Home namma chikmagalur chikamagalur ನರೇಂದ್ರ ಮೋದಿ ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ
chikamagalurHomeLatest Newsnamma chikmagalur

ನರೇಂದ್ರ ಮೋದಿ ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ

Share
Oplus_153223168
Share

ಚಿಕ್ಕಮಗಳೂರು : ಸಾರ್ವತ್ರಿಕ ಚುನಾವಣೆಗಳ ಮೂಲಕ ಭಾರತದ ಅತಿ ಹೆಚ್ಚುಕಾಲ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ನರೇಂದ್ರ ಮೋದಿಯವರು ದೇಶದ ಮೊದಲ ಪ್ರಧಾನ ಮಂತ್ರಿಯಾಗಿದ್ದಾರೆಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಚುನಾಯಿತ ಪ್ರಧಾನ ಮಂತ್ರಿಯಾಗಿ ೪೩೯೮ ದಿನಗಳ ಕಾಲ ಆಡಳಿತ ನಡೆಸಿ ದೇಶದ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಈಗ ನರೇಂದ್ರ ಮೋದಿಯವರು ೪೩೯೯ ದಿನಗಳನ್ನು ಪೂರೈಸುವ ಮೂಲಕ ನೆಹರೂ ದಾಖಲೆ ಮುರಿದು ಐತಿಹಾಸಿಕ ಮೈಲಿಗಲ್ಲಾಗಿಸಿದ್ದಾರೆ ಎಂದು ಹೇಳಿದರು.

೨೦೧೪ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತದೊಂದಿಗೆ ಆಯ್ಕೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಸವಾಲು ಸಮಸ್ಯೆಗಳ ನಡುವೆ ಪಾರದರ್ಶಕ, ಮಧ್ಯವರ್ತಿಗಳ ರಹಿತ, ರೈತಪರವಾದ ಕೇಂದ್ರ ಸರ್ಕಾರವನ್ನು ನಡೆಸಿದ್ದಾರೆಂದು ಶ್ಲಾಘಿಸಿದರು.

ಬ್ಯಾಂಕಿಂಗ್ ವ್ಯವಸ್ಥೆಯಿಂದ ವಂಚಿತರಾಗಿದ್ದ ರಾಜ್ಯದ ೨.೧೨ ಕೋಟಿಗೂ ಹೆಚ್ಚು ಜನರನ್ನು ಜನಧನ್ ಖಾತೆಗಳನ್ನು ತೆರೆಯುವ ಮೂಲಕ ಬ್ಯಾಂಕಿಂಗ್ ವ್ಯಾಪ್ತಿಗೆ ತರಲಾಗಿದೆ. ಪಿಎಂ ಜೀವನ ಜ್ಯೋತಿ ಭೀಮಾ ಯೋಜನೆಯಡಿ ೧.೬೭ ಕೋಟಿ ಮತ್ತು ಪಿ.ಎಂ. ಸುರಕ್ಷಾ ಭೀಮಾ ಯೋಜನೆಯಡಿ ೨.೬೦ ಕೋಟಿ ದುರ್ಬಲವರ್ಗದ ಜನರಿಗೆ ಅತ್ಯಂತ ಕಡಿಮೆ ಪ್ರೀಮಿಯಂ ನಲ್ಲಿ ೨ ಲಕ್ಷ ರೂ. ವಿಮಾ ಕರಾರು ಒದಗಿಸುವ ಜೊತೆಗೆ ಸಾಮಾಜಿಕ ಸುರಕ್ಷತೆ ನೀಡಲಾಗಿದೆ ಎಂದರು.

ಯುವಕರು, ಮಹಿಳೆಯರು ಮತ್ತು ಸಣ್ಣ ಉದ್ದಿಮೆಗಳಿಗೆ ಉದ್ಯಮ ಶೀಲತೆಯ ವಿಶ್ವಾಸ ತುಂಬಲು ೩.೩೯ ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಮುದ್ರಾ ಸಾಲ ವಿತರಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ ರಾಜ್ಯದ ೪೩.೨ ಲಕ್ಷಕ್ಕೂ ಹೆಚ್ಚಿನ ರೈತರು ಕಿಸಾನ್ ಸಮ್ಮಾನ್ ಫಲಾನುಭವಿಗಳಾಗಿದ್ದಾರೆ. ಜಲಜೀವನ ಮಿಷನ್ ಯೋಜನೆಯಡಿ ೮೭.೭ ಲಕ್ಷ ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

೪೮.೯ ಲಕ್ಷ ಜನರು ಅಟಲ್ ಪೆನ್‌ಷನ್ ಚಂದಾದಾರರಾಗಿದ್ದಾರೆ. ೬.೧೪ ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ೫೦ ಸಾವಿರದಿಂದ ೧ ಲಕ್ಷ ರ. ವರೆಗೆ ದುಡಿಯುವ ಬಂಡವಾಳ ಸಾಲ ಒದಗಿಸಲಾಗಿದೆ. ೩೧.೭ ಲಕ್ಷ ಕೃಷಿಕರು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರಿಯಾಯಿತಿ ದರದಲ್ಲಿ ಸಕಾಲಿಕ ಸಾಲ ಒದಗಿಸಲಾಗಿದೆ. ೪೧.೪ ಲಕ್ಷ ಗ್ರಾಮೀಣ ಕುಟುಂಬಗಳಿಗೆ ಉಚಿತ ಉಜ್ವಲ ಎಲ್ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಸುಮಾರು ೪೦೨ ಲಕ್ಷ ಫಲಾನುಭವಿಗಳಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ ಎಂದರು.

ಜಿಲ್ಲೆಗೆ ಜನರ ಬೇಡಿಕೆಗನುಸಾರವಾಗಿ ತಿರುಪತಿಗೆ ರೈಲು ಸಂಚಾರ ಆರಂಭಿಸಲಾಗಿದೆ. ಬಿಎಸ್‌ಎನ್ ಎಲ್ ನಿರೀಕ್ಷೆಗೂ ಮೀರಿದ ಸಾಧನೆಯಾಗಿದೆ. ೪ಜಿ ಜೊತೆಗೆ ೩೭ ಟವರ್ ಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದ್ದು, ಜಿಲ್ಲೆಯ ಕುಗ್ರಾಮಗಳಲ್ಲಿ ಬಿಎಸ್‌ಎನ್ ಎಲ್ ಸೇವೆ ಕೈಗೆಟುಕುವ ದರದಲ್ಲಿ ದೊರೆಯಲಿದ್ದು, ಜಿಲ್ಲೆಯ ೪೪ ಕುಗ್ರಾಮಗಳಿಗೆ ಹೊಸ ಯೋಜನೆಯಡಿ ೪ಜಿ ಸಂಪರ್ಕಕಲ್ಪಿಸುವ ಉದ್ದೇಶದಿಂದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ರಾಜ್ಯ ಸರ್ಕಾರ ಪಿಎಂ ರಾವುತ್ ಅಪಘಾತ ಯೋಜನೆಯನ್ನು ಶೀಘ್ರ ಅನುಷ್ಟಾನ ಕೈಗೊಳ್ಳಬೇಕು ಇದರಿಂದ ಅಪಘಾತಕ್ಕೊಳಗಾದ ವ್ಯಕ್ತಿಗೆ ಚಿಕಿತ್ಸೆಗಾಗಿ ೧.೫ ಲಕ್ಷ ರೂ. ಗಳನ್ನು ಕೇಂದ್ರ ಸರ್ಕಾರ ಪರಿಹಾರ ನೀಡುತ್ತದೆ ಎಂದ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಬಲೀಕರಣ ಮಾಡುವ ಉದ್ದೇಶದೊಂದಿಗೆ ಗ್ರಾ.ಪಂ., ತಾಪಂ, ಜಿಪಂ ಚುನಾವಣೆಗಳನ್ನು ವಿಳಂಭ ಮಾಡದೆ ಶೀಘ್ರವೇ ನಡೆಸಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ, ಮುಖಂಡರಾದ ಪುಣ್ಯಪಾಲ್, ಕನಕರಾಜ ಅರಸ್, ಚಂಪಾ ಜಗದೀಶ, ದಿನೇಶ್, ಚಮಿನ್, ಸಚಿನ್, ಮತ್ತಿತರರು ಉಪಸ್ಥಿತರಿದ್ದರು.

Narendra Modi is India’s longest-serving elected Prime Minister

Share

Leave a comment

Leave a Reply

Your email address will not be published. Required fields are marked *

Don't Miss

ಅನಧಿಕೃತ ಜೀಪ್‌ಗಳ ಹಾವಳಿ ತಪ್ಪಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು:  ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅನಧಿಕೃತ ಮತ್ತು ಅಕ್ರಮ ಜೀಪ್ ಗಳ ಹಾವಳಿ ತಡೆಗಟ್ಟಿ ಪ್ರವಾಸಿಗರ ಸುರಕ್ಷತೆ ಕಾಪಾಡಬೇಕು ಎಂದು ಆಗ್ರಹಿಸಿ ಜಿಲ್ಲೆಯ ಸ್ಥಳೀಯ ನಾಗರೀ ಕರು ಸೋಮವಾರ ಅಪರ ಜಿಲ್ಲಾಧಿಕಾರಿ...

ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಾಫಿಯಾ ದಂದೆಗಳು ?

ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಅಗ್ರಸ್ಥಾನವಿದೆ.ನಿಜವಾದ ಪ್ರವಾಸಿಗರು ಜಿಲ್ಲೆಯ ಪ್ರಕೃತಿ ಸೌಂದರ್ಯದ ಜೊತೆಗೆ ಧಾರ್ಮಿಕ ಸ್ಥಳಗಳು, ಝರಿಗಳ ಜೊತೆಗೆ ಬೋರ್ಗರಿಯುವ ನದಿಗಳು, ಉಪ ನದಿಗಳು,ಅರಣ್ಯದ ಜೊತೆಗೆ ಕಾಡು ಪ್ರಾಣಿಗಳು...

Related Articles

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ...

ಅಂಚೆ ನಾಗಭೂಷಣ್ ಗೆ’ಪತ್ರಿಕಾ ರತ್ನ’ ಪ್ರಶಸ್ತಿ ಪ್ರಧಾನ

ತರೀಕೆರೆ : ಪಟ್ಟಣದ ಹಿರಿಯ ಪತ್ರಕರ್ತರು, ಜಿಲ್ಲಾ ಕನ್ನಡ ವಾರಪತ್ರಿಕೆ ಅಂಚೆವಾರ್ತೆ ಸಂಪಾದಕರು ಆದ ಅಂಚೆ...

ಇಂದು ಆರ್‌ಟಿಒ ರಾಕೇಶ್ ಕುಮಾರ್ ವಿರುದ್ಧ ವಿಚಾರಣೆ

ಚಿಕ್ಕಮಗಳೂರು: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಹಣಕಾಸು ಅಕ್ರಮಗಳ ಆರೋಪ ಕೇಳಿಬಂದಿರುವ ಬೆನ್ನಲ್ಲೇ...

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು...