Home namma chikmagalur chikamagalur ಮಗಳನ್ನು ಹಾಸ್ಟೆಲ್‌ಗೆ ಬಿಡಲು ಹೋದ ವಿವಾಹಿತ ಮಹಿಳೆ ನಿಗೂಢ ನಾಪತ್ತೆ
chikamagalurCrime NewsHomeLatest Newsnamma chikmagalur

ಮಗಳನ್ನು ಹಾಸ್ಟೆಲ್‌ಗೆ ಬಿಡಲು ಹೋದ ವಿವಾಹಿತ ಮಹಿಳೆ ನಿಗೂಢ ನಾಪತ್ತೆ

Share
Share

ಮೂಡಿಗೆರೆ: ಸಾಮಾಜಿಕ ಜಾಲತಾಣದ ಪರಿಚಯವೊಂದು ನೆಮ್ಮದಿಯಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಹಳ್ಳಿಬೈಲು ಗ್ರಾಮದಲ್ಲಿ ನಡೆದಿದೆ. ಮಗಳನ್ನು ಹಾಸ್ಟೆಲ್‌ಗೆ ಬಿಡಲು ಹೋದ ವಿವಾಹಿತ ಮಹಿಳೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಹಳ್ಳಿಬೈಲು ಗ್ರಾಮದ ನಿವಾಸಿ ಹರೀಶ್ ಎಂಬುವವರ ಪತ್ನಿ ಕಾವ್ಯ (30 ವರ್ಷ) ನಾಪತ್ತೆಯಾದ ಮಹಿಳೆ. ಕಳೆದ 12 ವರ್ಷಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದ ಈ ದಂಪತಿಗೆ 11 ವರ್ಷದ ಹೆಣ್ಣು ಮಗಳಿದ್ದಾಳೆ. ಕಳೆದ ಆರು ತಿಂಗಳಿನಿಂದ ಕಾವ್ಯ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಶೋಕ್ ನಾಯ್ಕ ಎಂಬ ಅಪರಿಚಿತನ ಪರಿಚಯವಾಗಿ, ಇಬ್ಬರ ನಡುವೆ ಸ್ನೇಹ ಬೆಳೆದಿತ್ತು ಎನ್ನಲಾಗಿದೆ.

ಈ ವಿಷಯ ಒಂದು ತಿಂಗಳ ಹಿಂದೆ ಪತಿ ಹರೀಶ್‌ಗೆ ತಿಳಿದಾಗ ದಂಪತಿ ನಡುವೆ ತೀವ್ರ ವಾದ-ವಿವಾದ ನಡೆದು, ಸಿಟ್ಟಿನಲ್ಲಿ ಪತಿ ಕಾವ್ಯ ಅವರ ಮೊಬೈಲ್ ಫೋನ್ ಒಡೆದು ಹಾಕಿದ್ದರು. ಈ ಘಟನೆಯ ನಂತರ ಮನೆಯಲ್ಲಿ ಎಲ್ಲವೂ ಸರಿಹೋಯಿತು ಅಂದುಕೊಳ್ಳುವಷ್ಟರಲ್ಲಿಯೇ ಜೂನ್ 1ರಂದು ಕಾವ್ಯ ತನ್ನ 11 ವರ್ಷದ ಮಗಳನ್ನು ಬಿದರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಬಿಟ್ಟು ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ.

ಮಗಳನ್ನು ಸುರಕ್ಷಿತವಾಗಿ ವಸತಿ ನಿಲಯಕ್ಕೆ ತಲುಪಿಸಿದ ಕಾವ್ಯ, ಆನಂತರ ಮನೆಗೆ ಮರಳಿ ಬಂದಿಲ್ಲ. ಕೈಯಲ್ಲಿ ಮೊಬೈಲ್ ಸಹ ಇಲ್ಲದ ಕಾರಣ ಆಕೆಯನ್ನು ಸಂಪರ್ಕಿಸುವುದು ಕುಟುಂಬಸ್ಥರಿಗೆ ಅಸಾಧ್ಯವಾಗಿದೆ. ಇದರಿಂದ ಕಂಗಾಲಾದ ಪತಿ ಮತ್ತು ಸಂಬಂಧಿಕರು ಪರಿಚಿತರ ಮನೆಗಳು ಸೇರಿದಂತೆ ಸಂಭಾವ್ಯ ಎಲ್ಲಾ ಸ್ಥಳಗಳಲ್ಲೂ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಹೀಗಾಗಿ ಈ ಕುರಿತು ಪತಿ ಹರೀಶ್ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾದ ಮಹಿಳೆಯ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

Married woman mysteriously disappears after dropping off daughter at hostel

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ವೈದ್ಯನ ಡಬಲ್ ಡ್ಯೂಟಿ.!

ಚಿಕ್ಕಮಗಳೂರು : ಸರ್ಕಾರದ ಬೊಕ್ಕಸದಿಂದ ಕೈತುಂಬಾ ಸಂಬಳ ಪಡೆಯುತ್ತಾ, ಕರ್ತವ್ಯದ ಸ್ಥಳದಲ್ಲಿ ರೋಗಿಗಳನ್ನು ಸತಾಯಿಸಿ ನೆರೆಯ ಕೇರಳದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಗಂಭೀರ ಆರೋಪ...

ಶಾಸಕರುಗಳಿಗೆ ಅಧಿಕಾರದ ಹಠ-ರೈತರಿಗೆ ಬರಗಾಲದ ಭಯ

ಕಡೂರು ಬರಪೀಡಿತ ತಾಲೂಕು ಪಟ್ಟಿಯಿಂದ ಹೊರಕ್ಕೆ: ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಕಡೂರು: ಕಡೂರು ತಾಲ್ಲೂಕು ಪ್ರತಿ ವರ್ಷವೂ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, ಪ್ರಸಕ್ತ ಸಾಲಿನ ಬರಪೀಡಿತ ತಾಲೂಕುಗಳ ಪಟ್ಟಿಯಿಂದ...

Related Articles

ಕಾಡಾನೆ-ಕಾಡುಕೋಣ ದಾಳಿಯಿಂದ ಭೀತಿಯಲ್ಲಿ ಕಾರ್ಮಿಕರು

ಮೂಡಿಗೆರೆ: ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಒಂದೆಡೆ...

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಪ್ರಾಧ್ಯಾಪಕರ ಹಾಜರಾತಿ ತಿದ್ದುಪಡಿ ಆರೋಪ

ಚಿಕ್ಕಮಗಳೂರು: ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (CIMS)ಯಲ್ಲಿ ಸಹಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಗಣೇಶ್ ಪಿ....

ನೂತನ ಜಿಲ್ಲಾಡಳಿತ ಸಂಕೀರ್ಣ ಮಾರ್ಚ್-ಏಪ್ರಿಲ್ ವೇಳೆಗೆ ಲೋಕಾರ್ಪಣೆ

ಚಿಕ್ಕಮಗಳೂರು: ಕಾಫಿನಾಡಿನ ಸಮಗ್ರ ಅಭಿವೃದ್ಧಿ ನೀಲನಕ್ಷೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ನೂತನ ಜಿಲ್ಲಾಡಳಿತ ಸಂಕೀರ್ಣದ (ಡಿಸಿ...

ತರೀಕೆರೆಯಲ್ಲಿ ಖಾಸಗಿ ಬಸ್ ಏಜೆಂಟ್‌ರ ನಡುರಸ್ತೆಯಲ್ಲೇ ಪುಂಡಾಟ

ತರೀಕೆರೆ: ಸರ್ಕಾರಿ ಬಸ್ ಚಾಲಕನ ಮೇಲೆ ಖಾಸಗಿ ಬಸ್ ಏಜೆಂಟ್‌ಗಳು ನಡುರಸ್ತೆಯಲ್ಲೇ ಪುಂಡಾಟ ನಡೆಸಿ, ರಕ್ತ...