Home namma chikmagalur chikamagalur ಕೈವಾರ ತಾತಯ್ಯ ವಿಶ್ವ ಶ್ರೇಷ್ಠ ಸಂತ
chikamagalurHomeLatest Newsnamma chikmagalur

ಕೈವಾರ ತಾತಯ್ಯ ವಿಶ್ವ ಶ್ರೇಷ್ಠ ಸಂತ

Share
Share

ಚಿಕ್ಕಮಗಳೂರು: ಮಹಾನ್ ಕಾಲಜ್ಞಾನಿ ಮತ್ತು ತತ್ವಜ್ಞಾನಿ ಶ್ರೀ ಯೋಗಿ ನಾರೇಯಣ ಯತೀಂದ್ರರು (ಕೈವಾರ ತಾತಯ್ಯ) ಕೇವಲ ಒಂದು ಜಾತಿಗೆ, ಧರ್ಮಕ್ಕೆ ಸೀಮಿತರಾದವರಲ್ಲ, ಅವರು ಇಡೀ ಜಗತ್ತಿಗೆ ಮಾದರಿಯಾದ ವಿಶ್ವ ಶ್ರೇಷ್ಠ ಸಂತರು” ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅವರು ಬಣ್ಣಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಕೈವಾರ ತಾತಯ್ಯನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಕೈವಾರ ಪುಣ್ಯಕ್ಷೇತ್ರಕ್ಕೆ ದ್ವಾಪರ ಯುಗದಲ್ಲಿ ‘ಏಕಚಕ್ರ ನಗರ’ ಎಂಬ ಹೆಸರಿತ್ತು. ಪಾಂಡವರು ವನವಾಸದಲ್ಲಿದ್ದಾಗ ಈ ಭಾಗಕ್ಕೆ ಭೇಟಿ ನೀಡಿದ್ದರು. ಅಲ್ಲಿರುವ ಭೀಮಲಿಂಗೇಶ್ವರ ದೇವಸ್ಥಾನವನ್ನು ಭೀಮನೇ ಸ್ಥಾಪಿಸಿದ ಎಂಬ ಇತಿಹಾಸವಿದೆ ಎಂದು ತಿಳಿಸಿದರು.

ತಾತಯ್ಯನವರು ಬಡವರಿಗೆ ಮತ್ತು ಜನಸಾಮಾನ್ಯರಿಗೆ ಭಕ್ತಿ ಹಾಗೂ ಧರ್ಮದ ಶ್ರದ್ಧೆಯನ್ನು ಕಲಿಸಿಕೊಟ್ಟಿದ್ದಾರೆ. ಬಲಿಜ ಜನಾಂಗದವರು ಅವರನ್ನು ಕುಲದೈವದಂತೆ ಪೂಜಿಸಿದರು. ಅವರ ಬೋಧನೆಗಳು ಮತ್ತು ಕಾಲಜ್ಞಾನದ ನುಡಿಗಳು ಸಾರ್ವಕಾಲಿಕವಾಗಿದ್ದು ಎಲ್ಲರಿಗೂ ಅನ್ವಯಿಸುತ್ತವೆ ಎಂದರು.

ಲೋಕದ ನಡವಳಿಕೆಯನ್ನು ವಿಡಂಬಿಸುತ್ತಿದ್ದ ತಾತಯ್ಯನವರು ಮನುಷ್ಯ ಕೆಟ್ಟದಕ್ಕೆ ಬೇಗ ಆಕರ್ಷಿತನಾಗುತ್ತಾನೆ ಎಂಬುದನ್ನು ಮಾರ್ಮಿಕವಾಗಿ ಹೇಳುತ್ತಿದ್ದರು. ಮದ್ಯದ ಅಂಗಡಿಯ ಮುಂದೆ ಜನ ಜಂಗುಳಿ ಸೇರುತ್ತದೆ. ಆದರೆ ಜೀವ ಉಳಿಸುವ ಮಜ್ಜಿಗೆ, ಹಾಲು ಮಾರುವ ಜಾಗದಲ್ಲಿ ಯಾರೂ ಸುಳಿಯುವುದಿಲ್ಲ. ಅಂದರೆ ಲೋಕದಲ್ಲಿ ಒಳ್ಳೆಯ ವಸ್ತುಗಳು ತಿರಸ್ಕಾರಕ್ಕೆ  ಒಳಗಾಗಿ, ಕೆಟ್ಟದ್ದೇ ಮುಖ್ಯವಾಗುತ್ತಿದೆ ಎಂದು ಕೈವಾರ ತಾತಯ್ಯನವರು ಅಂದೇ ಖೇದ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ ಅವರು, ಮನುಷ್ಯನ ಅಂತರಾತ್ಮವನ್ನು ಎಚ್ಚರಿಸುವ ತಾತಯ್ಯನವರ ತತ್ವಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.

ಉಪ ತಹಸೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಲದೇವ ಅಮರ ನಾರಾಯಣರ ಕೃಪೆಯಿಂದ ಬಲಿಜ ಜನಾಂಗದಲ್ಲಿ ಜನಿಸಿದ ಯೋಗಿ ನಾರೇಯಣರು, ಭಗವಂತನ ಸಾಕ್ಷಾತ್ಕಾರ ಪಡೆದ ಮಹಾನ್ ಸಂತ ಹಾಗೂ ಕಾಲಜ್ಞಾನಿಗಳಾಗಿದ್ದರು. ಸುಮಾರು ೧೧೦ ವರ್ಷಗಳ ಕಾಲ ಭಕ್ತಿ ಭಾವದ ಮೂಲಕ ಜನರಿಗೆ ವೇದಾಂತ ವಿಷಯಗಳನ್ನು ಬೋಧಿಸುತ್ತಾ, ದೈವಿಕ ಪವಾಡಗಳನ್ನು ಮಾಡುತ್ತಾ ಸಮಾಜಕ್ಕೆ ಸನ್ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಕಾಲಜ್ಞಾನವನ್ನು ರಚಿಸಿದ ಇವರು ತೋರಿದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು.

ಕೈವಾರ ತಾತಯ್ಯನವರ ಕುರಿತು ಸಾಹಿತಿ ಬಿ.ತಿಪ್ಪೇರುದ್ರಪ್ಪ ಅವರು ಉಪನ್ಯಾಸ ನೀಡಿ, ತಾತಯ್ಯನವರ ಜೀವನದ ಮಹತ್ವದ ಘಟ್ಟಗಳನ್ನು ವಿವರಿಸಿದರು. ಜೀವನದ ಸಂಕಷ್ಟದ ಸಮಯದಲ್ಲಿ ಅಮರೇಶ ನಾರಾಯಣನನ್ನು ಪ್ರಾರ್ಥಿಸಿದ ನಾರಾಯಣಪ್ಪನವರಿಗೆ ಪರದೇಶಪ್ಪ ಸ್ವಾಮಿಗಳ ದರ್ಶನವಾಗಿ, ಅವರಿಂದ ಅಷ್ಟಾಕ್ಷರಿ ಮಂತ್ರೋಪದೇಶ ಲಭಿಸಿತು. ಗುರುಗಳು ನೀಡಿದ ಬೆಣಚುಕಲ್ಲು ಯಾವಾಗ ಬಾಯಲ್ಲಿ ಸಿಹಿಯಾಗುತ್ತದೆಯೋ ಅಂದು ಯೋಗಸಿದ್ಧಿಯಾಗುತ್ತದೆ ಎಂದು ಆಡಿದ್ದ ಮಾತಿನಂತೆ ಅವರಿಗೆ ಸಿದ್ಧಿ ದೊರೆಯಿತು. ತಾತಯ್ಯನವರು ಕಲ್ಲು ಮಣ್ಣಿನ ಗುಡಿಗಿಂತ ಜನ್ಮ ನೀಡಿದ ತಂದೆ-ತಾಯಿಯರನ್ನು ಪೂಜಿಸುವುದೇ ನಿಜವಾದ ಭಕ್ತಿ ಎಂದು ಸಾರಿದರು.

ಸಂಸಾರ ಎಂಬುದು ಗಾಳಿಗೆ ಸಿಕ್ಕ ದೀಪದಂತೆ ಅಸ್ಥಿರವೆಂದು ಭಾವಿಸಿದ ಅವರು, ಲೌಕಿಕ ಜೀವನದಿಂದ ದೂರವಾಗಿ ಕೈವಾರದ ನರಸಿಂಹ ಗುಹೆಯಲ್ಲಿ ಮೂರು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದರು. ಅವರು ಅಂದೇ ನುಡಿದಿದ್ದ ಕಾಲಜ್ಞಾನದ ಮಾತುಗಳಾದ ವ್ಯಾಪಾರದಲ್ಲಿ ದ್ರೋಹ, ಸ್ವಾರ್ಥ ರಾಜಕಾರಣ, ಆಹಾರ ಮಾಲಿನ್ಯ, ಕೃಷಿ ಭೂಮಿ ನಾಶ ಮತ್ತು ಜಾತಿ ಸಂಘರ್ಷಗಳು ಇಂದಿನ ೨೧ನೇ ಶತಮಾನದಲ್ಲಿ ನಿಜವಾಗುತ್ತಿವೆ ಎಂದು ತಿಪ್ಪರುದ್ರಪ್ಪ ಅವರು ಪ್ರತಿಪಾದಿಸಿದರು.

ಬಲಿಜ ಸಮಾಜದ ಜಿಲ್ಲಾಧ್ಯಕ್ಷ ಆನಂದ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ಶೆಟ್ಟಿ, ಟ್ರಸ್ಟಿನ ಖಜಾಂಚಿ ಪೂಜಾರ ಮಂಜಪ್ಪ, ತಾಲ್ಲೂಕು ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಮಹೇಶ್ ಬಾಬು, ಕಾರ್ಯದರ್ಶಿ ಕೆ.ಬಿ.ಗಿರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯ ಹೆಚ್.ವೈ.ಮೋಹನ್ ಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಉಪಸ್ಥಿತರಿದ್ದರು.

Kaivara Tataiah is the greatest saint in the world.

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...