Home namma chikmagalur chikamagalur ದಲಿತ ಸಂಘಟನೆಗಳ ಒಕ್ಕೂಟದ ವಿಭಿನ್ನ ಹೋರಾಟ
chikamagalurHomeLatest Newsnamma chikmagalur

ದಲಿತ ಸಂಘಟನೆಗಳ ಒಕ್ಕೂಟದ ವಿಭಿನ್ನ ಹೋರಾಟ

Share
Oplus_153223168
Share

ಚಿಕ್ಕಮಗಳೂರು : ನಗರ ಸಮೀಪದ ಗೌಡನಹಳ್ಳಿ ವಾಸಿ ಮಂಜುನಾಥ್ ಯಾನೆ ಹೇಮಂತ್ ಎಂಬುವವರಿಗೆ ಸೇರಿದ ಜೆ.ಸಿ.ಬಿ ಯನ್ನು ಹೆಚ್.ಡಿ.ಎಫ್.ಸಿ ಬ್ಯಾಂಕ್ ಸೀಜ್ ಮಾಡಿ ಅಕ್ರಮ ಮಾರಾಟ ಮಾಡಿದ್ದು, ಕಳೆದ ೧ ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದರೂ ಹೋರಾಟಗಾರರನ್ನು ನಿರ್ಲ್ಯಕ್ಷಿಸುತ್ತಿರುವ ಜಿಲ್ಲಾಡಳಿತ, ಬ್ಯಾಂಕ್ ಅಧಿಕಾರಿಗಳು, ಪೊಲೀಸ್ ಇಲಾಖೆ, ಜನ ಪ್ರತಿನಿಧಿಗಳ ನಡೆಯನ್ನು ಖಂಡಿಸಿ ವಿಭಿನ್ನ ಚಳುವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ದಲಿತ ಮುಖಂಡ ಮರ್ಲೆಅಣ್ಣಯ್ಯ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ನೊಂದ ಮಂಜುನಾಥ್ ಪರವಾಗಿ ನಗರದ ಎಂ.ಜಿ ರಸ್ತೆಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಎದುರು ಸುಮಾರು ೧ ತಿಂಗಳಿಂದ ನೊಂದವರು ಮತ್ತು ಹೋರಾಟಗಾರರು ಹಗಲು-ರಾತ್ರಿ ಧರಣಿ ಮಾಡಲಾಗುತ್ತಿದ್ದರು ಸಹ ಯಾವುದೇ ಅಧಿಕಾರಿಗಳಿಂದಾಗಲೀ, ಮತ್ತು ಇಲಾಖೆಗಳಿಂದಾಗಲೀ ಹಾಗೂ ಜನ ಪ್ರತಿನಿಧಿಗಳಿಂದಾಗಲೀ ನ್ಯಾಯ ದೊರಕಿರುವುದಿಲ್ಲಎಂದು ಕಿಡಿ ಕಾರಿದರು.

ಮಂಜುನಾಥ್ ಯಾನೆ ಹೇಮಂತ ಒಳ್ಳೆ ರೀತಿ ಬದುಕು ಕಟ್ಟಿಕೊಳ್ಳುವ ಕನಸ್ಸು ಕಟ್ಟಿಕೊಂಡು ಸಾಲ ಮಾಡಿ ೭ಲಕ್ಷ ಮುಂಗಡ ಹಣವನ್ನು ಬ್ಯಾಂಕ್‌ಗೆ ಪಾವತಿಸಿ, ಸುಮಾರು ೧೭ ತಿಂಗಳ ಕಂತುಗಳನ್ನು ಒಟ್ಟು ೧೮ ಲಕ್ಷ ಜೆ.ಸಿ.ಬಿ ಖರೀದಿಗಾಗಿ ಭರಿಸಿದ್ದಾರೆ.

ಕೇವಲ ೨ ಕಂತು ಹಣ ಕಟ್ಟಿದ ಕಾರಣ ಬ್ಯಾಂಕ್‌ನವರು ಏಕಾ ಏಕಿ ನೊಟೀಸ್ ನೀಡದೆ, ಜೆ.ಸಿ.ಬಿಯನ್ನು ಸೀಜ್ ಮಾಡಿ ಅಕ್ರಮ ಮಾರಾಟ ಮಾಡಿರುತ್ತಾರೆ. ೩೩ ಲಕ್ಷ ಬೆಲೆಬಾಳುವ ಕೇವಲ ೧ ವರೆ ವರ್ಷದ ಜೆ.ಸಿ.ಬಿಯನ್ನು ಕೇವಲ ೨೨ ಲಕ್ಷ ರೂ.ಗಳಿಗೆ ಬೇರೆಯವರಿಗೆ ಮಾರಾಟ ಮಾಡಿದ್ದು, ಆರ್.ಬಿ.ಐ ನಿಯಮಗಳನ್ನು ಉಲ್ಲಂಘಿಸಿ, ಮಂಜುನಾಥ್ ಯಾನೆ ಹೇಮಂತರವರ ಕುಟುಂಬಕ್ಕೆ ಜೆ.ಸಿ.ಬಿ ಮತ್ತು ಹಣವನ್ನೂ ಸಹ ಇಲ್ಲದಂತೆ ಮಾಡಿ ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಆರ್ಥಿಕ ದುಸ್ಥಿತಿಗೆ ಕಾರಣರಾಗಿರುವ ಹೆಚ್.ಡಿ.ಎಫ್.ಸಿ ಬ್ಯಾಂಕ್ ಮಾನ್ಯತೆಯನ್ನು ಈ ಕೂಡಲೇ ರದ್ದುಪಡಿಸುವಂತೆ ಒಕ್ಕೂಟ ಒತ್ತಾಯಿಸುತ್ತದೆ ಎಂದರು.

ಮಾ.೦೪ರಂದುಬೆಳಿಗ್ಗೆ ೧೧ಗಂಟೆಗೆ ಹನುಮಂತಪ್ಪ ವೃತ್ತದಿಂದ ವೃತ್ತದಿಂದ ಮೆರವಣೆಗೆಯಲ್ಲಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ಆಡಳಿತ ಮಂಡಳಿಯವರ ಪ್ರತಿಕೃತಿ ಶವ ಯಾತ್ರೆ ನಡೆಸಿ ಬ್ಯಾಂಕ್ ಮುಂದಿಟ್ಟು ಅನಿರ್ಧಿಷ್ಟ ಅವಧಿ ಮುಷ್ಕರದಲ್ಲಿನಡೆಸಲಾಗುವುದೆಂದರು.

ಜಿಲ್ಲಾ ಉಸ್ತುವಾರಿ ಕಛೇರಿ ಮುಂದೆ, ಚಿಕ್ಕಮಗಳೂರು ಶಾಸಕರ ಮನೆಯ ಮುಂದೆ ಮತ್ತು ಮೂಡಿಗೆರೆ ಶಾಸಕರ ಮನೆಯ ಮುಂದೆ ಅನಿರ್ಧಿಷ್ಟ ಅವಧಿ ಮುಷ್ಕರ, ತಮಟೆ ಚಳುವಳಿ, ಕರಪತ್ರ ಚಳುವಳಿ, ಪಂಚಿನ ಮೆರವಣಿಗೆ ಹಾಗೂ ಅರೆಬೆತ್ತಲೆ ಚೆಳುವಳಿ ಮಾಡಲು ಒಕ್ಕೂಟದ ಸಭೆಯು ನಿರ್ಧರಿಸಿದೆ ಎಂದರು.

ಗೋಷ್ಟಿಯಲ್ಲಿ ದಲಿತ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್,ಭೀಮಯ್ಯ,ಕೃಷ್ಣಮೂರ್ತಿ,ರುದ್ರಮ್ಮ,ಬಾಲಕೃಷ್ಭ,ಟಿ.ಎಲ್ ಗಣೇಶ್,ರಘೂ ಇದ್ದರು.

A different struggle of the coalition of Dalit organizations

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...