಜ ಚಾರಣದಕ್ಕೆ ಟ್ರಕ್ಕಿಂಗ್‌ ಬಂದು ಸಮಸ್ಯೆ ಎದುರಿಸುತ್ತಿರುವ ಪ್ರವಾಸಿಗರು

ಮೂಡಿಗೆರೆ : ವಾರಾಂತ್ಯದ ಮಜಾ ಕಳೆಯಲು ಬೆಟ್ಟಗುಡ್ಡಗಳತ್ತ ಮುಖ ಮಾಡಿದ ಚಾರಣಪ್ರಿಯರಿಗೆ ನಿರಾಶೆಯ ಜೊತೆಗೆ ಕಾಡಿನ...

₹1.39 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಅಜ್ಜಂಪುರ: ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೀರುವಿನ ಲಾಕರ್‌ನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು...

ಮಹಿಳೆಯಿಂದ ₹93,500 ಮೌಲ್ಯದ 17 ಗ್ರಾಂ ಚಿನ್ನಾಭರಣ ಪಡೆದು ವಂಚನೆ

ಕಡೂರು: ಕಷ್ಟದ ಸಮಯದಲ್ಲಿ ಒಡವೆಗಳನ್ನು ಅಡವಿಟ್ಟು ಹಣ ಪಡೆದು ಬಳಿಕ ಬಿಡಿಸಿಕೊಡುವುದಾಗಿ ನಂಬಿಸಿ ಮಹಿಳೆಯಿಂದ ₹93,500...