Home namma chikmagalur chikamagalur ಪ್ರೇಮವಾಹಿನಿ ರಥಕ್ಕೆ ತರೀಕೆರೆಯಲ್ಲಿ ಭವ್ಯ ಸ್ವಾಗತ
chikamagalurHomeLatest Newsnamma chikmagalur

ಪ್ರೇಮವಾಹಿನಿ ರಥಕ್ಕೆ ತರೀಕೆರೆಯಲ್ಲಿ ಭವ್ಯ ಸ್ವಾಗತ

Share
Share

ಚಿಕ್ಕಮಗಳೂರು: ತರೀಕೆರೆಯ ಮೂಲಕ ಜಿಲ್ಲೆಯನ್ನು ಪ್ರವೇಶಿಸಿದ ‘ಶ್ರೀಸತ್ಯಸಾಯಿ ಪ್ರೇಮವಾಹಿನಿ’ ರಾಷ್ಟ್ರೀಯ ರಥಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು.

ಶಿವಮೊಗ್ಗಜಿಲ್ಲೆಯ ಮೂಲಕ ಶಿವಮೊಗ್ಗ ಜಿಲ್ಲಾ ಸತ್ಯಸಾಯಿ ಸೇವಾ ಸಮಿತಿಗಳ ಅಧ್ಯಕ್ಷ ಗೋಪಾಲ್ ನೇತೃತ್ವದಲ್ಲಿ ಇಂದು ಬೆಳಗು ೮.೩೦ಕ್ಕೆ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರವೇಶಿಸಿದ ರಥಯಾತ್ರೆಯನ್ನು ಜಿಲ್ಲೆಯ ಶ್ರೀ ಸತ್ಯಸಾಯಿ ಸೇವಾ ಸಮಿತಿಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ಅವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ರಾಜ್ಯ ಸೇವಾ ಸಂಯೋಜಕ ಪ್ರಭಾಕರ ಬೀರಯ್ಯ, ತರೀಕೆರೆ ಸಂಚಾಲಕ ಸಾಯಿರಾಮಭಟ್, ಟಿ.ಪಿ.ಭೋಜೇಗೌಡ, ವೆಂಕಟೇಶ್ ಮತ್ತಿತರರು ಸಾಕ್ಷಿಕರಿಸಿದರು.

ತರೀಕೆರೆಪಟ್ಟಣ ಪ್ರವೇಶಿದ ರಥ ಬಸವೇಶ್ವರರಸ್ತೆಯ ಬೂದಿಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಎಂ.ಜಿ.ರಸ್ತೆಯ ಶ್ರೀಸತ್ಯಸಾಯಿ ಮಂದಿರದ ಮೂಲಕ ಸಾಗಿ, ನಾಗಪ್ಪ ಕಾಲೋನಿಯ ತಿರುವಿನಲ್ಲಿ ಸಾಗಿತು.

ಮಧ್ಯಾಹ್ನ ಅಜ್ಜಂಪುರಕ್ಕೆ ಆಗಮಿಸಿದ ರಥಯಾತ್ರೆಯು ಗಾಂಧೀವೃತ್ತದ ಶ್ರೀಸತ್ಯಸಾಯಿ ಮಂದಿರದಿಂದ ಕೋಟೆ ಆಂಜನೇಯಸ್ವಾಮಿ ಗುಡಿ ಮುಖಾಂತರ ಚಲಿಸಿ, ಗ್ರಾಮದೇವತೆ ಕಿರಾಳಮ್ಮ ದೇವಸ್ಥಾನ ಹಾದು, ಶ್ರೀರಾಮ ಮಂದಿರದ ಮುಖಾಂತರ ಶ್ರೀಸತ್ಯಸಾಯಿ ಮಂದಿರಕ್ಕೆ ಹಿಂತಿರುಗಿತು. ಸಂಚಾಲಕ ಆರ್.ಮಂಜುನಾಥ್ ನೇತೃತ್ವದಲ್ಲಿ ನಾದಸ್ವರ, ಕೋಲಾಟ ಮತ್ತಿತರ ಸಾಂಸ್ಕೃತಿಕ ಕಲಾ ತಂಡಗಳು ಮೆರಗು ನೀಡಿತು.

ಅಜ್ಜಂಪುರ ತಾಲ್ಲೂಕಿನ ಬಗ್ಗವಳ್ಳಿಯ ಈಶ್ವರದೇವಸ್ಥಾನ ನಂತರ ಕುಡ್ಲೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರಥಯಾತ್ರೆ ದಿವ್ಯದರ್ಶನ ನೀಡಿತು. ಎಲ್ಲೆಡೆ ಮಹಿಳೆಯರು ಕಳಸ, ಪೂರ್ಣಕುಂಭ, ಮಂಗಳವಾದ್ಯ, ಭಜನೆ ಹಾಗೂ ಕಲಾತಂಡಗಳ ಪ್ರದರ್ಶನದೊಂದಿಗೆ ಸಾಗಿದ ರಥಯಾತ್ರೆಯಲ್ಲಿ ಸಾಯಿಭಕ್ತರು ಪಾದ ನಮಸ್ಕಾರ, ಆರತಿ ಮೂಲಕ ಗೌರವ ಸಲ್ಲಿಸುತ್ತಿದ್ದು ಭಕ್ತಿ ಭಾವದಿಂದ ಪ್ರಸಾದ ಸ್ವೀಕರಿಸುತ್ತಿದ್ದರು.

ಇಂದು ಸಂಜೆ ಚಿಕ್ಕಮಗಳೂರು ನಗರ ಪ್ರವೇಶಿಸಿದ ರಥಯಾತ್ರೆಯನ್ನು ಕೆ.ಎಂ.ರಸ್ತೆಯ ಕನಕಭವನದ ಮೂಲಕ ಬರಮಾಡಿಕೊಂಡು ಬೈಕ್ ರ್‍ಯಾಲಿಯೊಂದಿಗೆ ಚಂದ್ರಪ್ರಭ ಬಡಾವಣೆಯ ಟಿ.ಪಿ.ಭೋಜೇಗೌಡರ ಮನೆ ಆವರಣದ ಭಜನಾ ಕೇಂದ್ರ ತಲುಪಿ ಭಜನೆ ಸತ್ಸಂಗ ನಡೆಸಿ ವಾಸ್ತವ್ಯ ಹೂಡಿದೆ.

ಶ್ರೀಸತ್ಯಸಾಯಿ ಅವತಾರ ಶತಮಾನೋತ್ಸವದ ಸ್ಮರಣಾರ್ಥವಾಗಿ ಅವರ ದಿವ್ಯಾವತಾರದ ಸೌರಭವನ್ನು ಪಸರಿಸಲು ಮತ್ತು ದಿವ್ಯ ಪ್ರೇಮದ ಸಂದೇಶವನ್ನು ಸಾರಲು ಶ್ರೀಸತ್ಯಸಾಯಿ ಪ್ರೇಮವಾಹಿನಿ ರಥಯಾತ್ರೆಯನ್ನು ಆಯೋಜಿಸಲಾಗಿದೆ. ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಭಗವಾನರ ದಿವ್ಯಾನುಗ್ರಹವನ್ನು ಪಡೆದು ೨೦೨೫ರ ಏ.೨೫ರಂದು ಐದೂ ದಿವ್ಯ ರಥಗಳು ಹೊರಟ್ಟಿದೆ. ರಾಷ್ಟ್ರಾದ್ಯಂತ ೩.೫ಲಕ್ಷ ಕಿ.ಮೀ. ಸಂಚರಿಸಿ ವಿವಿಧ ರಾಜ್ಯಗಳ ೫೦೦೦ಕ್ಕೂ ಹೆಚ್ಚು ಗ್ರಾಮ-ಪಟ್ಟಣ-ನಗರಗಳಿಗೆ ಭೇಟಿ ನೀಡಲಿದೆ. ಐದೂರಥಗಳು ದೇಶಾದ್ಯಂತ ಸಂಚರಿಸಿ ೨೦೨೬ರ ನವೆಂಬರ್ ೨೩ರಂದು ಮರಳಿ ಪುಟ್ಟಪರ್ತಿಯಲ್ಲಿ ಸಮಾಪನಗೊಳ್ಳಲಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಪಿ.ಶಿವಮೂರ್ತಿ ಮಾಹಿತಿ ನೀಡಿದರು.

A grand welcome for the Prema Vahini chariot at Tarikere

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...