ಚಿಕ್ಕಮಗಳೂರು : ಶಾಸಕ ಹೆಚ್.ಡಿ ತಮ್ಮಯ್ಯನವರನ್ನು ಪ್ರತಿ ನಿತ್ಯ ವಿರೋಧಿಸಿದರೆ ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನೀಡಬಹುದು ಎಂಬ ಭ್ರಮೆಯಿಂದ ಕುರುವಂಗಿ ವೆಂಕಟೇಶ್ ಅವರು ಹೊರಬರಲಿ ಎಂದು ಕೆ.ಪಿ.ಪಿ ಸಂಶೋಧನಾ ವಿಭಾಗದ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್.ಡಿ ತಮ್ಮಯ್ಯನವರಿಂದ ದಲಿತರಿಗೆ ರಕ್ಷಣೆ ಇಲ್ಲ ಎಂದು ಸುಳ್ಳು ಆರೋಪ ಮಾಡಿರುವ ಬಿಜೆಪಿ ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷರು ಎಷ್ಟು ಜನ ದಲಿತರಿಗೆ ನ್ಯಾಯ ಒದಗಿಸಿದ್ದಾರೆ ಎಂದು ಬಹಿರಂಗ ಪಡಿಸಲಿ ಎಂದರು.
ತಮ್ಮ ಸ್ವಾರ್ಥಕ್ಕಾಗಿ ಪ್ರತಿ ದಲಿತ ಕಾಲೋನಿಗಳಲ್ಲಿ ಇದ್ದ ಅಂಬೇಡ್ಕರ್ ಯುವಕ ಸಂಘಗಳನ್ನು ಹೊಡೆದು ಆಳುವ ನೀತಿ ಅನುಸರಿಸಿ ದಲಿತ ಕಾಲೋನಿಗಳಲ್ಲಿ ಬ್ರಿಟಿಷ್ ನೀತಿಯಿಂದ ದಲಿತ ಯುವಕರ ಒಗ್ಗಟ್ಟನ್ನು ಹಿಬ್ಬಾಗ ಮಾಡಿದ ಕೀರ್ತಿ ವೆಂಕಟೇಶ್ ಅವರಿಗೆ ಸಲ್ಲುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ನಕ್ಸಲ್ ಚಟುವಟಿಕೆ ನಡೆಸುತ್ತಾರೆ ಎಂದು ಅವರ ಅಣ್ಣನವರು ಜಿಲ್ಲಾ ಪಂಚಾಯತಿ ಸಭೆಯಲ್ಲಿ ಬಹಿರಂಗ ಹೇಳಿಕೆ ನೀಡಿ ಹಾಸ್ಟೆಲ್ನಲ್ಲಿ ಇರುವ ದಲಿತ ವಿದ್ಯಾರ್ಥಿಗಳನ್ನು ಅವಮಾನಿಸಿದಾಗ ಬಿಜೆಪಿ ದಲಿತ ಮುಖಂಡರು ಎಲ್ಲಿ ಅಡಗಿ ಕುಳಿತಿದ್ದರುಎಂದು ಲೇವಡಿ ಮಾಡಿದರು.
ಸಿ.ಟಿರವಿ ದಲಿತಪರ ಹೋರಾಟಗಾರರನ್ನು ಅರ್ಬನ್ ನಕ್ಸಲರು ಎಂದು ಕರೆಯುವ ಮೂಲಕ ಹೋರಾಟಗಾರರನ್ನು ಅಪಹಾಸ್ಯ ಮಾಡಿ ಅವಮಾನಿಸಿದಾಗ ಈ ವೈಟ್ ಕಾಲರ್ ಬಿಜೆಪಿಯ ದಲಿತ ನಾಯಕರು ಯಾಕೆ ಬಾಯಿಗೆ ಬೀಗ ಹಾಕಿಕೊಂಡಿದ್ದರುಎಂದು ಪ್ರಶ್ನಿಸಿದರು.
ದಲಿತರ ಬಗ್ಗೆ ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷರಿಗೆ ನಿಜವಾಗಿಯೂ ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ, ಬಿಜೆಪಿಯಲ್ಲಿ ಎಸ್ಸಿ ಘಟಕಕ್ಕೆ ಬೇರೆ ದಲಿತ ನಾಯಕರಿಗೆ ಅವಕಾಶ ನೀಡದೆ ಸಾರ್ವಕಾಲಿಕ ಅಧ್ಯಕ್ಷರಾಗಿ ಯಾಕೆ ಉಳಿದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ.ಎಂದು ಸವಾಲೆಸೆದರು.
ಇನ್ನಾದರೂ ಈ ರೀತಿಯ ದುಷ್ಟ ರಾಜಕಾರಣವನ್ನು ಬಿಟ್ಟು ಸಮಾಜದ ಒಳಿತಿಗಾಗಿ, ಸಾಧ್ಯವಾದರೆ ಚಿಕ್ಕಮಗಳೂರಿನ ಅಭಿವೃದ್ಧಿಗೆ ಆರೋಗ್ಯಕರ ಸಲಹೆಗಳನ್ನು ನೀಡಲಿ ಈ ರೀತಿಯ ವ್ಯರ್ಥ ಕೆಲಸಗಳನ್ನು ಬಿಟ್ಟು ಉತ್ತಮ ನಾಯಕರಾಗುವ ಕಡೆ ಗಮನ ಹರಿಸಲಿ ಎಂದರು.
ಗೋಷ್ಟಿಯಲ್ಲಿ ಗ್ಯಾರಂಟಿಸಮಿತಿ ತಾಲ್ಲೋಕು ಅಧ್ಯಕ್ಷಮಲ್ಲೇಶ್ ಸ್ವಾಮಿ,ಯುವಘಟಕದ ಅಧ್ಯಕ್ಷ ಲಾಕೇಶ್,ಲಕ್ಯಾಸಂತೋಷ್ ಕುರುವಂಗಿ ರಾಜೇಶ್ ಇದ್ದರು.
Let Venkatesh come out of the illusion of BJP ticket.
Leave a comment