Home namma chikmagalur chikamagalur ಶಾಸಕ ರಾಜೇಗೌಡರ ಕಣ್ಣೀರು ಕಾಂಗ್ರೆಸ್ ನವರ ಆಕ್ರೋಶ-ಬಿ.ಜೆ.ಪಿಯ ತಲ್ಲಣ
chikamagalurHomeLatest Newsnamma chikmagalur

ಶಾಸಕ ರಾಜೇಗೌಡರ ಕಣ್ಣೀರು ಕಾಂಗ್ರೆಸ್ ನವರ ಆಕ್ರೋಶ-ಬಿ.ಜೆ.ಪಿಯ ತಲ್ಲಣ

Share
Share

ಶೃಂಗೇರಿ: ಶೃಂಗೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಶಾಸಕ ರಾಜೇಗೌಡರ ವಿರುದ್ಧ ಬಿಜೆಪಿ ನಿಗಿ,ನಿಗಿ ಎಂದು ಕೆಂಡ ಕಾರುತ್ತಿದೆ.

ನ್ಯೂಸ್ ಕಿಂಗ್ ಶೃಂಗೇರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಲಡಾಯಿ ಬಗ್ಗೆ ಸುದ್ದಿ ಪ್ರಕಟಿಸಿದೆ.ಮಲೆನಾಡು ಅದರಲ್ಲೂ ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣಕ್ಕೆ ಯಾವ ಜನ ಹಿತವು ಇಲ್ಲ. ಇದು ಕೇವಲ ಅಧಿಕಾರ ದಾಹ ಎನ್ನುವುದು ಗೊತ್ತಿರುವ ವಿಷಯ.

ಕಳೆದ ವಾರ ಆನೆ ದಾಳಿಗೆ ಎರಡು ಜನ ಪ್ರಾಣ ಕಳೆದುಕೊಂಡರು ಇದಕ್ಕಾಗಿ ಬಿಜೆಪಿ ಮತ್ತಿತರ ಸಂಘಟನೆಯವರು ಬೀದಿಗೆ ಇಳಿದು ರಂಪಾಟ ಮಾಡಿದರು. ಮೃತ ದೇಹ ತೆಗೆದುಕೊಂಡು ಹೋಗಲು ಅಡ್ಡಿ ಮಾಡಿದರು ಶಾಸಕ ರಾಜೇಗೌಡರ ವಿರುದ್ಧ ಕೆಂಡ ಕಾರಿದರು

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನವರು ಪ್ರತಿಭಟನೆಯ ಸಭೆ ನಡೆಸಿ ಬಿಜೆಪಿ ಮತ್ತು ಮಾಜಿ ಶಾಸಕ ಜೀವರಾಜ್ ರವರ ನಡವಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜೇಗೌಡರು ಒಂದು ಹೆಜ್ಜೆ ಮುಂದೆ ಹೋಗಿ ಕಣ್ಣೀರು ಸುರಿಸಿ ಜೀವರಾಜ್ ನಡವಳಿಕೆ ಮತ್ತು ಅವರ ನಡೆ,ನುಡಿಯ ಬಗ್ಗೆ ಇಂಚಿಂಚು ಮಾಹಿತಿ ನೀಡಿ ಮುಂದಿನ ಚುನಾವಣೆಯಲ್ಲಿ ಜೀವರಾಜ್ ಸ್ಪರ್ಧೆ ಮಾಡಬಾರದು ನಾನು ಕೂಡ ಇದಕ್ಕೆ ಬದ್ದ ಎಂದಿದ್ದಾರೆ.

ರಾಜೇಗೌಡರ ಕಣ್ಣೀರಿನ ಆಕ್ರೋಶ ಆರ್ಭಟ ನೋಡಿದರೆ ಮುಂದಿನ ಚುನಾವಣೆಗೆ ಮಾರಿ ಹಬ್ಬ ಖಚಿತ ಎನ್ನಿಸುತ್ತಿದೆ. ಅಧಿಕಾರ ಬರುತ್ತದೆ ಹೋಗುತ್ತದೆ ಇದ್ದಾಗ ಜನ ಪರ ಕೆಲಸ ಮಾಡುವ ಜವಾಬ್ದಾರಿ ಬಿಟ್ಟು ಬರೀ ಕಿತ್ತಾಡುತ್ತಾ ಹೋಗುವುದು ಎಷ್ಟರ ಮಟ್ಟಿಗೆ ಸರಿ ಜೀವರಾಜ್ ಈ ಪರಿ ಕಾಡುತ್ತಿರುವುದು ನೋಡಿದರೆ ಮುಂದೆ ಕಷ್ಟ, ಕಷ್ಟ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೇವಲ ಇನ್ನೂರು ಚಿಲ್ಲರೆ ಮತಗಳಿಂದ ಗೆಲುವು ಸಾಧಿಸಿದ ರಾಜೇಗೌಡರ ಬೆನ್ನು ಬಿದ್ದಿರುವುದು ನೋಡಿದರೆ ಮುಂದಿನ ಚುನಾವಣೆ ಇಬ್ಬರಿಗೂ ಅಗ್ನಿ ಪರೀಕ್ಷೆ ಎಂಬುದರಲ್ಲಿ ಎರಡು ಮಾತಿಲ್ಲ.

ಗೆದ್ದವ ಗದ್ದುಗೆ ಹಿಡಿದು ಗಹಿಗಹಿಸಿ ನಕ್ಕರೆ ಸೋತವನು ರಾಜಕೀಯಕ್ಕೆ ಟಾಟ,ಟಾಟ ಎನ್ನಬೇಕು ಏಕೆಂದರೆ ವಯಸ್ಸು ಮತ್ತೆ,ಮತ್ತೆ ಉಕ್ಕಿ ಬರಲ್ಲಾ ಮತ್ತೆ ಕಿತ್ತಾಟ ನಡೆಯುವುದಿಲ್ಲ. ಇದರಲ್ಲಿ ರಾಜೇಗೌಡರು ಎರಡು ಹೆಜ್ಜೆ ಮುಂದಿದ್ದಾರೆ.ಜೀವರಾಜ್ ಕೂಗಾಡಿ ಎರಡು ಹೆಜ್ಜೆ ಹಿಂದೆ ಇದ್ದಾರೆ ಎಂಬ ಅಭಿಪ್ರಾಯ ಜನರಿಂದ ಕೇಳಿ ಬರುತ್ತಿದೆ.

MLA Rajegowda’s tears anger Congress

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...